ಅಥಣಿ : ಛತ್ರಪತಿ ಶಿವಾಜಿ ಮಹಾರಾಜರು ಯುಗಪುರುಷರಾಗಿದ್ದಾರೆ ಅವರು ರೈತರ ರಾಜರೆಂದೇ ಖ್ಯಾತರಾಗಿದ್ದಾರೆ. ಅವರ ಆಚಾರ ವಿಚಾರಗಳು ಅನುಕರಣಿಯವಾದವು. ಅವರಲ್ಲಿ ಮಹಿಳೆಯರ ಕುರಿತು ಅಪಾರ ಪವಿತ್ರ ಗೌರವವಿತ್ತು.ಶತ್ರು ಸೈನ್ಯದ ಮಹಿಳೆಯರ ಗೌರವವನ್ನೂ ಕೂಡಾ ಕಾಪಾಡಿದ ಶ್ರೇಯಸ್ಸು ಸಲ್ಲುತ್ತದೆ. ಚಂದ್ರ ಸೂರ್ಯರು ಇರುವವರೆಗೂ ಅವರ ಕೀರ್ತಿ ಇರುತ್ತದೆ. ಅಂತಹ ಮಹಾನ್ ವ್ಯಕ್ತಿಯಾದ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಮೂರ್ತಿಯ ಉದ್ಘಾಟನೆ ಅಥಣಿಯ ಶಿವಯೋಗಿಗಳ ಪವಿತ್ರ ನೆಲದಲ್ಲಿ ಜ್ಯೋತಿ ರಾಜ ಸಿಂಧೇರವರ ಅಮೃತ ಹಸ್ತದಿಂದ ಇದೆ 14 ರಂದು ರವಿವಾರ ಅಥಣಿಯ ಶಿವಾಜಿ ವೃತ್ತದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಅಥಣಿಯ ಮುಖಂಡರಾದ ದಿಗ್ವಿಜಯ ಪವಾರ ದೇಸಾಯಿ ಅವರ ನಿವಾಸದಲ್ಲಿ ಕಾರ್ಯಕ್ರಮ ಕುರಿತು ಜರುಗಿದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಅಥಣಿಯ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ 14ರಂದು ಸಾರ್ವಜನಿಕ ಕಾರ್ಯಕ್ರಮ ಜರುಗಲಿದೆ. ಶಿವಾಜಿ ಮಹಾರಾಜರು ರೈತರ ಸಲುವಾಗಿ ಸಾಲ ಮನ್ನಾ, ಹಾಗೂ ರೈತ ಕಲ್ಯಾಣ ಯೋಜನೆಗಳು ಇಂದಿಗೂ ಮಾದರಿ ಆಗಿದೆ. ನಾಲ್ಕು ನೂರು ವರ್ಷವಾದರೂ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿರುವರು ಅಂತಹ ಮಹಾನ್ ವ್ಯಕ್ತಿಯ ಮೂರ್ತಿಯ ಉದ್ಘಾಟನೆಗೆ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ 20 ರಿಂದ 25 ಸಾವಿರ ಜನ ಸೇರುವ ನಿರೀಕ್ಷೆಯಿದೆ. ಈ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ, ಮಾಜಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೇರಿದಂತೆ ಜಾತಿ ಧರ್ಮ ಪಂಥ ಮೀರಿ ಸರ್ವ ಧರ್ಮಿಯ ಜನತೆ ಈ ಕಾರ್ಯಕ್ರಮಕ್ಕೆ ಹೆಮ್ಮೆಯಿಂದ ಆಗಮಿಸಲಿದ್ದಾರೆ.ಅಷ್ಟೇ ಅಲ್ಲದೇ ಜಮಖಂಡಿ, ಚಿಕ್ಕೋಡಿ, ನಿಪ್ಪಾಣಿ ಭಾಗದಿಂದ ಸಾವಿರ ಸಾವಿರ ಸಂಖ್ಯೆಯ ಜನರು ಜನ ಆಗಮಿಸಲಿದ್ದಾರೆ.
ಈ ವೇಳೆ ಮುಖoಡರಾದ ದಿಗ್ವಿಜಯ ಪವಾರದೇಸಾಯಿ ಅವರು ಮಾತನಾಡಿ ಬರುವ 14 ರಂದು ಶಿವಾಜಿ ಮಹಾರಾಜರ ಭವ್ಯ ಮೂರ್ತಿ ಅನಾವರಣ ಆಗುತ್ತಿದೆ. ಅಥಣಿಯ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು, ಮಾಜಿ ಸಚಿವ ಶ್ರೀಮಂತ ಪಾಟೀಲ್, ಮಾಜಿ ಶಾಸಕ ಮಹೇಶ ಕುಮಠಳ್ಳಿ ಸೇರಿದಂತೆ ಎಲ್ಲರೂ ಪುತ್ತಳಿ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಅಥಣಿಯ ಎಲ್ಲ ಜಾತಿ ಸಮುದಾಯದ ಹಲವಾರು ಜನ ಸಾಮಾನ್ಯರ ಆಶಯದಂತೆ ನೆರವೇರುತ್ತದೆ. ಶಿವಾಜಿ ಮಹಾರಾಜರ 13 ನೆ ವಂಶಜರು ಶಾಹು ಮಹಾರಾಜರು ದೀನ ದಲಿತರ ಸಲುವಾಗಿ ಶ್ರಮಿಸಿದವರು ಅಂಬೇಡ್ಕರ್ ಅವರ ಸಹಿತ ಹಲವಾರು ಜನರಿಗೆ ಸಹಾಯ ಹಸ್ತ ಚಾಚಿದವರು. ಯುಗ ಪುರುಷರ ಈ ಕಾರ್ಯಕ್ರಮಕ್ಕೆ ಎಲ್ಲ ಜಾತಿ ಸಮುದಾಯದ ಜನರು ಈ ