ಬಳ್ಳಾರಿ, ಡಿ.15 ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿಯವರ ನೇತೃತ್ವದಲ್ಲಿ ಜ.03, 2026ರಂದು ನಡೆಯಲಿರುವ ಮಹರ್ಷಿ ಶ್ರೀ ವಾಲ್ಮೀಕಿಯವರ ಪುತ್ಥಳಿಯ ಅನಾವರಣ ಕಾರ್ಯಕ್ರಮದ ಪ್ರಚಾರ ಕಾರ್ಯಕ್ಕೆ ರವಿವಾರ ಚಾಲನೆ ನೀಡಲಾಯಿತು.
ಬಳ್ಳಾರಿ ನಗರ-ಜಿಲ್ಲೆಯ ವಾಲ್ಮೀಕಿ ನಾಯಕರ ಸಮಾಜದ ಮುಖಂಡರು ಕರಪತ್ರವನ್ನು ಬಿಡುಗಡೆಗೊಳಿಸುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.
ಇದಕ್ಕೂ ಮುನ್ನ ಬಳ್ಳಾರಿಯ ದೇವಿ ನಗರದ ಶ್ರೀ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಕರಪತ್ರಗಳನ್ನಿಟ್ಟು ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಮನೆ ಮನೆಗೆ ತೆರಳಿ ಕರಪತ್ರ ಹಂಚಲಾಯಿತು.
ಈ ಸಂದರ್ಭ ವಾಲ್ಮೀಕಿ ನಾಯಕರ ಸಮಾಜದ ಪರಶುರಾಮುಡು, ದೇವಿನಗರ ಹೊನ್ನೂರಪ್ಪ, ಹಗರಿ ಗೋವಿಂದ, ಹಾವಂಭಾವಿ ಲೋಕೇಶ್, ಗಂಗಾಧರ, ಯರಗುಡಿ ಸೋಮಣ್ಣ, ಕಾಂಗ್ರೆಸ್ ಮುಖಂಡ ಮಹಮ್ಮದ್ ಭಾಯ್, ಮುದಿ ಮಲ್ಲಯ್ಯ, ಲಾಲುಸ್ವಾಮಿ, ಪಿ.ರವಿ, ಕುಬೇರ, ಸಂಗನಕಲ್ಲು ವಿಜಯ್, ಮಲ್ಲಿಕಾರ್ಜುನ, ಸುಧಾಕರ್, ಓಬಣ್ಣ, ರಾಮಮೂರ್ತಿ, ಕಾರ್ತಿಕ್, ವೆಂಕಟೇಶ, ರಾಜು, ವಿಜಯ್ ಸೇರಿದಂತೆ ಹಲವರು ಹಾಜರಿದ್ದರು.


