ವಿಜಯಪುರ:(ಡಿ.132), ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಸಮಿತಿ ಸಭೆಯನ್ನು ಇದೇ ತಿಂಗಳು ಡಿ. ೨೨ ರಂದು ಬೆಳಿಗ್ಗೆ ೧೧ ಗಂಟೆಗೆ ವಿಜಯಪುರ ನಗರದ ಅಂಬೇಡ್ಕರ್ ಭವನದಲ್ಲಿ ರಾಜ್ಯ ಮಟ್ಟದ ಸಭೆಯನ್ನು ಹಮ್ಮಿಕೊಳ್ಳಲು ವಿಜಯಪುರ ನಗರದ ಗಗನ ಮಹಲ್‌ದಲ್ಲಿ ಕರೆದಿದ್ದ ಜಿಲ್ಲಾ ಘಟಕದ ಪೂರ್ವ ಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಂದಿನ ರಾಜ್ಯ ಸಮಿತಿ ಸಭೆಯಲ್ಲಿ ರೈತರ ಗಂಭಿರ ಸಮಸ್ಯೆಗಳಾದ ವಿಮಾ ಪರಿಹಾರವನ್ನು ವಿಮಾ ಕಂಪನಿಯವರು ಹಾನಿಗೊಳಗಾದ ಬೆಳೆಗಳಿಗೆ ವಿಮೆ ತುಂಬಿದ ರೈತರಿಗೆ ಖಡ್ಡಾಯವಾಗಿ ಪರಿಹಾರ ಹಣ ಕೊಡಬೇಕು. ಮತ್ತು ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಎಲ್ಲ ಬೆಳೆಗಳಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಪರಿಹಾರ ಕೊಡುವಂತಾಗಬೇಕು. ಮತ್ತು ಸ್ಪಿçಂಕ್ಲರ್ ಪೈಪ್ ಗಳು ಕಳಪೆ ಗುಣಮಟ್ಟದಲ್ಲಿ ಇರುವುದರಿಂದ ಈ ವಿಷಯವಾಗಿದೆ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು ಸಾಮಾನ್ಯ ರೈತರಿಗೆ ಪೈಪ್ ನೀಡದೆ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ ಎಂದು ನೆಪ ಹೇಳುತ್ತಿದ್ದಾರೆ. ಆದರೆ ಎಸ್ಸಿ ಎಸ್ಟಿಯವರಿಗೆ ಪೈಪ್ ಗಳನ್ನು ಸರಬರಾಜು ಮಾಡುತ್ತಿದ್ದಾರೆ. ಇದು ಕಾನೂನು ಬಾಹೀರ. ಅದರಂತೆ ಪ್ರತಿಯೊಂದು ಪ್ರಾಥಮಿಕ ಕೃಷಿ ಸಂಘದ ಅಡಿಯಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ಶೀಘ್ರದಲ್ಲಿಯೇ ಪ್ರಾರಂಭಿಸಬೇಕು. ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ನಡೆದಿರುವ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹೋರಾಟಕ್ಕೆ ಬೆಂಬಲ ನೀಡುವುದಲ್ಲದೇ, ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಶೀಘ್ರದಲ್ಲಿ ಪ್ರಾರಂಭಿಸಬೇಕು. ರೈತರು ಬೆಳೆದ ಎಲ್ಲ ಬೆಲೆಗಳಿಗೂ ಯೋಗ್ಯ ಮಾರುಕಟ್ಟೆ ದರ ನಿಗಧಿಪಡಿಸುವುದು ಕೃಷಿ ಹೊಂಡಗಳನ್ನು ನಿರ್ಮಿಸಲು ರೈತರಿಗೆ ಅನುಕೂಲ ಮಾಡಿಕೊಡಬೇಕು.
