ಚೇಂಬರ್ ಆಫ್ ಕಾಮರ್ಸ್ ವಿಶೇಷ ಸಮನ್ವಯ ಸಮಿತಿಗೆ ಅಲಿವೇಲು ಸುರೇಶ್ ನೇಮಕ 

Pratibha Boi
ಚೇಂಬರ್ ಆಫ್ ಕಾಮರ್ಸ್ ವಿಶೇಷ ಸಮನ್ವಯ ಸಮಿತಿಗೆ ಅಲಿವೇಲು ಸುರೇಶ್ ನೇಮಕ 
WhatsApp Group Join Now
Telegram Group Join Now
ಬಳ್ಳಾರಿ: (ಡಿ13.), ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಹಾಗೂ ಗೌರವಾಧ್ಯಕ್ಷರಾದ ಕಾಂಡ್ರ ಬಾಬು ಮತ್ತು ವ್ಯವಸ್ಥಾಪಕ ಸಮಿತಿಯು, ಅಲಿವೇಲು ಕನ್ಸ್ಟ್ರಕ್ಷನ್ ಮತ್ತು ಡೆವಲಪರ್ಸ್ ನ ಮಾಲಿಕರಾದ ಅಲಿವೇಲು ಸುರೇಶ್ ಅವರನ್ನು ಸಂಸ್ಥೆಯ ವಿಶೇಷ ಸಮನ್ವಯ ಸಮಿತಿ  ತಂಡದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಈ ಸಂಬಂಧ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುವಂತೆ, 2025–26ನೇ ಸಾಲಿನ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿರುವ ಈ ನೇಮಕಾತಿಯ ಮೂಲಕ, ಬಳ್ಳಾರಿ ಜಿಲ್ಲೆಯ ವ್ಯಾಪಾರ ಸಮುದಾಯವನ್ನು ಪ್ರತಿನಿಧಿಸುವ ಜವಾಬ್ದಾರಿಯನ್ನು ಅಲಿವೇಲು ಸುರೇಶ್ ವಹಿಸಲಿದ್ದಾರೆ. ಸಂಸ್ಥೆಯ ವತಿಯಿಂದ ಆಯೋಜಿಸಲಾಗುವ ಸಭೆಗಳು, ಸಮ್ಮೇಳನಗಳು, ವ್ಯವಹಾರ ಸಂಬಂಧಿತ ಚರ್ಚಾಕೂಟಗಳು ಹಾಗೂ ವಿವಿಧ ಸಮಾರಂಭಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿ, ವ್ಯಾಪಾರ, ಸೇವೆಗಳ ಗುಣಮಟ್ಟ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ದಿಕ್ಕಿನಲ್ಲಿ ಸಂಸ್ಥೆಯೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುವ ನಿರೀಕ್ಷೆಯನ್ನು ಸಂಸ್ಥೆ ವ್ಯಕ್ತಪಡಿಸಿದೆ.
ಅಲಿವೇಲು ಸುರೇಶ್ ಅವರ ಅನುಭವ ಹಾಗೂ ಕಾರ್ಯಕ್ಷಮತೆ ಸಂಸ್ಥೆಯ ಚಟುವಟಿಕೆಗಳಿಗೆ ಮತ್ತಷ್ಟು ಬಲ ನೀಡಲಿದೆ ಎಂಬ ವಿಶ್ವಾಸವನ್ನು ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಹಾಗೂ ಗೌರವಾಧ್ಯಕ್ಷರಾದ ಕಾಂಡ್ರ ಬಾಬು ಮತ್ತು ವ್ಯವಸ್ಥಾಪಕ ಸಮಿತಿ ವತಿಯಿಂದ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
WhatsApp Group Join Now
Telegram Group Join Now
Share This Article