ಹುಕ್ಕೇರಿ ತಾಲುಕಿನ ರಾಜಕೀಯ ರಹಿತ ಸಹಕಾರಿ ಸಂಘಗಳು ರಾಜ್ಯಕ್ಕೆ ಮಾದರಿ : ರಮೇಶ ಕತ್ತಿ

Hasiru Kranti
ಹುಕ್ಕೇರಿ ತಾಲುಕಿನ ರಾಜಕೀಯ ರಹಿತ ಸಹಕಾರಿ ಸಂಘಗಳು ರಾಜ್ಯಕ್ಕೆ ಮಾದರಿ : ರಮೇಶ ಕತ್ತಿ
WhatsApp Group Join Now
Telegram Group Join Now

ಸಹಕಾರಿ ರಂಗದಲ್ಲಿ ರಾಜಕಾರಣ ಬೆರೆಸುವ ಹುನ್ನಾರ, ಕಳವಳಕರ ಸಂಗತಿ

ಹುಕ್ಕೇರಿ: ಹಿರಿಯರ ದೂರದೃಷ್ಠಿಯಿಂದ ಎಲ್ಲ ಸಮುದಾಯದ ಹಿತಬಯಸಿ ಹೋರಾಟದಿಂದ ಸ್ಥಾಪನೆಯಾದ ಸಹಕಾರ ಸಂಘಗಳನ್ನು ಇಂದು ರಾಜಕೀಯ ಬೆರೆಯುತ್ತಿರುವದರಿಂದ ಹೋರಾಟ ಮಾಡಿ ಉಳಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ಹುಕ್ಕೇರಿ ಪಟ್ಟಣದ ವಿಶ್ವರಾಜ ಸಭಾಭವನದಲ್ಲಿ ಹಮ್ಮಿಕೊಂಡ ಬಿಡಿಸಿಸಿ ಬ್ಯಾಂಕಿಗೆ ಹುಕ್ಕೇರಿ ತಾಲೂಕಿನಿಂದ ೯ ನೇ ಸಲ ನಿರ್ದೇಶಕರಾಗಿ ಆಯ್ಕೆಯಾದ ರಮೇಶ ಕತ್ತಿ ಅವರಿಗೆ ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರಿಗೆ ಹುಕ್ಕೇರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಆಶ್ರಯದಲ್ಲಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಹುಕ್ಕೇರಿ ತಾಲೂಕಿನ ಜನತೆಯಲ್ಲಿ ಸಹಕಾರಿ ಸಂಘಗಳನ್ನು ತಾಯಿ ಸ್ಥಾನದಲ್ಲಿ ಕಾಣುವ ಸಂಪ್ರದಾಯ ರಕ್ತದಲ್ಲಿ ಬಂದಿದೆ. ಮನೆಗಳ ದೀಪ ಆರಿಸುವ ಸಂಸ್ಕ್ರತಿ ನಮದಲ್ಲ. ಆದರೆ ಇಂದು ಹೊರಗಿನವರು ರಾಜಕೀಯ ಬೆರಸುವ ವ್ಯವಸ್ಥೆ ಮಾಡುತ್ತಿರುವ ಕಳವಳಕರ ಸಂಗತಿ ಎಂದ ಅವರು ಅನ್ನ ನೀಡುವ ರೈತ ಕುಲದ ಸಂಸ್ಥೆಗಳ ಮೇಲೆ ಯಾರಾದರೂ ಕಣ್ಣು ಹಾಕಿದರೆ ಕತ್ತಿ ಮತ್ತು ಪಾಟೀಲ ಕುಟುಂಭದ ೬ ಜನರು ಸೆಡ್ಡು ಹೊಡೆದು ಸ್ವಾಭಿಮಾನದ ಮೂಲಕ ಉತ್ತರ ನೀಡುತ್ತೇವೆಂದರು.

ಕಳೆದ ೪೫ ವರ್ಷಗಳ ನಿರ್ದೇಶಕನಾಗಿ ಆಯ್ಕೆಯಾದಾಗ ಹುಕ್ಕೇರಿ ತಾಲೂಕಿನ ೩೧ ಪಿಕೆಪಿಎಸ್ ನಲ್ಲಿ ೧೭ ಸಾವಿರ ರೈತ ಸದಸ್ಯರಿಗೆ ೧೩ ಕೋಟೀ.೬೧ ಲಕ್ಷರು ಬೆಳೆಸಾಲ ಪಡೆದುಕೊಂಡಿದ್ದರು. ಇಂದು ೯೨ ಸಂಘಗಳ ಮೂಲಕ ೫೪ ಸಾವಿರ ರೈತ ಸದಸ್ಯರು ಶೂನ್ಯ ಬಡ್ಡಿದರದಲ್ಲಿ ೪೦೦ ಕೋಟಿ ಸಾಲ ಪಡೆದುಕೊಂಡು ೩೮೦ ಕೋಟಿ ಸಾಲ ಮನ್ನಾ ಸೌಲಭ್ಯ ಪಡೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕಿಗೆ ೨೫ ವರ್ಷಗಳ ಹಿಂದೆ ಅಧ್ಯಕ್ಷನ್ನಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ೫೪೪ ಕೋಟಿ ದುಡಿಯುವ ಬಂಡವಾಳದಿಂದ ೬೮೦೦ ಕೋಟಿ ಹೆಚ್ಚಿಸಿ ಲಾಭದತ್ತ ತಂದು ಬೆಳೆಸಿದ ತೃಪ್ತಿ ನನಗಿದೆ ಎಂದರು.

