ಮೂಡಲಗಿ : ಹಳೆಯ ಕಾಲದ ಸರಳ ಮತ್ತು ಪ್ರಕೃತಿಪರ ಜೀವನದಿಂದ ತಂತ್ರಜ್ಞಾನಾಧಾರಿತ ಜೀವನಕ್ಕೆ ಬದಲಾವಣೆ ಕಂಡಿದೆ. ರೈತರು ತಮ್ಮ ಪರಿಶ್ರಮದಿಂದ ಆಹಾರ ಸರಬರಾಜಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಶಾಲೆಯ ಪ್ರಭಾರಿ ಪ್ರಧಾನ ಗುರುಗಳಾದ ಎಸ್.ಬಿ ಪಾಟೀಲ ಹೇಳಿದರು.
ತಾಲೂಕಿನ ಹಳ್ಳೂರ ಗ್ರಾಮದ ವಿಜಯನಗರ ಶಾಲೆಯಲ್ಲಿ ರೈತ ದಿನಾಚರಣೆ ಅಂಗವಾಗಿ ಆಕ್ಸಿಜನ ಕ್ಲಬ್ ಅಡಿಯಲ್ಲಿ ಬರುವ ಪರಸ್ಪರ ಅವಲಂಬನೆ ಚಟುವಟಿಕೆಗೆ ಸಂಬಂಧಿಸಿದಂತೆ ಪರಸ್ಪರ ಅವಲಂಬನೆಯಾಗುವ ಭೂಮಿ, ಜಾನುವಾರು ಮತ್ತು ಹಳ್ಳಿಯ ಸೊಗಡು ಕೃಷಿ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳು ಅತ್ಯಂತ ಸುಂದರವಾಗಿ ನೈಜವಾಗಿ ಪ್ರತಿ ಬಿಂಬಿಸುವಂತೆ ಪ್ರದರ್ಶನ ಮತ್ತು ಪಾತ್ರಾಭಿನಯ ಮಾಡಿದರು. ಕಾರ್ಯಕ್ರಮದಲ್ಲಿ ಚಟುವಟಿಕೆಯ ಕುರಿತು ಶಾಲೆಯ ಅತಿಥಿ ಶಿಕ್ಷಕರಾದ ಎಸ್. ಬಿ ಇಟ್ನಾಳ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ವಿ.ಕೆ ಪಾದಗಟ್ಟಿ, ಎಸ್.ಎಂ ಶೇರೆಗಾರ, ಕೆ.ಕೆ ಐದಮನಿ ಉಪಸ್ಥಿತರಿದ್ದರು. ಶಾಲೆಯಲ್ಲಿ ಆಯೋಜಿಸಿದ್ದ ವಿಶೇ? ಕಾರ್ಯಕ್ರಮಕ್ಕೆ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹರ್ಷ ವ್ಯಕ್ತಪಡಿಸಿದರು.
“ರೈತ ದಿನಾಚರಣೆ ವಿಶೇಷ ರೀತಿಯಲ್ಲಿ ಆಚರಣೆ”


