ಶಾಲೆಗಳ ಉನ್ನತಿಕರಣದಿಂದ  ವಿದ್ಯಾರ್ಥಿಗಳ ಭವಿಷ್ಯ ಉಜ್ವಲ : ಬಾಬಾಸಾಹೇಬ ಪಾಟೀಲ 

Hasiru Kranti
ಶಾಲೆಗಳ ಉನ್ನತಿಕರಣದಿಂದ  ವಿದ್ಯಾರ್ಥಿಗಳ ಭವಿಷ್ಯ ಉಜ್ವಲ : ಬಾಬಾಸಾಹೇಬ ಪಾಟೀಲ 
WhatsApp Group Join Now
Telegram Group Join Now
ನೇಸರಗಿ := ಕ್ಷೇತ್ರದ ಶಾಲಾ ಕಾಲೇಜುಗಳ ಉನ್ನತಿಕರಣದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಭವಿಷ್ಯ ಉಜ್ಜಲ ಆಗುತ್ತದೆ ಮತ್ತು ದುರಸ್ತಿ ಇರುವ ಶಾಲಾ, ಕಾಲೇಜುಗಳ ಹೊಸ ಕಟ್ಟಡಗಳ ನಿರ್ಮಾಣಕ್ಕೆ ನಾನು ಸದಾ ಪ್ರಯತ್ನ ಮಾಡಿ ಶಿಕ್ಷಣ  ಕ್ಷೇತ್ರದ ವ್ಯವಸ್ಥೆಗೆ ಕೆಲಸ ಮಾಡುತ್ತಿದ್ದು ಅದರ ಸದುಪಯೋಗ ವಿದ್ಯಾರ್ಥಿಗಳು ಹಾಗೂ ಪಾಲಕರು ಪಡೆದುಕೊಳ್ಳಬೇಕೆಂದು ಕಿತ್ತೂರು ಚನ್ನಮ್ಮನ ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
    ಅವರು ಸಮೀಪದ ಮಾಸ್ತಮರಡಿ ಗ್ರಾಮದಲ್ಲಿ  ಮಂಗಳವಾರದಂದು 2024-25 ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕೊಠಡಿ ನಿರ್ಮಾಣದ  ರೂ. 14,50,109-29 ಗಳ ಮೊತ್ತದಲ್ಲಿ ನಿರ್ಮಾಣ ಆಗಲಿರುವ ಶಾಲಾ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
    ಈ ಸಂದರ್ಭದಲ್ಲಿ ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಿಂಗಪ್ಪ ಅರಿಕೇರಿ, ಶಿವಾನಂದ ಕುಂಕುರ, ಎಸ್ ಡಿ ಎಮ್ ಸಿ ಅಧ್ಯಕ್ಷ ಸಿದ್ದಪ್ಪ ಮಿಂಡ್ರೋಳಿ,ಮಂಜುನಾಥ ಹುಲಮನಿ, ಮಲ್ಲೇಶ ಚಿಕ್ಕೋಡಿ, ಯಲ್ಲಪ್ಪ ಚಿಕ್ಕೋಪ್ಪ, ಸದೆಪ್ಪಾ ಬಸರಿಮರದ, ನಿಲ್ಲಪ್ಪ ಕಾಣಪ್ಪನವರ, ಮುಖ್ಯ್ಯೊಪಾಧ್ಯಾಯರಾದ ಭೀಮನಗೌಡ ನಾಯ್ಕರ, ಮಲ್ಲಪ್ಪ ತಿಗಡಿ, ಸೋಮಪ್ಪ ಸುಲದಾಳ, ಎ ಇ ಇ ಮಹೇಶ ಹೊಲಿ, ಮಾಲಾ ಬಡಿಗೇರ, ಪಿ ಡಿ ಓ ಶಿವಾನಂದ ಕಲ್ಲೂರ,ಸಿದ್ದಮಲ್ಲಪ್ಪ ಆಡಿನ ಸೇರಿದಂತೆ ಗ್ರಾಮದ ಮುಖಂಡರು, ಎಲ್ಲ ಸಮಾಜದ ಮುಖಂಡರು,ಗ್ರಾಮ ಪಂಚಾಯತ ಸದಸ್ಯರು, ಎಸ್ ಡಿ ಎಮ್ ಸಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article