ವೀರಾಪುರದಲ್ಲಿ ಅದ್ಧೂರಿ ಕಲಿಕಾ ಹಬ್ಬ

Ravi Talawar
ವೀರಾಪುರದಲ್ಲಿ ಅದ್ಧೂರಿ ಕಲಿಕಾ ಹಬ್ಬ
WhatsApp Group Join Now
Telegram Group Join Now

ಎಂ.ಕೆ. ಹುಬ್ಬಳ್ಳಿ:  ಸಮೂಹ ಸಂಪನ್ಮೂಲ ಕೇಂದ್ರ ಎಂ.ಕೆ. ಹುಬ್ಬಳ್ಳಿ ಹಾಗೂ ಹಿರಿಯ ಪ್ರಾಥಮಿಕ ಶಾಲೆ ವೀರಾಪುರ ಇವರ ಆಶ್ರಯದಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಕ್ಲಸ್ಟರ್ ಮಟ್ಟದ FLN ಕಲಿಕಾ ಹಬ್ಬವನ್ನು ಇಂದು (23-12-2025) ಬೆಳಿಗ್ಗೆ 9.30ರಿಂದ ವೀರಾಪುರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಉತ್ಸಾಹದಿಂದ ಆಚರಿಸಲಾಯಿತು.

ನೋಂದಣಿಯೊಂದಿಗೆ ಕಾರ್ಯಕ್ರಮ ವಿದ್ಯುಕ್ತವಾಗಿ ಆರಂಭವಾಯಿತು. ಆರಂಭದಲ್ಲಿ ಮಕ್ಕಳು ಡೊಳ್ಳು ಬಾರಿಸುತ್ತಾ, ಎಫ್‌ಎಲ್‌ಎನ್ ಸ್ತಬ್ಧ ಚಿತ್ರಗಳೊಂದಿಗೆ ಪ್ರಭಾತ ಫೇರಿಯಲ್ಲಿ ಭಾಗವಹಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಬಳಿಕ ನಡೆದ ಉದ್ಘಾಟನಾ ಸಮಾರಂಭವನ್ನು ತಾಲೂಕು ಪ್ರಾಥಮಿಕ ಶಿಕ್ಷಣ ಸಂಯೋಜಕರಾದ ಶ್ರೀ ಎಸ್.ಎಂ. ಶಾಹಪೂರ ಮಠ ಅವರು ಉದ್ಘಾಟಿಸಿ ಮಾತನಾಡಿ, ಮಕ್ಕಳ ಸಮಗ್ರ ಕಲಿಕೆಗೆ ಇಂತಹ ಹಬ್ಬಗಳು ಅತ್ಯಂತ ಸಹಕಾರಿಯಾಗಿವೆ. ಪ್ರತಿ ವರ್ಷದಂತೆ ಈ ವರ್ಷವೂ ಕಲಿಕಾ ಹಬ್ಬವನ್ನು ಆಚರಿಸಲಾಗಿದ್ದು, ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಕಲಿಕಾ ಹಬ್ಬದ ಅಂಗವಾಗಿ ಒಟ್ಟು ಏಳು ಸ್ಪರ್ಧೆಗಳು ಆಯೋಜಿಸಲಾಗಿದ್ದು, ಅವುಗಳಲ್ಲಿ ಕಥೆ ಹೇಳುವ ಸ್ಪರ್ಧೆ , ಗಟ್ಟಿ ಓದು ಸ್ಪರ್ಧೆ , ಸಂತೋಷದಾಯಕ ಗಣಿತ ಸ್ಪರ್ಧೆ , ಕೈಬರಹ ಮತ್ತು ಕ್ಯಾಲಿಗ್ರಫಿ ಸ್ಪರ್ಧೆ , ಆರೋಗ್ಯ ಮತ್ತು ಪೌಷ್ಟಿಕಾಂಶ ಅರಿವು ಸ್ಪರ್ಧೆ ), ರಸಪ್ರಶ್ನೆ ಸ್ಪರ್ಧೆ ಹಾಗೂ ಪೋಷಕರು–ಮಕ್ಕಳ ಸಹಸಂಬಂಧದ ವಲಯ ಸ್ಪರ್ಧೆಗಳು ನಡೆದವು. 1ರಿಂದ 5ನೇ ತರಗತಿಯ ಮಕ್ಕಳು ಹಾಗೂ ಪೋಷಕರು ಉತ್ಸಾಹದಿಂದ ಭಾಗವಹಿಸಿದರು. ರಸಪ್ರಶ್ನೆ ಸ್ಪರ್ಧೆಯಲ್ಲಿ 5ನೇ ತರಗತಿಯ 6ನೇ ಮಗು ಹಾಗೂ 1ರಿಂದ 5ನೇ ತರಗತಿಯ ಚಟುವಟಿಕೆಯಲ್ಲಿ ಮಕ್ಕಳು ಪಾಲ್ಗೊಂಡರು.

