ಗವಿಮಠದ ಮಹಾದಾಸೋಹಕ್ಕೆ ೧೦ಕ್ವೀಂಟಲ್ ಹುಣಸೆ ಚಟ್ನಿ
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗಡಿಗಳ ವ್ಯವಸ್ಥೆ
ಕೊಪ್ಪಳ : ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಜರುಗಲಿರುವ ಮಹಾದಾಸೋಹಕ್ಕಾಗಿ ಸದ್ಭಕ್ತರಿಂದ ಸಿಹಿ ಪದಾರ್ಥ, ದವಸ-ಧಾನ್ಯ, ರೊಟ್ಟಿಗಳನ್ನು ಶ್ರೀಮಠಕ್ಕೆ ತಂದು ಅರ್ಪಿಸುತಿದ್ದಾರೆ. ಇಂದು ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಸದ್ಭಕ್ತರಿಂದ- ೧೫೦೦೦ (ಹದಿನೈದು ಸಾವಿರ) ರೊಟ್ಟಿ, ೭ ಪಾಕೆಟ್ ಅಕ್ಕಿ, ೫೮ ಮೆಕ್ಕೆ ಜೋಳ, ೨ ಪಾಕೆಟ್ ನೆಲ್ಲು, ಟ್ರ್ಯಾಕ್ಟರ್ ಹಾಗೂ ಲಘು ವಾಹನಗಳ ಮೂಲಕ ಭಕ್ತಿ ಭಾವ, ಸಡಗರದೊಂದಿಗೆ ಶ್ರೀಗವಿಮಠಕ್ಕೆ ಆಗಮಿಸಿ ಮಹಾದಾಸೋಹಕ್ಕೆ ಸಲ್ಲಿಸಿದರು. ಇದರಿಂದಾಗಿ ಗವಿಮಠದಲ್ಲಿ ರೊಟ್ಟಿಗಳ ಸಪ್ಪಳ ಆರಂಭವಾಗಿದೆ. ದಾನಿಗಳಿಗೆ ಪೂಜ್ಯರು ಆಶಿರ್ವದಿಸಿದ್ದಾರೆ.

ಗವಿಮಠದ ಮಹಾದಾಸೋಹಕ್ಕೆ ೧೦ಕ್ವೀಂಟಲ್ ಹುಣಸೆ ಚಟ್ನಿ
ಕೊಪ್ಪಳ : ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಜರುಗಲಿರುವ ಮಹಾದಾಸೋಹಕ್ಕಾಗಿ ಪ್ರತಿ ಅನೇಕ ಭಕ್ತಗಣ ವಿವಿಧ ರೀತಿಯ ದಾನ್ಯ, ತರಕಾರಿ ಮುಂತಾದ ದಾಸೋಹ ಸೇವೆಯನ್ನು ಮಹಾದಾಸೋಹಕ್ಕೆ ಸಲ್ಲಿಸುವುದು ಭಕ್ತರ ಸಂಪ್ರದಾಯ. ಕುಷ್ಟಗಿ ತಾಲೂಕಿನ ಹನುಮನಾಳ್ ಗ್ರಾಮದ ಸದ್ಭಕ್ತರಿಂದ ಈ ವರ್ಷದ ಜಾತ್ರಾ ಮಹಾದಾಸೋಹಕ್ಕೆ ೧೦ಕ್ವೀಂಟಾಲ್ ಹುಣಸೆ ಚಟ್ನಿಯನ್ನು ಸಲ್ಲಿಸುತ್ತಿದ್ದಾರೆ. ದಾನಿಗಳ ಸೇವೆಯನ್ನು ಶ್ರೀಗವಿಮಠವು ಸ್ಮರಿಸುತ್ತದೆ ಎಂದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗಡಿಗಳ ವ್ಯವಸ್ಥೆ
ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಸಿದ್ದೀ ಪಡೆದಿರುವ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ನಾಡಿನ Pಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಮಹಾರಥೋತ್ಸವದ ಅಂಗವಾಗಿ ಶ್ರೀ ಗವಿಮಠದ ಆವರಣದ ಮುಂಭಾಗದಲ್ಲಿನ ಸುಮಾರು ೧೨ ಎಕರೆ ವಿಸ್ತೀರ್ಣದ ಮೈದಾನದಲ್ಲಿ ಸಾರ್ವಜನಿಕರಿಗೆ ಉಪಯುಕ್ತ ಅಂಗಡಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ವೈವಿಧ್ಯಮಯವಾದ ಅಂಗಡಿ-ಮುಂಗಟ್ಟುಗಳು ಸ್ಥಾಪಿತವಾಗಲಿವೆ. ಈ ಎಲ್ಲ ಅಂಗಡಿ ಮುಂಗಟ್ಟುಗಳು ಶ್ರೀಮಠದ ಆಧಾರ ಸ್ತಂಭಗಳಂತೆ ಕಾಣುವ ೪ ವಿಶಿಷ್ಟ ಮಹಾದ್ವಾರಗಳನ್ನು ಶ್ರೀಗವಿಮಠದ ಪ್ರಥಮ ಶಿವಯೋಗಿಗಳಾದ ರುದ್ರಮುನಿ ಮಹಾಸ್ವಾಮಿಗಳು, ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಮರಿಶಾಂತವೀರ ಮಹಾಸ್ವಾಮಿಗಳು ಹಾಗೂ ಶಿವಶಾಂತವೀರ ಮಹಾಸ್ವಾಮಿಗಳ ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಲಿವೆ. ಜಾತ್ರಾ ಸಮಯದಲ್ಲಿ ಅವು ಅತ್ಯಾಕರ್ಷಕವಾಗಿ ನೋಡುಗರ ಕಣ್ಮನಗಳನ್ನು ಸೆಳೆಯುವವು.

ಅಂಗಡಿಗಳ ಶಿಸ್ತು ಮತ್ತು ನೀಲನಕ್ಷೆ:
ಈ ಬೃಹತ್ ಮಹಾದ್ವಾರಗಳ ಮುಖೇನ ಜನರಿಗೆ ರಹದಾರಿ ಕಲ್ಪಿಸಲಾಗಿದೆ. ಈ ವಿಶಾಲ ಆವರಣದಲ್ಲಿ ಪ್ರತಿವರ್ಷ ಜಾತ್ರೆ ಆವರಣದ ಮಳಿಗೆಗಳಲ್ಲಿ ೧೨ ಸಾಲುಗಳಿದ್ದು, ಪ್ರತಿ ಸಾಲುಗಳ ಮಧ್ಯ ಜನಸಂದಣಿ ಆಗದಂತೆ ಸಮತಟ್ಟಾದ ರಸ್ತೆಗಳನ್ನು ನಿರ್ಮಿಸಲಾಗಿದೆ. ಪ್ರತಿ ಸಾಲಿನಲ್ಲಿರುವ ಅಂಗಡಿಗಳಿಗೆ ಕ್ರಮ ಬದ್ದವಾದ ಕ್ರಮ ಸಂಖ್ಯೆಯನ್ನು ಸಹ ಕೊಡಲಾಗಿದೆ.
೧) ಮಿಠಾಯಿ ಅಂಗಡಿಗಳ ಸಾಲುಗಳು ೨) ಗೋಭಿ ಮಂಚೂರಿ ಅಂಗಡಿಗಳ ಸಾಲುಗಳು ೩) ಬಳೆ ಅಂಗಡಿಗಳ ಸಾಲುಗಳು ೪) ಹೋಟೆಲುಗಳ ಸಾಲುಗಳು ೫) ಸ್ಟೇಷನರಿ ಅಂಗಡಿಗಳ ಸಾಲುಗಳು, ೬) ಹಣ್ಣು ಹಾಗೂ ಜ್ಯೂಸ್ ಅಂಗಡಿಗಳ ಸಾಲುಗಳು ೭) ಕಬ್ಬಿಣ ಸಾಮಾನುಳ ಅಂಗಡಿಗಳ ಸಾಲುಗಳು ೮) ಬಾಂಡೆ ಅಂಗಡಿಗಳ ಸಾಲುಗಳು ೯) ಜೋಕಾಲಿ ಆಟ ಆಡುವ ಸಾಲುಗಳು ೧೦) ಕೃಷಿ ಪ್ರದರ್ಶನ- ನೀರಿನ ಪ್ರಾತ್ಯಕ್ಷಿಕ ವೀಕ್ಷಣೆ ೧೧) ಫಲ ಪುಷ್ಪ ಪ್ರದರ್ಶನ, ೧೨) ಪಾರ್ಕಿಂಗ್ ವ್ಯವಸ್ಥೆ ೧೩) ಪೋಲಿಸ್ ಚೌಕಿ ೧೪) ತುರ್ತು ಚಿಕಿತ್ಸಾ ಘಟಕ ಇವೆಲ್ಲವುಗಳ ವ್ಯವಸ್ಥೆ ಮಾಡಲಾಗಿದೆ.
