ತುಮಕೂರು : ರಾಜ್ಯ ಕಾಂಗ್ರೆಸ್ ನಲ್ಲಿ ಸಿ.ಎಂ. ಕುರ್ಚಿಗಾಗಿ ಗುದ್ದಾಟ ನಡೆಯುತ್ತಿರುವಂತೆಯೇ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ. ಸೋಮಣ್ಣ, ಗೃಹ ಸಚಿವ ಡಾ. ಜಿ.ಪರಮೇಶ್ವರ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ತನ್ನ ಗೆಲುವಿನಲ್ಲಿ ಕಾಂಗ್ರೆಸ ಸಹಕಾರ ಇದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದ ಹೊರ ವಲಯದ ಹೆಗ್ಗೆರೆಯಲ್ಲಿ ರೈಲ್ವೆ ಮೇಲು ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ವಿ. ಸೋಮಣ್ಣ, ಪರಮೇಶ್ವರ್ ಅದೃಷ್ಟದ ಗೃಹ ಮಂತ್ರಿಯಾಗಿದ್ದಾರೆ. ಎಲ್ಲೋ ಒಂದು ಕಡೆ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಲಿ ಅನ್ನೋ ಆಸೆ ಇದೆ ಎಂದರು.
ಪರಮೇಶ್ವರ್ ಅವರ ಸಮ್ಮುಖದಲ್ಲಿಯೇ ಕಾಂಗ್ರೆಸ್ ನಾಯಕರು ಸಹಕಾರ ನೀಡಿದ್ದಾರೆ ಎಂದು ವಿ. ಸೋಮಣ್ಣ ಹೇಳಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ವಿ.ಸೋಮಣ್ಣ ವಿರುದ್ಧ ಸ್ಪರ್ಧಿಸಿದ್ದ ಎಸ್.ಪಿ. ಮುದ್ದ ಹನುಮೇಗೌಡ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣರಾಗಿದ್ದಾರೆಯೇ? ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
ಒಂದು ಕಡೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅದಕ್ಕೆ ಇಲ್ಲ ಅಂತ ಹೇಳುತ್ತಿದ್ದಾರೆ ಮತ್ತೊಂದು ಕಡೆ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಜನವರಿ 6 ಅಥವಾ 9 ರಂದು ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ ಇದೀಗ ಕೇಂದ್ರ ರೈಲ್ವೆ ಸಚಿವ ಈ ಸೋಮಣ್ಣ ಅವರು ಗೃಹ ಸಚಿವ ಜಿ ಪರಮೇಶ್ವರ್ ಅವರು ಸಿಎಂ ಆಗಲಿ ಅನ್ನೋದು ನನ್ನ ಆಸೆ ಅಂತ ಹೇಳಿ ಕುರ್ಚಿ ಕದನಕ್ಕೆ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ.
ತುಮಕೂರಿನ ಹೆಗ್ಗೆರೆ ಮೇಲ್ ಸೇತುವೆ ಕಾಮಗಾರಿಗೆ ಚಾಲನೆ ನೀಡಿ ಈ ಒಂದು ಹೇಳಿಕೆ ನೀಡಿದ್ದು, ಎಲ್ಲೋ ಒಂದು ಕಡೆ ಜಿ ಪರಮೇಶ್ವರ್ ಅವರು ಸಿಎಂ ಆಗಲಿ ಅನ್ನುವ ಆಸೆ ನನಗೂ ಇದೆ. ಇದೆ ನನ್ನೊಬ್ಬನಿಗೆ ಆಸೆ ಅನ್ನುವುದಕ್ಕಿಂತ ಜಿಲ್ಲೆಯ ಜನರಿಗೆ ಆಸೆ ಇದೆ. ಅಧಿಕಾರ ಮತ್ತೊಂದು ಮಗದೊಂದು ಅದೃಷ್ಟದ ಮೇಲಿದೆ. ಜಿ.ಪರಮೇಶ್ವರ್ ಅವರು ಗೃಹ ಮಂತ್ರಿಗಳಾಗಿ ಆಗುತ್ತಾರೆ ಅನ್ನೋ ಕನಸು ಇರಲಿಲ್ಲ.
ಎಲ್ಲೋ ಒಂದು ಕಡೆ ನನಗೂ ಆಸೆ ಇದೆ ಸುರೇಶಗೌಡ ಹೇಳಿದ್ದು ನೂರಕ್ಕೆ ನೂರು ಸತ್ಯ. ಹಾಗಾಗಿ ನನಗೂ ವೈಯಕ್ತಿಕವಾಗಿ ಆಸೆ ಇದೆ ಪರಮೇಶ್ವರ್ ಅವರು ರಾಜ್ಯದ ಮುಖ್ಯಮಂತ್ರಿಗಳು ಆಗಲಿ ನನ್ನೊನಿಗೆ ಪರಮೇಶ್ವರ ಮುಖ್ಯಮಂತ್ರಿ ಆಗಲಿ ಅಂತ ಅಲ್ಲ ಇಡೀ ಜಿಲ್ಲೆಯ ಮಹಾಜನತೆಗೆ ಆಸೆ ಇದೆ. ಡಿ ಡಿ ಕೆ ಶಿವಕುಮಾರ್ ಏನಾಗ್ಬೇಕು ಅನ್ನೋದಕ್ಕಿಂತ ಹಣೆಬರಹ ಏನಾಗುತ್ತದೆ ಅನ್ನುವುದು ದೊಡ್ಡದು ಎಂದರು.


