ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲಾಮಟ್ಟದ ಕಲಾಪ್ರತಿಭೋತ್ಸವ-2025

Pratibha Boi
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲಾಮಟ್ಟದ ಕಲಾಪ್ರತಿಭೋತ್ಸವ-2025
WhatsApp Group Join Now
Telegram Group Join Now
ಧಾರವಾಡ: (ಡಿ12). ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲಾಮಟ್ಟದ ಕಲಾಪ್ರತಿಭೋತ್ಸವ-2025 ವಿವಿಧ ಕಲಾ ಪ್ರಕಾರಗಳಲ್ಲಿ ಬಾಲ ಪ್ರತಿಭೆ, ಕಿಶೋರ ಪ್ರತಿಭೆ ಮತ್ತು ಯುವ ಪ್ರತಿಭೆಗಳ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮವನ್ನು  ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಂಸ್ಕೃತಿಕ ಭವನದಲ್ಲಿ ನಡೆಸಲಾಯಿತು.
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾಕೀರ ಸನದಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಆಯ್.ಜಿ.ಸನದಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ರಂಜಾನ ದರ್ಗಾ, ಚಿತ್ರಕಲಾ ಶಿಲ್ಪಿ ಶ್ರೀ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ. ಮಾರುತಿ, ಟ್ರಸ್ಟ್ ಸದಸ್ಯ ಡಾ. ಬಿ.ಎಚ್.ಕುರಿಯವರ, ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿದರು.
ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸ್ಕøತಿಕ ಭವನದಲ್ಲಿ ಬಾಲ ಪ್ರತಿಭೆಗಳ ಶಾಸ್ತ್ರೀಯ ನೃತ್ಯ ಸ್ಪರ್ಧೆಗಳು ಜರುಗಿದವು. ಬಾಲ ಪ್ರತಿಭೆಗಳ ಶಾಸ್ತ್ರೀಯ ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಮಧುರಾ ಗಾವಡೆ, ಮಾಧವಿ ಡಿ.ಕೆ. ಹಾಗೂ ವಿದುಷಿ ಸವಿತಾ ಹೆಗಡೆ ಅವರು ಕಾರ್ಯನಿರ್ವಹಿಸಿದರು.
ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕøತಿಕ ಸಮುಚ್ಚಯ ಭವನದಲ್ಲಿ ಬಾಲ, ಕಿಶೋರ ಮತ್ತು ಯುವ ಪ್ರತಿಭೆಗಳ ಸುಗಮ ಸಂಗೀತ ಸ್ಪರ್ಧೆ, ಯುವ ಪ್ರತಿಭೆಗಳ ನನ್ನ ಮೆಚ್ಚಿನ ಸಾಹಿತಿ ಆಶು ಭಾಷಣ ಸ್ಪರ್ಧೆ ಹಾಗೂ ಯುವ ಪ್ರತಿಭೆಗಳ ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಬಾಲ, ಕಿಶೋರ ಹಾಗೂ ಯುವ ಪ್ರತಿಭೆಗಳ ಸುಗಮ ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ಆರತಿ ಪಾಟೀಲ, ಶ್ರೀಕಾಂತ ಬಾಕಳೆ, ಹಾಗೂ ಭಾರ್ಗವಿ ಕುಲಕರ್ಣಿ ಅವರು ಭಾಗವಹಿಸಿದ್ದರು. ಯುವ ಪ್ರತಿಭೆಗಳ ಆಶು ಭಾಷಣ ಸ್ಪರ್ಧೆಯ ತೀರ್ಪುಗಾರರಾಗಿ ಡಾ. ಈರಣ್ಣ ಇಂಜಗನೇರಿ, ಸಂಗಮೇಶ ಹಡಪದ, ಹಾಗೂ ಡಾ.ದುಂಡಪ್ಪ ನಾಂದ್ರೆ ಅವರು ಇದ್ದರು. ಮತ್ತು ಯುವ ಪ್ರತಿಭೆಗಳ ನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಬಿ.ಆಯ್.ಈಳಗೇರ, ಎನ್. ರಾಜೇಶ್ವರಿ ಸುಳ್ಯ ಹಾಗೂ ವಿಜಯೇಂದ್ರ ಅರ್ಚಕ್ ಅವರು ಭಾಗವಹಿಸಿದ್ದರು. ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಬಾಲ, ಕಿಶೋರ ಮತ್ತು ಯುವ ಪ್ರತಿಭೆಗಳ ಚಿತ್ರಕಲಾ ಸ್ಪರ್ಧೆಗಳು ಜರುಗಿದವು.
WhatsApp Group Join Now
Telegram Group Join Now
Share This Article