ಇಂಡಿ: ಅಧಿಕಾರಿಗಳು ಸರಿಯಾಗಿ ಕೇಲಸ ಮಾಡಿದಲ್ಲಿ ಸಾರ್ವಜನಿಕರು ನಮ್ಮ ಹತ್ತಿರ ಬರುವುದಿಲ್ಲ. ನಿವೂ ಅವರ ಕೇಲಸಗಳನ್ನು ಸರಿಯಾಗಿ ನಿಗದಿತ ಅವಧಿಯೋಳಗಾಗಿ ಮಾಡಿದಲ್ಲಿ ಇತ್ತ ಮರಳಿ ಬರುವುದಿಲ್ಲ ಇದು ಸ್ಫಷ್ಟ ಇರಲಿ. ಇನ್ನೂ ಮುಂದೆ ಯಾವುದೆ ಕಾರಣಕ್ಕೂ ಹೆಚ್ಚು ಜನ ಜನ ಸಂಪರ್ಕ ಸಭೆಗೆ ಬರದ ಹಾಗೆ ಅಧಿಕಾರಿಗಳು ನೊಡಿಕೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ನಗದ ಮಿನಿವಿಧಾನಸೌಧದಲ್ಲಿ ಎರ್ಪಡಿಸಿ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಧಿಕಾರಿಗಳು ನಿಗದಿತ ಅವಧಿಯೋಳಗಾಗಿ ಕೆಲಸ ಮಾಡಿಕೊಟ್ಟರೆ ಅವರು ಬರುವ ಪ್ರಮೇಯೆ ಬರುವುದಿಲ್ಲ. ಸುಮ್ಮನೆ ಜನರಿಗೆ ಇಂದು ಬಾ ನಾಳೆ ಬಾ ಎಂದು ಎಡತಾಕಿಸಬಾರದು. ಹೆಣ್ಣು ಮಕ್ಕಳು, ರೈತರು, ವಿಕಲಚೇತನರು ಸೇರಿದಂತೆ ಗ್ರಾಮಿಣ ನಗರದ ನೂರಾರು ಸಂಖ್ಯೇಯಲ್ಲಿ ಜನ ತಮ್ಮ ಕುಂದು ಕೊರತೆಗಳನ್ನು ತೆಗೆದುಕೊಂಡು ಬಂದಿದ್ದರು. ಇದರಲ್ಲಿ ಕೇಲವು ಸಮಸ್ಯಗಳಿಗೆ ಪರಿಹಾರ ಸೂಚಿಸಿದರು ಇನ್ನೂ ಕೆಲವು ಸಮಸ್ಯಗಳಿಗೆ ರಸ್ತೆ, ಮನೆ, ಸರ್ಕಾರ ವಿವಿಧ ನಿಗಮನಗಳಲ್ಲಿ ಸಹಾಧನದ ರೂಪದಲ್ಲಿ ಕೊಡ ಮಾಡುವ ಸಾಲ ಸೌಲಭ್ಯ, ಬೆಳೆ ಪರಿಹಾರ, ಕಾಲುವೆಗಳಿಗೆ ನೀರು ಹರಿಸುವ ಕುರಿತು, ಹೆಚ್ಚಿನ ಬಸ್ ಒಡಿಸುವ ಬಗ್ಗೆ ಸೇರಿದಂತೆ ಹಿಗೆ ಹತ್ತು ಹಲವು ಸಮಸ್ಯಗಳನ್ನು ಶಾಸಕ ಮುಂದೆ ತೊಡಿಕೊಂಡರು. ಆಗ ಈ ಎಲ್ಲ ಸಮಸ್ಯಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಸೂಚಿಸಬೇಕು ಎಂದು ಆಯಾ ಇಲಾಖೆ ಅಧಿಕಾರಿಳಿಗೆ ಸೂಚಿಸಿದರು.
ಸಭೆಯಲ್ಲಿ ಕಂದಾಯ ಉವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಪೊಲೀಸ ಉಪವಿಭಾಗಾಧಿಕಾರಿ ಸದಾಶಿವ ಕಟ್ಟಿಮನಿ, ತಹಸಿಲ್ದಾರ ಬಿ.ಎಸ್.ಕಡಕಬಾವಿ, ತಾಪಂ ಇಓ ಡಾ| ಭೀಮಾಶಂಕರ ಕನ್ನೂರ, ಯುಕೆಪಿ ಅಧಿಕಾರಿ ಮನೋಜಕುಮಾರ ಗಡಬಳ್ಳಿ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ತೊಟಗಾರಿಕೆ ಅಧಿಕಾರಿ ಎಚ್,ಎಸ್.ಪಾಟೀಲ, ಪಿಆರ್ಡಿ ಶಿವಾಜಿ ಬನಸೋಡೆ ಸೇರದಂತೆ ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


