ಸಮಾಜದಲ್ಲಿ ಪ್ರೀತಿ ಕರುಣೆ ಇದ್ದರೆ ಶಾಂತಿ ಸಮೃದ್ಧಿ ಸಾಧ್ಯ: ಮೌಲಾನ ಅಬ್ದುಲ್ ಖವಿ ಸಾಹೇಬ್ 

Pratibha Boi
ಸಮಾಜದಲ್ಲಿ ಪ್ರೀತಿ ಕರುಣೆ ಇದ್ದರೆ ಶಾಂತಿ ಸಮೃದ್ಧಿ ಸಾಧ್ಯ: ಮೌಲಾನ ಅಬ್ದುಲ್ ಖವಿ ಸಾಹೇಬ್ 
WhatsApp Group Join Now
Telegram Group Join Now
ಸಿರುಗುಪ್ಪ: (ಡಿ.13), ಸೃಷ್ಟಿಕರ್ತ ಅಲ್ಲಾಹನ 1,24, 000 ರಸೂಲರಲ್ಲಿ ಮೊದಲಗೊಂಡು ಕೊನೆಯ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ್ ಸೊಲ್ಲೆಲ್ಲಾ ಹು ಅಲೈಹಿವ ಸಲ್ಲಂರವರ ಸೃಷ್ಟಿಕರ್ತ ಅಲ್ಲಾಹನ ಕುರಾನ್ ನಮ್ಮೆಲ್ಲರ ಅಲ್ಲಾಹನು ಒಬ್ಬನೇ ಇಡೀ ಪ್ರಪಂಚದ ನಿಯಂತ್ರಕನು ಆಗಿದ್ದಾನೆ ಅಲ್ಲಾಹನ ಹೊರತು ಬೇರೆ ಯಾರು ಆರಾಧ್ಯರಿಲ್ಲ ಇರುವುದೆಲ್ಲಾವೂ ಅವನದೇ ಎಂದು ತೆಲಂಗಾಣ ಆಂಧ್ರಪ್ರದೇಶ ಹೈದರಾಬಾದ್ ಬನಿವಾ ನಾಜಿಮ್ ಇ ದಾರಾ ಅಶ್ರಫುಲ್ ಉಲಮಾ ದೀನಿ ತಾಲಿಮಿ ಬೋರ್ಡ್ ಅಧ್ಯಕ್ಷರು ತೆಲಂಗಾಣ ಮತ್ತು ಆಂಧ್ರಪ್ರದೇಶ ಜಮೀಯತ್ ಉಲಮಾ -ಇ ಹಿಂದ್ ಉಪಾಧ್ಯಕ್ಷರು ಮುಸ್ಲೀಹ್-ಇ- ಮಿಲ್ಲತ್ ತರ್ಜು ಮಾನೆ ಅಹಲೆ ಸುನ್ನತ್ ಹಜರತ್ ಅಖ್ ದಸ್ ಮೌಲಾನ ಅಬ್ದುಲ್ ಖವಿ ಸಾಹಬ್ ಅವರು ಹೇಳಿದರು.
