ಅಗ್ನಿ ಅನಾಹುತ,  40 ಬೈಕ್‌ ಬೆಂಕಿಗೆ  ಅಹುತಿ

Hasiru Kranti
ಅಗ್ನಿ ಅನಾಹುತ,  40 ಬೈಕ್‌ ಬೆಂಕಿಗೆ  ಅಹುತಿ
WhatsApp Group Join Now
Telegram Group Join Now
ಬಳ್ಳಾರಿ, ಡಿ.16..ನಗರದ ಡಾ. ರಾಜಕುಮಾರ್ ರಸ್ತೆಯ ಬೈಪಾಸ್ ಹತ್ತಿರ ಇಂದು ಮುಂಜಾನೆ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಯಮಹಾ ಕಂಪನಿಯ  ಸುಮಾರು 40 ದ್ವಿಚಕ್ರ ವಾಹನಗಳು  ಸಂಪೂರ್ಣವಾಗಿ ಸುಟ್ಟು ಕಾರಕಲಾಗಿವೆ.
 ದ್ವಿಚಕ್ರ ವಾಹನಗಳನ್ನು  ಡೆಲಿವರಿ ನೀಡಲು ಬಂದ ಒಂದು  ಕಂಟೆನರಲ್ಲಿರುವ  ವಾಹನಗಳಿಗೆ ಆಕಸ್ಮಿಕ ಮತ್ತು ಅನುಮಾನಾತ್ಮಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ಸಂಭವಿಸಿದೆ.
ಉತ್ತರ ಪ್ರದೇಶದ ನೋಂದಣಿ ಸಂಖ್ಯೆಯನ್ನು ಹೊಂದಿರುವ ಕಾಂಟೇನರ್   ವಾಹನವು ಬಳ್ಳಾರಿಗೆ 20 ಬೈಕ್‌ಗಳನ್ನು ಡೆಲಿವರಿ ಮಾಡಲು ಬಂದು, ಬೈಪಾಸ್ ನಲ್ಲಿ ಚಾಲಕ ವಿಶ್ರಾಂತಿಗಾಗಿ ನಿಲ್ಲಿಸಿದಾಗ
ಇಂದು ನಸುಕಿನ 5 ಗಂಟೆ ಸುಮಾರಿಗೆ ಕಂಟೇನರ್‌ನಿಂದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿರುವುದನ್ನು ಚಾಲಕ ಗಮನಿಸಿ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾನೆ.
ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. ಅಷ್ಟರಲ್ಲಿ ಆಗಲೇ ಸುಮಾರು 40 ದಿಚಕ್ರ ವಾಹನಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದವು.
ಅಗ್ನಿ ಅವಘಡಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಘಟನೆ ಕುರಿತು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಘಟನೆ ಕುರಿತು ಮುಖದ್ದಮೆಯನ್ನು ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಈ ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
WhatsApp Group Join Now
Telegram Group Join Now
Share This Article