ಗ್ರಾಹಕರ ಹಕ್ಕು, ಜವಾಬ್ದಾರಿ ಅರಿವು ಹೊಂದಿ : ನ್ಯಾ. ರಾಜೇಶ್ ಎನ್.ಹೊಸಮನೆ

A B
By A B
ಗ್ರಾಹಕರ ಹಕ್ಕು, ಜವಾಬ್ದಾರಿ ಅರಿವು ಹೊಂದಿ : ನ್ಯಾ. ರಾಜೇಶ್ ಎನ್.ಹೊಸಮನೆ
WhatsApp Group Join Now
Telegram Group Join Now

ಬಳ್ಳಾರಿಯಲ್ಲಿ ರಾಷ್ಟಿಯ ಗ್ರಾಹಕರ ದಿನಾಚರಣೆ

ಬಳ್ಳಾರಿ,ಡಿ.25.,:- ಗ್ರಾಹಕರು ತಮಗಿರುವ ಹಕ್ಕುಗಳ ಬಗ್ಗೆ ಜವಾಬ್ದಾರಿ ಮತ್ತು ಅರಿವು ಹೊಂದಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಆಹಾರ ಸುರಕ್ಷತಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ “ಡಿಜಿಟಲ್ ನ್ಯಾಯದ ಮೂಲಕ ಕಾರ್ಯಕ್ರಮ ಮತ್ತು ತ್ವರಿತ ನ್ಯಾಯ ವಿತರಣೆ’’ ಎಂಬ ಘೋಷವಾಕ್ಯದಡಿ  ನಗರದ ಡಾ.ರಾಜ್ ಕುಮಾರ್ ರಸ್ತೆಯ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟಿçÃಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ರಾಷ್ಟಿçÃಯ ಗ್ರಾಹಕ ಸಂರಕ್ಷಣಾ ಕಾಯ್ದೆ 1986 ಜಾರಿಗೆ ಬಂದ ಹಿನ್ನೆಲೆಯಲ್ಲಿ ಪ್ರತಿವರ್ಷ ಡಿ.24ರಂದು ರಾಷ್ಟಿçÃಯ ಗ್ರಾಹಕ ದಿನವನ್ನು ಆಚರಿಸಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಗ್ರಾಹಕ ಕಾಯ್ದೆ, ಹಕ್ಕುಗಳ ಕುರಿತು ಜಾಗೃತಿ ಹೊಂದಬೇಕು ಎಂದರು.
ಸಮಾಜದಲ್ಲಿ ಡಿಜಿಟಲ್ ಖರೀದಿ ಹೆಚ್ಚಾಗಿದ್ದು, ಆನ್‌ಲೈನ್ ಮೂಲಕ ಅತಿ ಹೆಚ್ಚು ವಂಚನೆಗಳು ಆಗುತ್ತಿವೆ. ಈ ಕುರಿತು ಎಚ್ಚರಿಕೆಯಿಂದ ವ್ಯವಹರಿಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಮಬ್ರಹ್ಮಂ ಅವರು ಮಾತನಾಡಿ, ಕೇಂದ್ರ ಸರ್ಕಾರ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು 1986ರ ಗ್ರಾಹಕ ಸಂರಕ್ಷಣಾ ಕಾಯಿದೆ 2019ರಡಿ ಗ್ರಾಹಕರ ಹಕ್ಕುಗಳನ್ನು ಒದಗಿಸಲಾಗಿದೆ. ಹಣ ನೀಡಿ ಪಡೆಯುವ ಪ್ರತಿಯೊಂದು  ವಸ್ತುವಿನ ಗುಣಮಟ್ಟ, ಬೆಲೆ, ದಿನಾಂಕ, ಮುಕ್ತಾಯಗೊಳ್ಳುವ ದಿನ ಸೇರಿದಂತೆ ಎಲ್ಲಾ ಅಂಶಗಳನ್ನು ಪರಿಶೀಲಿಸುವ ಮೂಲಕ ವಸ್ತುವಿನ ಗುಣಮಟ್ಟ ಖಾತ್ರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾಹಕರಿಗಿರುವ ಹಕ್ಕು, ಕಾಯ್ದೆಗಳ ಕುರಿತು ಶಾಲೆ, ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ  ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಕಾನೂನು ಮಾಪನ ಶಾಸ್ತç ಇಲಾಖೆಯ ಸಹಾಯಕ ನಿಯಂತ್ರಕ ಮನೋಜ್ ಕುಮಾರ್ ಅವರು ಮಾತನಾಡಿ, ಗ್ರಾಹಕರು ಮೋಸದ ಬಗ್ಗೆ ಸಂಶಯ ಕಂಡುಬAದಲ್ಲಿ ಅದನ್ನು ಖಚಿತಪಡಿಸಿಕೊಳ್ಳುವ ಹಕ್ಕಿದೆ. ಹಾಗಾಗಿ ಪ್ರತಿ ತೂಕದ ಯಂತ್ರಗಳನ್ನು ಪರಿಶೀಲನೆ ಮಾಡಿ ವಸ್ತುಗಳ ಖರೀದಿ ಮಾಡಬೇಕು. ಪದಾರ್ಥಗಳ ನಿವ್ವಳ ತೂಕವನ್ನು 1ಕೆಜಿ ಗೆ ಎಷ್ಟು ಗ್ರಾಂ ಬರುತ್ತದೆ ಮತ್ತು ವಸ್ತುಗಳ ಮೇಲೆ ಬರೆದಿರುವ ವಿಷಯವನ್ನು ಗ್ರಾಹಕರು ತಿಳಿದಿರಬೇಕು ಎಂದು ಹೇಳಿದರು.
ಹಿರಿಯ ವಕೀಲರಾದ ಅಂಕಲಯ್ಯ ಅವರು ಮಾತನಾಡಿ, ಗ್ರಾಹಕರು ಯಾವುದೇ ವಸ್ತು, ಸರಕುಗಳನ್ನು ಖರೀದಿಸುವ ಸಂದರ್ಭದಲ್ಲಿ ವಸ್ತುವಿನ ಗುಣಮಟ್ಟ, ಅವಧಿ ಇವನ್ನೆಲ್ಲಾ ಕಡ್ಡಾಯವಾಗಿ ಪರಿಶೀಲಿಸಿ ರಶೀದಿ ಪಡೆದುಕೊಳ್ಳಬೇಕು. ಖರೀದಿಸಿದ ವಸ್ತುವಿನ ಗುಣಮಟ್ಟ ಕಳಪೆ ಮತ್ತು ದೋಷಪೂರಿತವಾಗಿದರೆ ಅಂತಹ ಸಂದರ್ಭದಲ್ಲಿ ಗ್ರಾಹಕರು ರಶೀದಿಯನ್ನು ಗ್ರಾಹಕರು ಆಯೋಗಕ್ಕೆ ಕಳುಹಿಸಿ ದೂರು ಸಲ್ಲಿಸಿದರೆ ಗ್ರಾಹಕರಿಗೆ ಸೂಕ್ತ ಪರಿಹಾರ ಒದಗಿಸಬಹುದು ಎಂದು ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸಕೀನ ಅವರು ಮಾತನಾಡಿ, ಗ್ರಾಹಕರು ಗ್ರಾಹಕರ ಹಕ್ಕುಗಳ ಬಗ್ಗೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಬಳ್ಳಾರಿಯ ಹಿರಿಯ ವಕೀಲರಾದ ಎನ್.ಪ್ರಕಾಶ್ ಅವರು, ‘ಡಿಜಿಟಲ್ ನ್ಯಾಯದ ಮೂಲಕ ಕಾರ್ಯಕ್ರಮ ಮತ್ತು ತ್ವರಿತ ನ್ಯಾಯ ವಿತರಣೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ, ಮಾರಾಟಗಾರರು ಗ್ರಾಹಕರನ್ನು ದೇವರೆಂದು ತಿಳಿಯುತ್ತಾರೆ. ಡಿಜಿಟಲೀಕರಣದ ಮೂಲಕ ದೇಶ-ವಿದೇಶಗಳಿಂದ ವಸ್ತುಗಳನ್ನು ಖರೀದಿ ಮಾಡಲಾಗುತ್ತಿದೆ. ನಾವು ನೀಡಿದ ಹಣಕ್ಕೆ ಕಳಪೆ ಗುಣಮಟ್ಟ ವಸ್ತುಗಳು ಬಂದಲ್ಲಿ ದೂರು ಸಲ್ಲಿಸಬಹುದು ಮತ್ತು ಆನ್‌ಲೈನ್ ಪೇಮೆಂಟ್ ಮಾಡುವಾಗ ಜಾಗರೂಕರಾಗಿಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯರಾದ ಮಾರ್ಲಾ ಶಶಿಕಲಾ, ಬಳ್ಳಾರಿ ಅನೌಪಚಾರಿಕ ಪಡಿತರ ಪ್ರಾದೇಶ ಸಹಾಯಕ ನಿರ್ದೇಶಕಿ ಹೆಚ್.ಹೊನ್ನಮ್ಮ, ನ್ಯಾಯ ಬೆಲೆ ಅಂಗಡಿಯ ಏಜೆಂಟರು, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article