ಸಹಕಾರ ಸಂಘಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರದ ಸೌಲಭ್ಯ ರೈತರ ಮನೆ ಮನೆಗೆ ಮುಟ್ಟಿಸುವ ಹಾಗೂ ನನಗೆ ವಿರೋಧವಾಗಿ ಮತ ಚಲಾಯಿಸಿದ ಸಂಘಗಳಿಗೂ ಸಾಲ ಮರುಪಾವತಿ ವ್ಯವಸ್ಥೆಯನ್ನ ಉಸಿರು ಇರುವರೆಗೂ ಮುಂದುವರೆಸಿಕೊಂಡುವ ಹೋಗುವದಾಗಿ ರೈತ ಸದಸ್ಯರಿಗೆ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎ.ಬಿ ಪಾಟೀಲ ಮಾತನಾಡಿ ಸ್ವಾಭಿಮಾನದ ಮೂಲಕ ಸಹಕಾರಿ ಸಂಘಗಳನ್ನು ಉಳಿಸಿಕೊಂಡಿರುವ ಜನತೆಗೆ ಕೃತಜ್ಞತೆ ಸಲ್ಲಿಸಿದರು.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಸತ್ಯಪ್ಪಾ ನಾಯಿಕ ಪ್ರಾಸ್ತಾವಿಕಬಾಗಿ ಮಾತನಾಡಿದರು.
ಶಾಸಕ ನಿಖಿಲ್ ಕತ್ತಿ, ವಿದ್ಯುತ್ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಎಪಿಎಮ್ ಸಿ ಅಧ್ಯಕ್ಷ ಮಹಾದೇವ ಜಿನರಾಳಿ, ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ದುರದುಂಡಿ ಉಪಾದ್ಯಕ್ಷ ಲಕ್ಷ್ಮಣ ಮುನ್ನೋಳಿ, ಪಿಕಾರ್ಡ ಬ್ಯಾಂಕಿನ ಅಧ್ಯಕ್ಷ ದುರದುಂಡಿ ಪಾಟೀಲ, ಎಪಿಎಮ್ ಸಿ ಅಧ್ಯಕ್ಷ ಮಹಾದೇವ ಜಿನರಾಳೆ, ಶಿವಾನಂದ ಮುಡಸಿ ಕೆಂಪಣ್ಣ ವಾಸೇದಾರ ಮಹಾದೇವ ಕ್ಷೀರಸಾಗರ ಗಜಾನನ ಕ್ವಳಿ, ಪವನ ಕತ್ತಿ ಬಸವರಾಜ ಹುಂದ್ರಿ, ಲಾಜಮ ನಾಯಿಕವಾಡಿ ರಾಜು ಮುನ್ನೋಳಿ, ರಾಜು ಬಿರಾದಾರಪಾಟೀಲ, ಎಚ್.ಎಲ್ ಪೂಜೇರಿ ಶ್ರೀಶೈಲ್ ಮಠಪತಿ. ಮತ್ತಿತರರು ಉಪಸ್ಥಿತರಿದ್ದರು. ಗುರು ಕುಲಕರ್ಣಿ ನಿರೂಪಿಸಿದರು. ಸುರೇಶ ಜಿನರಾಳಿ ವಂದಿಸಿದರು,

ಬೆಳಗಾವಿ ಜಿಲ್ಲಾ ಸಹಕಾರಿ ರಂಗದಲ್ಲಿ ೪೫ ವರ್ಷಗಳ ಕಾಲ ಉತ್ತಮ ಆಡಳಿತ ನಿರ್ವಹಿಸಿದ ಆತ್ಮ ತೃಪ್ತಿ,ಯಿದ್ದು ತಾಲೂಕಿನ ರೈತರ ಸಹಕಾರಿ ಸಂಘಗಳ ಮೇಲ್ವಿಚಾರಣೆಯೊಂದಿಗೆ ಮನೆ ಮನೆಗೆ ಸಾಲ ಸೌಲಭ್ಯ ಮುಟ್ಟಿಸುವ ವ್ಯವಸ್ಥೆಯನ್ನ ಕೈಬಿಡುವದಿಲ್ಲ.

-ರಮೇಶ ಕತ್ತಿ. ಡಿಸಿಸಿ ಬ್ಯಾಂಕ ಬೆಳಗಾವಿ.

ಇದೆ ಸಂಧರ್ಭದಲ್ಲಿ ಬಿಜೆಪಿ ವತಿಯಿಂದ ಮಾಜಿ ಪ್ರದಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಹುಟ್ಟು ಹಬ್ಬದ ಪ್ರಯುಕ್ತ ಉಜ್ವಲ್ ಯೋಜನೆಯಡಿ ಮಹಿಳೆಯರಿಗೆ ಗ್ಯಾಸ ವಿತರಿಸಲಾಯಿತು.

 

 

WhatsApp Group Join Now
Telegram Group Join Now
Share This Article