ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ

Pratibha Boi
ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ
WhatsApp Group Join Now
Telegram Group Join Now

ಹುಬ್ಬಳ್ಳಿ: ಗೋಕುಲ ದ್ರುವತಾರೆ ಅನ್ವೇಷಣಾ ತಂಡ, ಗೋಕುಲ ಶಾಲೆಯ ಹಳೆಯ ವಿದ್ಯಾರ್ಥಿಗಳು ಮಕ್ಕಳ ಹಬ್ಬ ಅಂಗವಾಗಿ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಗೋಕುಲ ಗ್ರಾಮದಲ್ಲಿ ಅಯೋಜಿಸಿದ್ದರು.

ವಿಶೇಷವಾಗಿ ಅಂಗನವಾಡಿಗಳಲ್ಲಿ ಕಲಿಯುವ ಬಡಮಕ್ಕಳಿಗೆ ವೇದಿಕೆ ಸಿಗುವುದು ಅಪರೂಪ. ಧ್ರುವತಾರೆ ತಂಡ ಅಂಗನವಾಡಿ ಮಕ್ಕಳಿಗೆ ವೇಷಭೂಷಣ, ನೃತ್ಯ, ಚಿತ್ರಕಲೆ, ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ, ಅವರಲ್ಲಿರುವ ಪ್ರತಿಭೆಗೆ ನೀರೆರೆಯುವ ಕೆಲಸ ಮಾಡುತ್ತಾ ಬಂದಿದೆ. ಬಹುಮಾನ ನೀಡಿ ಪ್ರೊತ್ಸಾಹಿಸುತ್ತಿದೆ. ಗೋಕುಲ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆಗಳಲ್ಲಿರುವ ಮಕ್ಕಳ ನಿಜವಾದ ಪ್ರತಿಭೆಯನ್ನು ಗುರುತಿಸಿ ಆಯ್ಕೆಯಾದ ಮಕ್ಕಳು ಅದ್ಭುತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾಯ೯ದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಮಕ್ಕಳ ಹಬ್ಬವನ್ನು ಸಂತೋಷದಿಂದ ಜ್ಯೋತಿ ಬೆಳಗಿಸುವ ಮೂಲಕ ಉಧ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ , ಸಾಹಿತಿ ಪ್ರೊ ಎಸ್.ಎಂ. ಸಾತ್ಮಾರ, ಅಂಗನವಾಡಿ ಶಿಕ್ಷಕಿ ವಿದ್ಯಾ ಕುಲಕರ್ಣಿ, ವಿದೂಷಿ ಸುನಿತಾ ಜಗನ್ನಾಥ ಭಾಗವಹಿಸಿದ್ದರು. ವಿದ್ಯಾರ್ಥಿನಿ ಸ್ಪೂರ್ತಿ ತಿಪ್ಪಣ್ಣವರ  ಅವರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರು, ಗುರುಹಿರಿಯರು, ಗ್ರಾಮದ ಗಣ್ಯರು, ಭಾಗವಹಿಸಿದ್ದರು.

ದ್ರುವತಾರೆ ಸಂಘಟನೆಯ ಭೀಮಸಿ ಕುರ್ಡಿಕೇರಿ, ಶಿವಪ್ರಸಾದ ಮೇಲಿನಮನಿ, ಹಾಗೂ ತಂಡದವರು ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಸುಂದರವಾಗಿ ಆಯೋಜನೆ ಮಾಡಿದ್ದರು. ನೂರಾರು ಮಕ್ಕಳು, ಗ್ರಾಮದ ಹಿರಿಯರು, ಪಾಲಕರು, ಮಹಿಳೆಯರು, ಮುಂತಾದವರು ಭಾಗವಹಿಸಿದ್ದರು. ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ದ್ರುವತಾರೆ ಅನ್ವೇಷಣಾ ತಂಡದವರು ಮಾಡುತ್ತಿರುವ ಶೈಕ್ಷಣಿಕ ಕಾರ್ಯಗಳನ್ನು ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವಕರಲ್ಲಿರುವ ಶಿಕ್ಷಣ ಪ್ರೀತಿ ಮೆಚ್ಚುವಂತದ್ದು. ವಿಶೇಷವಾಗಿ ಸರಕಾರಿ ಪ್ರಾಥಮಿಕ ಹೈಸ್ಕೂಲ್ ಮಕ್ಕಳ ಶಿಕ್ಷಣಕ್ಕೆ ಪ್ರೊತ್ಸಾಹ ನೀಡುತ್ತಿದ್ದಾರೆ. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದರ ಮೂಲಕ ಮಕ್ಕಳಲ್ಲಿರುವ ಅಘಾದವಾದ ಸೂಪ್ತಪ್ರತಿಭೆಗೆ ನೀರೆರೆಯುತ್ತಿದ್ದಾರೆ. ಈ ಯುವಕರ ಕಾರ್ಯಚಟುವಟಿಕೆಗಳನ್ನು ಗಮನಿಸುತ್ತಾ ಬಂದಿರುವ ನನಗೆ ತುಂಬಾ ಹೆಮ್ಮೆ ಹಾಗೂ ಸಂತೋಷವೇನಿಸುತ್ತದೆ ಎಂದು ದ್ರುವತಾರೆ ಅನ್ವೇಷಣಾ ತಂಡಕ್ಕೆ ಶುಭ ಹಾರೈಸಿದ್ದಾರೆ. ಮೀನಾಕ್ಷಿ, ಸರಸ್ವತಿ, ಗೀತಾ, ನಿವೇದಿತಾ, ಶಂಕ್ರಮ್ಮ, ಸಂಜನಾ, ಅಕ್ಷತಾ, ಪೂಜಾ, ಹನುಮಂತ, ಭರತ, ವೀರೇಶ, ಭೀಮಸಿ ಕುರಡಿಕೇರಿ, ಸವಿತಾ, ಶಿವಪ್ರಸಾದ, ರೇಖಾ ಪರಾಪುರ, ಸಹನಾ, ಶ್ವೇತಾ, ಮಕ್ಕಳು, ಪಾಲಕರು, ಮುಂತಾದವರು ಭಾಗವಹಿಸಿ ಸಂಭ್ರಮಿಸಿದರು.

WhatsApp Group Join Now
Telegram Group Join Now
Share This Article