 

ಸಭೆಯ ನಂತರ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಅಲಿಸಾಬ ಕೆಳಗಡೆ, ಉಪಾಧ್ಯಕ್ಷರಾದ ಶ್ರೀ ಮಂಜುನಾಥ ಸಾಧನವರ, ಸದಸ್ಯರಾದ ಶ್ರೀ ಸಂಗಪ್ಪ ಪಿಶನ್ನವರ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಗಂಗಾಧರ್ ಸಿಂಗರಗಾವಿ ಹಾಗೂ ಸದಸ್ಯರು, ಪ್ರೌಢಶಾಲೆಯ ಅಧ್ಯಕ್ಷರಾದ ಶ್ರೀ ಪ್ರಕಾಶ್ ಬಾಳೆಕುಂದರಗಿ ಉಪಸ್ಥಿತರಿದ್ದರು.

ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಶ್ರೀಯುತ ಶಾಹಪೂರಮಠ (ಸಿಆರ್‌ಪಿ), ವಿನೋದ ಪಾಟೀಲ, ಪರಪ್ಪನವರ ಮೇಡಂ, ನಿವೃತ್ತ ಶಿಕ್ಷಕರಾದ ಎಂ.ಎಸ್. ಕಲ್ಮಠ, ಮುಖ್ಯಶಿಕ್ಷಕರಾದ ಕಲ್ಲಪ್ಪ ಇಟ್ನಾಳ,ಆರ್ ಜೆ ಶೇಬನ್ನವರ ಆನಂದ ಬಂಕಾಪೂರ ,ಪಾಟೀಲ್ ಮೆಡಮ್ ದೀಪಿಕಾ ಪಾಟೀಲ,ಮಾಹೇಂತೇಶ ಕಲ್ಲೋಳ್ಳಿ, ಮಾರುತಿ ಜೋಳದ,ಮಾಹಂತೇಶಗದ್ದಿಹಳ್ಳಿ,ಎಸ್.ಪಿ.ಪಾಟೀಲ,ಸುನೀತಾ ಬೀರಣ್ಣವರ,ಟಿ ಎ ನದಾಪ್ ,ಚಿದಂಬರ ಕುಲಕರ್ಣಿ, ಗುರುಗಳು, ಊರಿನ ಗಣ್ಯರು, ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಮುದ್ದು ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಶೋಭೆ ತಂದರು.

ಸ್ಪರ್ಧೆಗಳ ನಡುವೆ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀಮತಿ ಗಾಯತ್ರಿ ಅಜ್ಜನ್ನವರ ಹಾಗೂ ಬಿಆರ್‌ಪಿಗಳಾದ ಶ್ರೀ ಎಂ.ವೈ. ಕಡಕೋಳ ಅವರು ಭೇಟಿ ನೀಡಿ ಕಾರ್ಯಕ್ರಮದ ವ್ಯವಸ್ಥೆ ಹಾಗೂ ಮಕ್ಕಳ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಕ್ಷರ ತೋರಣ, ಕಲಿಕಾ ಚಪ್ಪರ, ಅಕ್ಷರ ಬಂಡಿ ಹಾಗೂ ರಂಗೋಲಿ ಸ್ಪರ್ಧೆಗಳು ಕಲಿಕಾ ಹಬ್ಬಕ್ಕೆ ವಿಶೇಷ ಮೆರಗು ನೀಡಿದವು. ಮಕ್ಕಳ ಉತ್ಸಾಹಭರಿತ ಭಾಗವಹಿಸುವಿಕೆಯಿಂದ FLN ಕಲಿಕಾ ಹಬ್ಬವು ಯಶಸ್ವಿಯಾಗಿ ನೆರವೇರಿತು.

WhatsApp Group Join Now
Telegram Group Join Now
Share This Article