ಪೊಲೀಯೋ ಮಾರಣಾಂತಿಕ ರೋಗ ನೆರೆ ರಾಷ್ಟ್ರಗಳಲ್ಲಿ ಇನ್ನೂ ಜೀವಂತವಿದೆ : ಗುಡಗುಂಟಿ

A B
By A B
ಪೊಲೀಯೋ ಮಾರಣಾಂತಿಕ ರೋಗ ನೆರೆ ರಾಷ್ಟ್ರಗಳಲ್ಲಿ ಇನ್ನೂ ಜೀವಂತವಿದೆ : ಗುಡಗುಂಟಿ
WhatsApp Group Join Now
Telegram Group Join Now
ಜಮಖಂಡಿ ಡಿ., 21- ಹುಟ್ಟಿದ ಮಗುವಿನಿಂದ ೫ ವರ್ಷದ ಒಳಗಿನ ಎಲ್ಲ ಮಕ್ಕಳು ಆರೋಗ್ಯವಂತ ಆಗಿರಬೇಕೆಂದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಆಶಯವಾಗಿದೆ. ಪೊಲೀಯೋ ಮಾರಣಾಂತಿಕ ರೋಗವಾಗಿದ್ದು, ಜೀವನ ಪರ್ಯಂತ ನೋವು ಅನುಭವಿಸುವ ರೋಗವಾಗಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಭಾಭವನದಲ್ಲಿ ರವಿವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ೨೦೧೪ರಲ್ಲಿ ಭಾರತದೇಶ ಪೊಲೀಯೋ ಮುಕ್ತ ದೇಶವಾಗಿದ್ದು, ನೆರೆ ರಾಷ್ಟçಗಳಾದ ಪಾಕಿಸ್ಥಾನ, ಅಫಘಾನಿಸ್ಥಾನ ಮತ್ತು ಆಫ್ರಿಕಾ ಖಂಡಗಳಲ್ಲಿ ಪೊಲೀಯೋ ರೋಗ ಜೀವಂತವಿದೆ. ಭಾರತದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ಮಕ್ಕಳಿಗೆ ಪೊಲೀಯೋ ಲಸಿಕೆ ನೀಡಲಾಗುತ್ತಿದೆ. ಸರಕಾರದಿಂದ ಏನು ಲಾಭವಾಗಿದೆ ಎನ್ನುವ ಬದಲಾಗಿ ಸರಕಾರಗಳಿಗೆ ನನ್ನ ವಯಕ್ತಿಕ ಕೊಡುಗೆ ಏನು ಎಂಬುದವನ್ನು ಅರಿತು ಪ್ರಶ್ನೆ ಮಾಡಿಕೊಳ್ಳಬೇಕು ಎಂದರು.
ಭಾರತೀಯ ವೈದ್ಯಕೀಯ ಸಂಸ್ಥೆ ತಾಲೂಕಾಧ್ಯಕ್ಷ ಹಿರಿಯ ವೈದ್ಯ ಡಾ.ಹೆಚ್.ಜಿ.ದಡ್ಡಿ ಮಾತನಾಡಿ, ಇಂದಿನ ದಿನ ಮಾನದಲ್ಲಿ ಸಾಂಕ್ರಾಮಿಕ ರೋಗಳು ಹರಡುವ ಸಾಧ್ಯತೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನಕೊಡಬೇಕು. ಪಕ್ಕದ ದೇಶಗಳಲ್ಲಿ ಪೊಲೀಯೋ ಜೀವಂತವಾಗಿರುವ ಹಿನ್ನಲೆಯಲ್ಲಿ ನಮ್ಮ ದೇಶದಲ್ಲಿ ಪೊಲೀಯೋ ಲಿಸಿಕೆ ಅಗತ್ಯವಾಗಿದೆ. ಪೊಲೀಯೋ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆ ಪಾತ್ರ ಕೂಡ ಅಮೋಘವಾಗಿದೆ. ಒಂದು ಯೋಜನೆ ಯಶಸ್ವಿಯಾಗಬೇಕಾದರೇ ಅದರಲ್ಲಿ ಜನಪ್ರತಿನಿಗಳು, ಸರಕಾರ ಮತ್ತು ಇಲಾಖೆ ಅಧಿಕಾರಿಗಳು, ಸಂಘ-ಸAಸ್ಥೆಗಳ ಜೊತೆಗೆ ಸಾರ್ವಜನಿಕರ ಸಹಕಾರ ಕೂಡ ಅಗತ್ಯವಾಗಿದೆ ಎಂದರು.
