ಮನ್ನಿಕಟ್ಟಿ ಶ್ರೀಮಾರುತೇಶ್ವರ ಬಂಗಾರದ ಕೀರಿಟ ಹಾಗೂ ಬೆಳ್ಳಿ ಪಲ್ಲಕ್ಕಿ ಮೇರವಣಿಗೆ

Pratibha Boi
ಮನ್ನಿಕಟ್ಟಿ ಶ್ರೀಮಾರುತೇಶ್ವರ ಬಂಗಾರದ ಕೀರಿಟ ಹಾಗೂ ಬೆಳ್ಳಿ ಪಲ್ಲಕ್ಕಿ ಮೇರವಣಿಗೆ
WhatsApp Group Join Now
Telegram Group Join Now

ಬಾಗಲಕೋಟೆ: (ಡಿ.12) ತಾಲೂಕಿನ ಮನ್ನಿಕಟ್ಟಿ ಗ್ರಾಮದ ಶ್ರೀ ಮಾರುತೇಶ್ವರ ಸ್ವಾಮಿಯ ನೂತನ ಬಂಗಾರದ ಕೀರಿಟ ಹಾಗೂ ಬೆಳ್ಳಿ ಪಲ್ಲಕ್ಕಿಯ ಭವ್ಯ ಮೇರವಣಿಗೆ ಶುಕ್ರವಾರ ಬಾಗಲಕೋಟೆ ನಗರದಲ್ಲಿ ಅದ್ದೂರಿಯಾಗಿ ಜರುಗಿತು.
ನಗರದ ಹಳೆ ತಹಸಿಲ್ದಾರ ಕಛೇರಿಯಿಂದ ಪ್ರಾರಂಭವಾದ ಕುಂಭ ಮೇಳ ಹಾಗೂ ಮೇರವಣಿಗೆ ಕೃಷ್ಣಾ ಟಾಕೀಜ, ವಲ್ಲಬಾಯಿ ಚೌಕ್, ಮಹಾತ್ಮಾಗಾಂದಿ ರಸ್ತೆ ಮೂಲಕ ಬಸವೇಶ್ವರ ವೃತ್ತ ತಲುಪಿತು, ಅಲ್ಲಿ ಮಾಜಿ ಶಾಸಕರಾದ ಡಾ.ವೀರಣ್ಣ ಚರಂತಿಮಠ ಅವರು ಬಸವೇಶ್ವರ ಪುತ್ಥಳಿಗೆ ಹಾಗೂ ಮಾರುತೇಶ್ವರನ ಬಂಗಾರದ ಕೀರಿಟ ಹಾಗೂ ಬೆಳ್ಳಿ ಪಲ್ಲಕ್ಕಿಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು,
ಈ ಸಂದರ್ಭದಲ್ಲಿ ಗ್ರಾಮ ಉಮೇಶ ಜುಮನಾಳ, ಪಕೀರಪ್ಪ ಕೋಣ್ಣುರ, ಸುರೇಶ ಮೇಟಿ, ಸಂಗಪ್ಪ ಕೊಪ್ಪದ, ನೀಲು ಕಟಗೇರಿ, ಕುಮಾರ ಬದನೆಕಾಯಿ, ಪರಸಪ್ಪ ಹುನಸಿಕಟ್ಟಿ ಸೇರಿದಂತೆ ಗ್ರಾಮದ ಹಿರಿಯರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article