ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ರಾಕೇಶ ಮೈಗೂರ ಅವಿರೋಧವಾಗಿ ಆಯ್ಕೆ

Hasiru Kranti
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ರಾಕೇಶ ಮೈಗೂರ ಅವಿರೋಧವಾಗಿ ಆಯ್ಕೆ
WhatsApp Group Join Now
Telegram Group Join Now

ಅಥಣಿ: ಸಂಘಟನಾತ್ಮಕವಾಗಿ ಸಂಘದ ಎಲ್ಲ ಸದಸ್ಯರ ಹಿತ ಕಾಪಡಲು ಹಾಗೂ ಸದಸ್ಯರಿಗೆ ಸರಕಾರದಿಂದ ಸಿಗಬೇಕಾದ ಸವತ್ತುಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರೇಯತ್ನ ಮಾಡುತ್ತೇನೆ. ನನಗೆ ಅವಿರೋಧವಾಗಿ ಆಯ್ಕೆ ಮಾಡಿದ ಸಂಘದ ಎಲ್ಲ ಸದಸ್ಯರಿಗೆ ಗೌರವಪೂರ್ವಕ ಅಭಿನಂಧನೆ ಸಲ್ಲಿಸುತ್ತೇನೆ ಎಂದು ನೂತನ ಅಧ್ಯಕ್ಷ ರಾಕೇಶ ಮೈಗೂರ ಹೇಳಿದರು.

ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಥಣಿ ತಾಲ್ಲೂಕು ಘಟಕಕ್ಕೆ ರಾಕೇಶ ಮೈಗೂರ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇತರ ಪಧಾಧಿಆರಿಗಳಾದ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಹೇಬ ತೆಲಸಂಗ, ಖಜಾಂಚಿಯಾಗಿ ಚಂದ್ರಶೇಖರ ತೇವರಟ್ಟಿ, ಉಪಾಧ್ಯಕ್ಷ ಸಿದ್ದರಾಜು ಗಾಲಿ, ಪ್ರಕಾಶ ಪೂಜಾರಿ, ಕಾರ್ಯದರ್ಶಿಗಳಾಗಿ ಪರಶುರಾಮ ನಂದೇಶ್ವರ, ಶ್ರೀಶೈಲ ಮಾಳಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕಾರ್ಯಕಾರಿಣಿ ಸದಸ್ಯರಾಗಿ ಜಗದೀಶ ಖೋಬ್ರಿ, ವಿಜಯಕುಮಾರ ಅಡಹಳ್ಳಿ, ರಮೇಶ ಬಾದವಾಡಗಿ, ಮಹಾಂತೇಶ ಕೆಂಚಣ್ಣವರ, ಮೋಹನ ಪಾಠಣಕರ, ಸುಭಾಷ ಕಾಂಬಳೆ, ಸದಾನಂದ ಮಾಡಗ್ಯಾಳ ಆಯ್ಕೆಗೊಂಡರು. ಕಾ.ನಿ.ಪ ಸಂಘದ ರಾಜ್ಯ ಕಾರ್ಯದರ್ಶಿ ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಣಿ ಸದಸ್ಯ ಮಲ್ಲಿಕಾರ್ಜುನ ಗೊಂಧಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಮಠದ ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಕುಂತಿನಾಥ ಕಲ್ಮನಿ, ಭೀಮಪ್ಪ ಕಿಚಡಿ, ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಬಸವರಾಜ ಚಮಕೇರಿ, ಸುಕುಮಾರ ಬನ್ನೂರೆ ಸೇರಿದಂತೆ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article