ವಿಜಯಪುರ:(ಡಿ.13), ಜಿಲ್ಲಾ ಪಂಚಾಯತ, ಉಪ ನಿರ್ದೇಶಕರು(ಆಡಳಿತ), ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಗುರುವಾರದಂದು ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸೈಕ್ಲಿಂಗ್ ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ನಗರದ ಬಂಜಾರಾ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ರಾಷ್ಟç ಮಟ್ಟದ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಬಾಲಕರ ೧೬ ವರ್ಷದೊಳಗಿನ ವಯೋಮಾನದ ೧೦-೧೫ ಕಿ.ಮೀ ಹಾಗೂ ೨ ಕಿ.ಮೀ ಟಿಟಿ ರೋಡ್ ಸ್ಪರ್ಧೆಯಲ್ಲಿ ಆಕಾಶ ತೆರದಾಳ ಪ್ರಥಮ ಸ್ಥಾನ ಪಡೆದರೆ, ಬಾಲಕಿಯರ ೧೦-೧೫ ಕಿ.ಮೀ ರೋಡ್ ಸೈಕ್ಲಿಂಗ್ನಲ್ಲಿ ಸಂಗವ್ವ ಬನಸೋಡೆ ಪ್ರಥಮ ಹಾಗೂ ೫೦೦ ಮೀ ರೋಡ್ ಸೈಕ್ಲಿಂಗ್ನಲ್ಲಿ ದ್ವಿತೀಯ, ೨ ಕಿ.ಮೀ ಟಿಟಿ ರೋಡ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಕರಿಷ್ಮಾ ತಟಗಾರ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ರಾಷ್ಟç ಮಟ್ಟದ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಬಂಜಾರಾ ಸಂಸ್ಥೆಯ ಅಧ್ಯಕ್ಷರಾದ ಡಿ.ಎಲ್.ಚವ್ಹಾಣ್, ಕಾರ್ಯಾಧ್ಯಕ್ಷರಾದ ಕೆ.ಜಿ.ರಾಠೋಡ, ಕಾರ್ಯದರ್ಶಿಗಳಾದ ಆರ್.ಡಿ.ಚವ್ಹಾಣ್, ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಇ.ಡಿ.ಲಮಾಣಿ, ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಂ.ಎಲ್.ಚವ್ಹಾಣ್, ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್.ಎಲ್.ದೊಡಮನಿ, ಎ.ಎಂ.ನಾಗೊAಡ, ಆರ್.ವ್ಹಿ.ಭುಜಂಗನವರ, ಎಸ್.ಬಿ.ಒಡೆಯರ, ಜೆ.ಕೆ.ರಾಠೋಡ, ಎಸ್.ಡಿ.ಚವ್ಹಾಣ್ರವರುಗಳು ಪ್ರೌಢ ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹರ್ಷವ್ಯಕ್ತಪಡಿಸಿದ್ದಾರೆ.
ಬಂಜಾರಾ ಪ್ರೌಢ ಶಾಲೆ: ಸೈಕ್ಲಿಂಗ್ ರಾಷ್ಟç ಮಟ್ಟಕ್ಕೆ ಆಯ್ಕೆ


