ಹುನಗುಂದ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಫಲಾನುಭವಿಗಳು ಅನ್ನಭಾಗ್ಯದ ಅಕ್ಕಿಯನ್ನು ಇನ್ನು ಮುಂದೆ ಕಾಳಸಂತೆಯಲ್ಲಿ ಮಾರಾಟ ಮಾಡಿದರೇ ೬ ತಿಂಗಳ ಕಾಲ ಬಿಪಿಎಲ್ ಕಾರ್ಡನ್ನು ಸ್ಥಗಿತಗೊಳಿಸಲಾಗುವುದು ಬಾಗಲಕೋಟಿ ಉಪವಿಭಾಗಾಧಿಕಾರಿ ಸಂತೋಷ ಜಗಲಾಸಾರ ಪಡಿತರಿಗೆ ಮತ್ತು ವಿತರಕರಿಗೆ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕ ಮಟ್ಟದ ನ್ಯಾಯಬೆಲೆ ಅಂಗಡಿಯವರಿಗೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಸಿವು ಮುಕ್ತ ಕರ್ನಾಟಕ ಮಾಡುವ ಉದ್ದೇಶದಿಂದ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯು ದಾನ್ಯ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಕಾಳಸಂತೆಯ ದಂಧೆಕೋರರು ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಕಡಿಮೆ ದರದಲ್ಲಿ ತೆಗೆದುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು, ಇದನ್ನು ತಡೆಯುವುದಕ್ಕೋಸ್ಕರ ಸರ್ಕಾರ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೆ ತಂದಿದ್ದು. ಯೋಜನೆಯ ಫಲಾನುಭವಿ ಅನ್ನಭಾಗ್ಯದ ಧಾನ್ಯವನ್ನು ಕಾಳಸಂತೆಕೋರರಿಗೆ ಮಾರಾಟ ಮಾಡುವ ವಿ?ಯ ತಿಳಿದರೇ ತಕ್ಷಣವೇ ಅವರ ಬಿಪಿಎಲ್ ಕಾರ್ಡನ್ನು ೬ ತಿಂಗಳು ರದ್ದುಪಡೆಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಮಾತನಾಡಿ ಪಡಿತರು ದಾನ್ಯಗಳನ್ನು ತಗೆದುಕೊಂಡು ಅನ್ಯ ವ್ಯಕ್ತಿಗಳಿಗೆ ಮಾರಾಟ ಮಾಡುವುದು ಕಂಡು ಬಂದಲ್ಲಿ ತಕ್ಷಣವೇ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.
ಹುನಗುಂದ ತಾಲೂಕಿನ ಆಹಾರ ನಿರೀಕ್ಷಕರಾದ ರಾಜಶೇಖರ್ ತುಂಬಗಿ ಮಾತನಾಡಿ ಪಡಿತರ ಹಂಚಿಕೆಯಲ್ಲಿ ವ್ಯತ್ಯಾಸ ಆದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಯನ್ನು ಅಮಾನತ್ತು ಮಾಡಲಾಗುವುದು ಎಂದು ತಿಳಿಸಿದರು
ಭಾಕ್ಸ್; ತಾಲೂಕಿನ ಕೆಲವೊಂದು ನ್ಯಾಯಬೆಲೆ ಅಂಗಡಿಯ ವಿತರಕರು ಪ್ರತಿ ತಿಂಗಳು, ಪ್ರತಿ ಕಾರ್ಡನಿಂದ ೨ ಕೆಜಿ ಅಕ್ಕಿಯನ್ನು ಕಡಿತಗೊಳಿಸಿ ನೀಡುತ್ತಿದ್ದಾರೆಂದು ಇತ್ತೀಚಗೆ ಪಂಚ ಗ್ಯಾರಂಟಿ ಅನು?ನ ಸಮಿತಿಯ ಕುಂದುಕೊರತೆ ಸಭೆಯಲ್ಲಿ ಬೆಳಕಿಗೆ ಬಂದಿದ್ದು. ಅಂತಹ ನ್ಯಾಯಬೆಲೆ ಅಂಗಡಿಗಳ ವಿತರಕರಿಗೆ ಕಾರಣ ಕೇಳಿ ನೋಟಿಸ್ ನೀಡಿ ಅದರ ಸಂಪೂರ್ಣ ಮಾಹಿತಿ ಪಡೆದು ನನಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಂತೋ? ಜಗಲಾಸಾರ ಉಪವಿಭಾಗಾಧಿಕಾರಿ ಬಾಗಲಕೋಟೆ
ಸಭೆಯಲ್ಲಿ ಹುನಗುಂದ ತಾಲೂಕಿನ ಶಿರಸ್ತೇದಾರ್ ಎಸ್.ಎಂ. ಬಡ್ಡಿ, ಹುನಗುಂದ ಪಿಎಸ್‌ಐ ಸಿದ್ದರೂಢ ಆಲದಕಟ್ಟಿ, ಅಮೀನಗಡ ಪಿಎಸ್‌ಐ ಜ್ಯೋತಿ ವಾಲಿಕಾರ, ಆಹಾರ ನಿರೀಕ್ಷಕ ಶಿವಾನಂದ ಹೊರಗಿನಮಠ, ಆನಂದ ನಿಡಗುಂದಿ ಸೇರಿದಂತೆ ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿ ವಿತರಕರು ಹಾಜರಿದ್ದರು.


