ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ : ಚಿದಾನಂದ ಸವದಿ

Pratibha Boi
ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ : ಚಿದಾನಂದ ಸವದಿ
WhatsApp Group Join Now
Telegram Group Join Now
ಅಥಣಿ: ಶಾಸಕ ಲಕ್ಷ್ಮಣ ಸವದಿಯವರ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಅಥಣಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಹಲವು ಮಹತ್ವದ ಕಾಮಗಾರಿಗಳಿಗೆ ಯುವ ನಾಯಕ ಚಿದಾನಂದ ಸವದಿ ಅವರ ನೇತೃತ್ವದಲ್ಲಿ ಗುರುವಾರ ಭೂಮಿಪೂಜೆ ನೆರವೇರಿಸಲಾಯಿತು. ಈ ಯೋಜನೆಗಳು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೊಸ ಆಯಾಮ ನೀಡಲಿವೆ.
ಭೂಮಿಪೂಜೆ ನೆರವೇರಿಸಿದ ಪ್ರಮುಖ ಕಾಮಗಾರಿಗಳ ವಿವರ ಇಲ್ಲಿದೆ:
ಅಥಣಿ: ಕೆ.ಇ.ಬಿ ಸಮುದಾಯ ಭವನ.
ಅಥಣಿ (ಶಿನ್ನಾಳ್ ತಂಗಡಿ ರಸ್ತೆ): ಹೊಸ ಬಸ್ ನಿಲ್ದಾಣ (ಬಸ್ ಸ್ಟ್ಯಾಂಡ್) ನಿರ್ಮಾಣ. ಕೊಟ್ಟಲಗಿ (2 ಕಡೆ): ಎರಡು ಸಮುದಾಯ ಭವನಗಳ ನಿರ್ಮಾಣ, ಕೋಹಳ್ಳಿ: ಭಾವನದಡ್ಡಿ ಸಮುದಾಯ ಭವನ ಐಗಳಿ: ಮಾದರ ಓಣಿಯಲ್ಲಿ ಸಮುದಾಯ ಭವನ,ಶಿರಹಟ್ಟಿ ಆರ್.ಸಿ. ಪುನರ್ವಸತಿ ಕೇಂದ್ರ ನಂ.1 (ಗ್ರಾಮ ಪಂಚಾಯತ್ ವ್ಯಾಪ್ತಿ): ಮಾದರ ವಸತಿಗಳಲ್ಲಿ 50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿ,ಮಸರಗುಪ್ಪಿ ಗ್ರಾಮ: ಸಮುದಾಯ ಭವನ,ಶೇಗುಣಸಿ ಗ್ರಾಮ: ರಾಷ್ಟ್ರೀಯ ಬಸವ ದಳ ಸಂಘದ ಸಮುದಾಯ ಭವನ ಹಾಗೂ ಕುಡ್ನಳ ತೋಟದ ಅಂಗನವಾಡಿ ಕೇಂದ್ರ ಸಂಖ್ಯಾ 5ಕ್ಕೆ ಹೊಸ ಕಟ್ಟಡ ನಿರ್ಮಾಣ.
ಈ ಸಂದರ್ಭದಲ್ಲಿ ಮಾತನಾಡಿದ ಯುವ ನಾಯಕ ಚಿದಾನಂದ ಸವದಿ ಅವರು, “ಶಾಸಕರಾದ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಕ್ಷೇತ್ರದ ಪ್ರತೀ ಗ್ರಾಮದ ಜನರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇಂದು ಭೂಮಿಪೂಜೆ ನೆರವೇರಿಸಿರುವ ಸಮುದಾಯ ಭವನಗಳು ಮತ್ತು ರಸ್ತೆ ಕಾಮಗಾರಿಗಳು ಸ್ಥಳೀಯ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಿವೆ. ಅದರಲ್ಲೂ ಶಿರಹಟ್ಟಿ ಪುನರ್ವಸತಿ ಕೇಂದ್ರದ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ 50 ಲಕ್ಷ ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಯು ಈ ಭಾಗದ ಜನರಿಗೆ ಉತ್ತಮ ಸಂಪರ್ಕ ಕಲ್ಪಿಸಲಿದೆ. ಮುಂದಿನ ದಿನಗಳಲ್ಲಿ ತಮ್ಮ ಎಲ್ಲ ರೀತಿಯ ಬೇಡಿಕೆಗಳನ್ನು ಈಡೇರಿಸಿ ಈ ಮತಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿಸುವುದೇ ನಮ್ಮ ಗುರಿ ಯಾಗಿದೆ.ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ” ಎಂದು ತಿಳಿಸಿದರು.
 ಕಾರ್ಯಕ್ರಮದಲ್ಲಿ ಚಂದ್ರಶೇಖರ್ ನೇಮಗೌಡ, ನೂರಹಮದ ಡೊಂಗರಗಾಂವ,ಬಸವರಾಜ್ ಬಿರಾದರ್, ಪ್ರಹಲಾದ ಪಾಟೀಲ್, ಅಶೋಕ್ ಕಮ್ಮಣಗಿ, ಮೋಹನ್ ಕೆರೆಪ್ಪನವರ, ವಿವೇಕ ನಾರಗೊಂಡ, ಕಲ್ಮೇಶ್ ಯಲ್ಲಡಗಿ , ಬುಜಬಲೆ ಹಳ್ಳೂರ ಭೈರಪ್ಪ ಬಿಜ್ಜರಗಿ, ಶ್ರೀಮತಿ ಸುವರ್ಣಾ ಶೆಟ್ಟಪ್ಪ ಮುಂಡಗನೂರ,ಗಣಪತಿ ಪೂಜಾರಿ, ಯಲ್ಲಪ್ಪ ಮಿರ್ಜಿ, ದಿಲೀಪ್ ಮರಗಳೇ, ಗಣಪತಿ ಮರಗಳೇ,ರಾಚಪ್ಪ ಮಾದರ, ಅಪ್ಪಾಸಾಬ ಪಾಟೀಲ, ಪರಾಶರಾಮ ಸೋನಕರ, ಪಪ್ಪು ಮುಲ್ಲಾ,ಬಾಲಾ0ಆರ್.ಆರ್. ತೆಲಸಂಗ, ವೀರಣ್ಣ ವಾಲಿ,ರಾಮಗೊಂಡ ಪಾಟಿಲ,ದುಂಡಪ್ಪ ದೊಡಮನಿ, ಸಂತೋಷ ಅವರಸಂಗ, ರಾಹುಲ್ ಬಳ್ಳೊಳಿ, ರೋಹಿತ್ ಕಾವೇರಿ,ಸೋಮೇಶ್ ಅವರಸಂಗ, ಸರ್ಕಲ್ ಸೂಪರವೈಜರ ಶ್ರೀಮತಿ ರೂಪಶ್ರೀ ಕೊಡತೆ,ಶ್ರೀಮತಿ ವಿಜಯಲಕ್ಷ್ಮಿ ತಿರ್ಲಾಪುರ(ಒಡೆಯರ್), ಶ್ರೀಮತಿ ಜಯಶ್ರೀ ಚೌಗಲಾ ಅನಿಲ ಬೋಸ್ಲೆ, ಅಶೋಕ ಪಾಟೀಲ, ರಾಹುಲ ನಾಯಿಕ, ರಮೇಶ ಧೂಮಾಳೆ, ಬಸವರಾಜ್ ಭಂಗಿ ಸೇರಿದಂತೆ ಹಲವು ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article