ತಾಲೂಕ ವೈದ್ಯಾಧಿಕಾರಿ ಡಾ.ಜಿ.ಎಸ್.ಗಲಗಲಿ ಮಾತನಾಡಿ, ಸನ್೧೯೭೨ರಲ್ಲಿ ಆರಂಭಗೊAಡ ಪಲ್ಸ್ ಪೋಲಿಯೋ ನಂತರ ೧೯೯೫ರಲ್ಲಿ ವಿಶ್ವವ್ಯಾಪ್ತಿ ಆಚರಣೆ ಮೂಲಕ ನಿಯಂತ್ರಣಕ್ಕಾಗಿ ಲಸಿಕಾ ಅಭಿಯಾನ ಆರಂಭಿಸಿತು. ೯೦ ದಶಕದಲ್ಲಿ ಪೊಲೀಯೋ ಭಯಾನಕ ರೋಗವಾಗಿ ಗುರುತಿಕೊಂಡಿತು. ನೆರೆ ರಾಷ್ಟçಗಳಾದ ಪಾಕಿಸ್ಥಾನ ಮತ್ತು ಅಪಘಾನಿಸ್ತಾನದಲ್ಲಿ ಇನ್ನು ಜೀವಂತವಿದೆ. ಪ್ರಸಕ್ತ ವರ್ಷ ಭಾರತ ದೇಶದಲ್ಲಿ ಒಂದು ಸುತ್ತಿನ ಪೊಲೀಯೋ ಲಸಿಕೆ ನೀಡಲಾಗುತ್ತಿದೆ ಎಂದರು.
ಸರಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ವಿ.ಸಿ.ಮುದಿಗೌಡರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರಸಭೆ ಪೌರಾಯುಕ್ತ ಜ್ಯೋತಿಗಿರೀಶ, ಆರೋಗ್ಯ ಇಲಾಖೆಯ ನೊಡಲ್ ಅಧಿಕಾರಿ ದಯಾನಂದ ಕರೆನ್ನವರ, ಉಪ ತಹಶೀಲ್ದಾರ ಬಿ.ಎಸ್.ಸಿಂಧೂರ, ತಾ.ಪಂ.ಅಧಿಕಾರಿ ಸಂಜೀವ ಹಿಪ್ಪರಗಿ, ಚಿಕ್ಕಮಕ್ಕಳ ತಜ್ಞ ಡಾ.ರಂಗನಾಥ ಸೋನವಾಲ್ಕರ, ರೋಟರಿ ಸಂಸ್ಥೆ ಅಧ್ಯಕ್ಷ ರಾಜಶೇಖರ ಕೊಹಳ್ಳಿ, ಲಯನ್ಸ್ ಸಂಸ್ಥೆ ಡಾ.ಟಿ.ಪಿ.ತಾನಪ್ಪಗೋಳ, ನಗರಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ಗ್ರಾಮೀಣಮಂಡಲ ಅಧ್ಯಕ್ಷ ಮಲ್ಲು ದಾನಗೊಂಡ, ರಾಜು ಕಡಕೋಳ ಸಹಿತ ಹಲವರು ಇದ್ದರು.
ಸುಲೋಚನಾ ಕಂಕಣವಾಡಿ ಪ್ರಾರ್ಥಿಸಿದರು. ಮಲ್ಲು ಅಸ್ಕಿ ಸ್ವಾಗತಿಸಿದರು. ಡಾ.ಉಮೇಶ ಜೋಶಿ ನಿರೂಪಿಸಿದರು. ಮುತ್ತು ಹೊನವಾಡ ವಂದಿಸಿದರು.
ಪೋಟೋ: ಜಮಖಂಡಿ: ನಗರದ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಭಾಭವನದಲ್ಲಿ ರವಿವಾರ ರಾಷ್ಟಿçÃಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಶಾಸಕ ಜಗದೀಶ ಗುಡಗುಂಟಿ ಉದ್ಘಾಟಿಸಿದರು.
WhatsApp Group Join Now
Telegram Group Join Now
Share This Article