ಸಿರುಗುಪ್ಪ ನಗರದ ಬಳ್ಳಾರಿ ರಸ್ತೆ ವೈಷ್ಣವಿ ಗ್ರಾಂಡ್ ಫಂಕ್ಷನ್ ಹಾಲ್ ಸಭಾಭವನದಲ್ಲಿ ಗುರುವಾರ ಜಮೀಅತ್ ಉಲಮಾ-ಇ- ಹಿಂದ್ ಆಹ್ವಾನಿತ ಅತಿಥಿಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ಅಸ್ಸಲಾಂ ಅಲೈಕುಂ ವಾ ರಹಮತುಲ್ಲಾಹಿ ಬರಕಾತುಹು ಎಂಬ ಶುಭಾಶಯವೇ ಎಲ್ಲಾರ ಮೇಲೆ ಶಾಂತಿ ದಯೆ ಕರುಣೆ ಇರಲಿ ಎಂಬುದು ಸೌಜನ್ಯ ಪ್ರೀತಿಯ ಬಂಧ ಗಟ್ಟಿ ಯಾಗಾದಲೇ ಸಮಾಜದಲ್ಲಿ ಶಾಂತಿ ಸಮೃದ್ಧಿ ನೆಲೆಸುತ್ತದೆ ನಮಾಜ್ ಜೀವನಕ್ಕೆ ಸನ್ಮಾರ್ಗ ಸತ್ಯ ನ್ಯಾಯ ಸಮಾನತೆಯ ದಾರಿಯಲ್ಲಿ ಇಸ್ಲಾಂ ನಡೆಯಲು ಪ್ರೇರೇಪಿಸುತ್ತದೆ ಇಸ್ಲಾಮಿನ ಧಾರ್ಮಿಕ ಸಮಾಜದಲ್ಲಿ ಗೌರವಿಸುವ ಕರ್ತವ್ಯ ಸೌಜನ್ಯ ನೀತಿ ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರು ಪಾಲಿಸಿದಾಗಲೇ ಶಾಂತಿ ಸ್ಥಾಪನೆ ವೈಜ್ಞಾನಿಕ ಪ್ರಗತಿ ಅಥವಾ ಭೌತಿಕ ಸೌಲಭ್ಯಗಳಿಂದ ಶಾಶ್ವತ ಶಾಂತಿ ದೊರೆಯುವುದಿಲ್ಲ ಆತ್ಮವ ಲೋಕನ ಅಲ್ಲಾಹನ ಸ್ಮರಣೆಯಿಂದ ಮನಸ್ಸು ಶಾಂತಿ ಸಾಧ್ಯ ಪ್ರೀತಿಯಿಂದಲೇ ಸಹೋದರತೆ ಸಮಾಜದಲ್ಲಿ ಶಾಂತಿ ಏಕತೆ ಸಾಧಿಸಬಹುದು ಎಂದು ಅವರು ಅಭಿಪ್ರಾಯಪಟ್ಟು ಮಾತನಾಡುತ್ತಿದ್ದರು.
ಆಶೀರ್ವಚನ ದುವಾ ಮಾಡಿದರು ಸಿರುಗುಪ್ಪ ಜಮಿಅತ್ ಉಲಮಾ -ಇ-ಹಿಂದ್ ಅಧ್ಯಕ್ಷರು ಕೆ ಅಬ್ದುಲ್ ಖಾದರ್ ಜಿಲಾನಿ ಹಾಜಿ ಕೆ ಹುಸೇನ್ ಪೀರಾ ಅವರು ಸರ್ವರನ್ನು ಸ್ವಾಗತ ಬಯಸಿದರು ಮತ್ತು ಕಾರ್ಯಕ್ರಮ ನಿರೂಪಿಸಿದರು ಪ್ರಧಾನ ಕಾರ್ಯದರ್ಶಿ ಮುಫ್ತಿ ಸಲೀಂ ಸಾಹಬ್ ಖಜಾಂಚಿ ಹಾಜಿ ರಿಯಾಜ್ ಸಾಹಬ್ ಜಂಟಿ ಖಜಾಂಚಿ ಬಿ ಹೊನ್ನೂರ್ ಸಾಹಬ್ ಕಚೇರಿ ಉಸ್ತುವಾರಿ ಜಮೀರ್ ಗೋರಿ ಅವರು ಕಾರ್ಯಕ್ರಮದ ವ್ಯವಸ್ಥೆ ಮಾಡಿದರು ಖತೀಬ್ ಜಹೀರುದ್ದೀನ್ ಬಾಬು ಹಾಜಿ ಹಂಡಿ ಹುಸೇನ್ ಬಾಷಾ ಡಾ ಮೊಹಮ್ಮದ್ ಅಲಿ ಅಲ್ ಹಾಜ್ ಅಬ್ದುಲ್ ನಬಿ ಚಿಸ್ತಿ ನಿಜಾಮಿ ಹಾಜಿ ಚೌದ್ರಿ ಖಾಜಾ ಸಾಬ್ ದೇಶನೂರು ಹಾಜಿ ಹೋಟೆಲ್ ಅಬ್ದುಲ್ ಗಫೂರ್ ಸಾಬ್ ಹಾಜಿ ಕೆ ಮೊಹಮ್ಮದ್ ಅಲಿ ಜಿನ್ನಾ ಆಸ್ಪರಿ ಹಾಜಿ ಹುಸೇನ್ ಸಾಬ್ ಉಲಮಾ ಗಳು ಸಮಾಜದವರು ಮತ್ತಿತರ ಗಣ್ಯರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article