೨) ಅಂಗಡಿಕಾರರಿಗೆ ಮತ್ತು ಸಾರ್ವಜನಿಕರಿಗೆ ಪ್ರತ್ಯಕವಾದ ಸ್ನಾನಗೃಹ ಮತ್ತು ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ
ಭಕ್ತರ ಆರೋಗ್ಯ ಕಾಳಜಿ ಮತ್ತು ಶ್ರೀರಕ್ಷೆ: ಅಲ್ಲದೇ ಜಾತ್ರಾ ಮಹೋತ್ಸವದ ಅಂಗಡಿಗಳ ಆವರಣಗಳಲ್ಲಿ ರಥೋತ್ಸವದಿಂದ ಹಿಡಿದು ಅಮವಾಸ್ಯೆಯವರೆಗೆ ಮಹಿಳೆಯರ, ಮಕ್ಕಳ, ವಯೋವೃದ್ದರ ಹಿತದೃಷ್ಟಿಯಿಂದ ಮತ್ತು ಹಣ, ಬಂಗಾರದ ಆಭರಣಗಳು, ಮೊಬೈಲ್ ಕಳ್ಳತನ ಮಾಡುವ ಕಳ್ಳಕಾಕರನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾತ್ರೆಯನ್ನು ಶಿಸ್ತುಬದ್ದವಾಗಿ ಜರುಗಿಸಲು ಅಲ್ಲಲ್ಲಿ ಸಿ.ಸಿ. ಕ್ಯಾಮರಗಳನ್ನು ಸಹ ಅಳವಡಿಸಲಾಗಿರುತ್ತದೆ. ಅಂಗಡಿಕಾರರ ಮತ್ತು ಯಾತ್ರಾರ್ಥಿಗಳ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ನಮ್ಮ ಆರ್ಯುವೇದ ಮಹಾವಿದ್ಯಾಲಯದ ೩ ಅಥವಾ ೪ ಓ.ಪಿ.ಡಿ ಚಿಕಿತ್ಸಾ ಕೇಂದ್ರಗಳು ಇದ್ದು ಇವುಗಳ ಜೊತೆ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಖಾಸಗಿ ಆಸ್ಪತ್ರೆಯವರಿಂದ ತುರ್ತು ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಸ್ವಚ್ಚತೆಯ ಆಗರ:
ಕೊಪ್ಪಳ ನಗರಸಭೆ ಜಾತ್ರೆಯ ಸಂಪೂರ್ಣ ಸ್ವಚ್ಛತಾ ಕಾರ್ಯಕ್ರಮ ಮಾಡುವಲ್ಲಿ ಶ್ರೀ ಗವಿಮಠದೊಂದಿಗೆ ಕೈಜೊಡಿಸುತ್ತದೆ. ಈ ಜಾತ್ರಾ ಮಳಿಗೆಗಳ ಸ್ಥಳದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಜೊತೆಗೆ ಅಂಗಡಿಕಾರರಿಗೆ ಸ್ವಚ್ಛತೆ ಹಾಗೂ ನೈರ್ಮಲ್ಯತೆಯನ್ನು ಕಾಯ್ದುಕೊಳ್ಳಲು ಈ ಮಳಿಗೆಗಳ ಉಸ್ತುವಾರಿ ಸಮಿತಿ ನಿರ್ದೇಶಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ-೮೨೧೭೭೭೨೧೧೨, ೯೫೧೩೬೯೧೩೩೩, ೯೯೪೫೦೧೧೫೮೧