ಹಾಳಾದ ಲಿಂಬೆಗೆ ಪರಿಹಾರ ಕೊಡುವುದು ಮತ್ತು ತೊಗರಿ ಪರಿಹಾರ ಪಡೆದುಕೊಳ್ಳಲು ಸರ್ಕಾರ ಹಲವಾರು ಮಾನದಂಡಗಳನ್ನು ಅಳವಡಿಸಿದ್ದು ಇದರಿಂದ ರೈತರು ಪರಿಹಾರದಿಂದ ವಂಚಿತರಾಗುತ್ತಿದ್ದಾರೆ. ಆಧಾರ ಲಿಂಕ್ ಕಡ್ಡಾಯಗೊಳಿಸುವುದನ್ನು ಕೈ ಬಿಡಬೇಕು. ಮತ್ತು ಎಫ್‌ಐಡಿ ಕೂಡಾ ಕೈ ಬಿಡಬೇಕು. ರೈತರ ಪಹಣಿ ಪತ್ರಗಳು ಕಂದಾಯ ಇಲಾಖೆಯಲ್ಲಿಯೇ ದೊರೆಯುವುದರಿಂದ ಆಯಾ ತಹಶೀಲ್ದಾರುಗಳೇ ಉತಾರೆಗಳನ್ನು ತೆಗೆದುಕೊಂಡು ಅತೀ ಜರೂರಾದ ವಿಷಯಗಳಿಗೆ ಮಾತ್ರ ¸ರೈತರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ಹಾಳಾದ ಬೆಳೆಗಳಿಗೆ ಕಡ್ಡಾಯವಾಗಿ ಪರಿಹಾರ ಕೊಡುವಂತಾಗಬೇಕು. ಮತ್ತು ಜಮೀನುಗಳ ದಾರಿ ಸಮಸ್ಯೆ ಕುರಿತು ಈ ಹಿಂದೆ ಹೊರಡಿಸಿದ ಸುತ್ತೋಲೆಯಲ್ಲಿ ಸ್ಪಷ್ಟತೆ ಇಲ್ಲ. ಆದ್ದರಿಂದ ಕಾನೂನು ತಿದ್ದುಪಡಿ ಮಾಡಿ ಸುಘ್ರೀವಾಜ್ಞೆ ಹೊರಡಿಸುವ ಮೂಲಕ ದಾರಿ ಸಮಸ್ಯೆಗೆ ಒಂದು ಅಂತ್ಯಕಾಣಿಸಬೇಕು. ಹೀಗೆ ಹಲವಾರು ರೈತರ ಸಮಸ್ಯೆಗಳನ್ನು ಅಂದಿನ ರಾಜ್ಯ ಸಮಿತಿಯಲ್ಲಿ ಚರ್ಚಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ನಂತರ ರೈತರ ಸಮಸ್ಯೆಗಳ ಕುರಿತು. ಮುಖ್ಯಮಂತ್ರಿಗಳೊAದಿಗೆ ಚರ್ಚಿಸಲು ದಿನಾಂಕ ನಿಗಧಿಪಡಿಸಿ ನಿಯೋಗ ತೆಗೆದುಕೊಂಡು ಹೋಗಲಾಗುವುದೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ ಮತ್ತು ಜಿಲ್ಲಾ ಸಂಘಟನಾ ಸಂಚಾಲಕ ಸದಾಶಿವ ಬರಟಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದಿನ ರಾಜ್ಯ ಸಮಿತಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಂಘದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪಾಂಡು ಹ್ಯಾಟಿ, ಸದಾಶಿವ ಬರಟಗಿ, ತಾಳಿಕೋಟಿ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ರಾಮನಗೌಡ ಹಾದಿಮನಿ, ಗುರುಲಿಂಗಪ್ಪ ಪಡಸಲಗಿ, ಮಲ್ಲಪ್ಪ ಪಡಸಲಗಿ, ಸಂಗಪ್ಪ ಪಡಸಲಗಿ, ದಾವಲಸಾಬ ನಧಾಪ, ಬಸವರಾಜ ಜಂಗಮಶೆಟ್ಟಿ, ಜಯಶ್ರೀ ಜಂಗಮಶೆಟ್ಟಿ, ಪ್ರಭು ಬಸ್ತವಾಡ, ಶಿವಪ್ಪ ಮಾಳಗೊಂಡ, ಹೊನಕೇರೆಪ್ಪ ತೆಲಗಿ, ಶಿವಪ್ಪ ಸುಂಠ್ಯಾಣ, ಬಸಯ್ಯ ಮಠ, ರ‍್ಯಾವಪ್ಪಗೌಡ ಫುಲೇಶಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


