22 ಲಕ್ಷ ರೂ.ಗಳ ರಸ್ತೆ ಡಾಂಬರಿಕರಣ ಕಾಮಗಾರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್ ಭೂಮಿ ಪೂಜೆ

Hasiru Kranti
22 ಲಕ್ಷ ರೂ.ಗಳ ರಸ್ತೆ ಡಾಂಬರಿಕರಣ ಕಾಮಗಾರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್ ಭೂಮಿ ಪೂಜೆ
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
WhatsApp Group Join Now
Telegram Group Join Now

ಅಥಣಿ: ಅಥಣಿ ಪಟ್ಟಣದ ಸಮಗ್ರ ಅಭಿವೃದ್ದಿ ಮಾಡಲು ಶಾಸಕ ಲಕ್ಷ್ಮಣ ಸವದಿ ಕಟಿಬದ್ದರಾಗಿದ್ದು, ಅವರ ಕಾರ್ಯಗಳಿಗೆ ಬೆಂಬಲವಾಗಿ ಯವತ್ತು ಪುರಸಭೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದ್ದಾರೆ, ಪಟ್ಟಣದ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಜೊಡು ಕೆರೆ ಅಭಿವೃದ್ದಿ ಹಾಗೂ ನಾಲಾ ನಿರ್ಮಾಣದ ಪ್ರಮುಖ 35 ಕೋಟಿ ರೂ.ಗಳ ಕಾಮಗಾರಿಗೆ ಸದ್ಯದಲ್ಲೆ ಚಾಲನೆ ನೀಡಲಿದ್ದಾರೆ ಎಂದು ಸ್ಥಾಯಿ ಸಮಿತಿ ಅದ್ಯಕ್ಷ ದತ್ತಾ ವಾಸ್ಟರ ಹೇಳಿದರು.

ಅಥಣಿ ಪಟ್ಟಣದ ವಾರ್ಡ ನಂ 15ರಲ್ಲಿ ಗುರುವಾರ 22 ಲಕ್ಷ ರೂ.ಗಳ 2020-21ನೇ ಸಾಲಿನ 15ನೇ ಹಣಕಾಸು ಅಡಿಯಲ್ಲಿ ಹನುಮಾನ ದೇಸಸ್ಥಾನದಿಂದ ಬಸವೇಶ್ಚರ ವೃತ್ತದ ವರೆಗಿನ ರಸ್ತೆ ಅಭಿವೃದ್ದಿ ಹಾಗೂ ಡಾಂಬರಿಕರಣ ಕಾಮಗಾರಿಗೆ ಕಾಂಗ್ರೇಸ್ ಯುವ ಮುಖಂಡ ಚಿದಾನಂದ ಸವದಿ ಹಾಗೂ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ ಭೂಮಿ ಪೂಜೆ ನೆರವೇರಿಸಿದರು
ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ ನಮ್ಮ ತಂದೆ ಶಾಸಕ ಲಕ್ಷ್ಮಣ ಸವದಿ ಅವರು ಅಥಣಿ ಪಟ್ಟಣವನ್ನು ರಾಜ್ಯದಲ್ಲೆ ಮಾದರಿ ತಾಲೂಕು ಕೇಂದ್ರವನ್ನಾಗಿ ಮಾಡಲು ಪ್ರಾಮಾಣಿಕ ಪ್ರೇಯತ್ನ ಮಾಡುತ್ತಿದ್ದು, ಅವರಿಗೆ ಸ್ಥಳಿಯ ಪುರಸಭೆ ಚುನಾಯಿತ ಪ್ರತಿನಿಧಿಗಳು ಅತಿ ಹೆಚ್ಚು ಸಹಕಾರ ಮಾಡುತ್ತಿದ್ದಾರೆ. ಅಲ್ಲದೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಅಭಿವೃದ್ದಿಯ ವಿಷಯದಲ್ಲಿ ಎಲ್ಲರೂ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಈ ವೇಳೆ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ, ಸದಸ್ಯರಾದ ಸಂತೋಷ ಸಾವಡಕರ, ರಾಜೂ ಗುಡೊಡಗಿ, ಸೈಯದ ಅಮೀನ ಗದ್ಯಾಳ, ಮಲ್ಲೇಶ ಹುದ್ದಾರ, ಮಲ್ಲಿಕಾರ್ಜುನ ಬುಟಾಳೆ, ಉದಯ ಸೋಳಸಿ, ವಿಲೀನರಾಜ ಯಳಮಲ್ಲೆ, ಮುಖಂಡರಾದ ರಾಮನಗೌಡ ಪಾಟೀಳ, ನರಸು ಬಡಕಂಬಿ ಬಾಬು ಖೇಮಲಾಪೂರ, ರವಿ ಬಡಕಂಬಿ, ರಾಜೂ ಬುಲಬುಲೆ, ಬೀರಪ್ಪ ಯಕ್ಕಂಚಿ, ಪ್ರಥಮ ದರ್ಜೇ ಗುತ್ತಿಗೆದಾರ ಮಯೂರ ಸಿಂಗೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು

WhatsApp Group Join Now
Telegram Group Join Now
Share This Article