ತಾಲೂಕಾ ಕೇಂದ್ರಕ್ಕೆ ಸಂಕೇಶ್ವರ ಪಟ್ಟಣ ಅರ್ಹ : ಮಾಜಿ ಸಂಸದ ರಮೇಶ ಕತ್ತಿ.

Hasiru Kranti
ತಾಲೂಕಾ ಕೇಂದ್ರಕ್ಕೆ ಸಂಕೇಶ್ವರ ಪಟ್ಟಣ ಅರ್ಹ : ಮಾಜಿ ಸಂಸದ ರಮೇಶ ಕತ್ತಿ.
WhatsApp Group Join Now
Telegram Group Join Now

ಹುಕ್ಕೇರಿ: ಭೌಗೋಳಿಕ, ಆರ್ಥಿಕ ಮತ್ತು ಔದ್ಯೋಗಿಕವಾಗಿ ಸೌಕರ್ಯ ಹೊಂದಿರುವ ಸಂಕೇಶ್ವರ ಪಟ್ಟಣ ತಾಲೂಕಾ ಕೇಂದ್ರವಾಗಲು ಎಲ್ಲ ಅರ್ಹತೆ ಹೊಂದಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಅವರು ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣವು ರಾಷ್ಟ್ರಿಯ ಹೆದ್ದಾರಿ, ಎ.ಪಿಎಮ್‌ಸಿ, ಸಿಪಿಐ ಕಛೇರಿ,ತೆರಿಗೆ ಇಲಾಖೆ, ಅಬಕಾರಿ, ನೊಂದಣಿ, ಸಾರಿಗೆ ಘಟಕ, ಅಗ್ನಿಶಾಮಕ ಎಲ್ಲ ಇಲಾಖೆಗನ್ನು ಹೊಂದಿದ್ದು ಹಾಗೂ ಕಣಗಲಾ ವ್ಯಾಪ್ತಿಯಲ್ಲಿ ಕೈಗಾರಿಕೆ ವಲಯ, ನಿರ್ಮಾಣವಾಗಿದ್ದು ಶೈಕ್ಷಣಿಕ, ಆರ್ಥಿಕ ಸಾಮಾಜಿಕವಾಗಿ ನದಿ, ಕ್ಷೇತ್ರ, ಜನಸಂಖ್ಯೆ ಆಧಾರವಾಗಿಟ್ಟುಕೊಂಡು ಕಣಗಲಾ, ಅಮ್ಮಣಗಿ, ದಡ್ಡಿ, ಹೆಬ್ಬಾಳ, ಯಮಕನಮರಡಿ ಜಿಲ್ಲಾ ಪಂಚಾಯತಿ ಕ್ಷೇತ್ರಗಳನ್ನು ಸೇರಿಸಿಕೊಂಡು ಸಂಕೇಶ್ವರ ಪಟ್ಟಣವನ್ನು ನೂತನ ತಾಲೂಕ ಕೇಂದ್ರವನ್ನಾಗಿ ಮಾಡಲು ಸೂಕ್ತ ಹಾಗೂ ಎಲ್ಲ ದಾಖಲೆಗಳನ್ನು ಕ್ರೂಡಿಕರಿಸಿ ಸರಕಾರಕ್ಕೆ ಒದಗಿಸಲಾಗಿದೆ. ಸಹೋದರ ದಿ. ಉಮೇಶ ಕತ್ತಿ ಅವರು ಬಹುದಿನದ ಕನಸುಕೂಡ ಇದಾಗಿತ್ತು ಕಾರಣ ಸಂಕೇಶ್ವರ ಪಟ್ಟಣವನ್ನು ತಾಲೂಕಾ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ರಾಜ್ಯಸರಕಾರವನ್ನು ಆಗ್ರಹಿಸಿದರು.

ರಾಜ್ಯದಲ್ಲಿ ದೊಡ್ಡ ಜಿಲ್ಲೆ ಬೆಳಗಾವಿ, ಕಾರಣ ಸರಳ ಆಡಳಿತ ಹಾಗೂ ಆಭಿವೃಧ್ದಿ ದೃಷ್ಟಿಯಿಂದ ಬೆಳಗಾವಿ ಜಿಲ್ಲಾ ವಿಭಜನೆ ಸೂಕ್ತ, ಬೆಳಗಾವಿಯಿಂದ ಸುಮಾರು೨೦೦ ಕಿ.ಮಿ. ಅಂತರದಲ್ಲಿರುವ ಅಥಣಿ ತಾಲೂಕಿನವರನ್ನು ಗಮನದಲ್ಲಿಟ್ಟಕೊಂಡು ಜಿಲ್ಲಾ ವಿಭಜನೆ ಮಾಡುವದು ಅಷ್ಟೆ ಸೂಕ್ತ ಎಂದರು
.ಆದರೆ ರಾಜಕಾರಣ ಮಾಡದೆ ಮೊದಲಿನ ಉಪ ವಿಭಾಗಿಯ ಮೂರು ಕೇಂದ್ರಗಳಂತೆ ಬೆಳಗಾವಿ , ಚಿಕ್ಕೋಡಿ, ಮತ್ತು ಬೈಲಹೊಂಗಲ ಕೇಂದ್ರ ಸ್ಥಾನಗಳನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು. ಹೊರತು ಪ್ರತಿಷ್ಠೆಯ ರಾಜಕೀಯ ಇಚ್ಚಾಸಕ್ತಿಗೋಸ್ಕರ ಜಿಲ್ಲಾ ವಿಭಜನೆ ಬೇಡ ಎಂದರು. ಜಿಲ್ಲೆಯ ಮಠಾಧೀಶರನ್ನು, ಕನ್ನಡಪರ ಹೋರಟಗಾರು, ಹಾಲಿ, ಮಾಜಿ ಶಾಸಕ, ಸಂಸದ ಜನಪ್ರತಿನಿಧಿಗಳನ್ನು, ವಿವಿಧ ಕ್ಷೇತ್ರಗಳ ತಜ್ಞರ ಜೊತೆ ಚರ್ಚಿಸಿ ಅಭಿಪ್ರಾಯ ಪಡೆಯುವದು ಸರಕಾರ ಮುಂದಾಗಬೇಕು ಎಂದರು.

ವಿದ್ಯುತ್ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ನಿರ್ದೇಶಕ ಸತ್ಯಪ್ಪಾ ನಾಯಿಕ, ಪುರಸಭೆ ಸದಸ್ಯರಾದ ರಾಜು ಮುನ್ನೋಳಿ, ಗುರು ಕುಲಕರ್ಣಿ ಲಾಜಿಮ್ ನಾಯಿಕವಾಡಿ, ಕೆಂಪಣ್ಣ ದೇಸಾಯಿ, ಶ್ರೀಶೈಲ್ ಮಠಪತಿ, ಶಿವಾಜಿ ಬಾರಿಗಿಡದ ಎಚ್,ಎಲ್ ಪೂಜೇರಿ, ಅಶೋಕ ಹಿರೆಕೂಡಿ ರಾಜು ಬಿರಾದಾರ , ರಾಚಯ್ಯಾ ಹಿರೇಮಠ, ಮತ್ತಿತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article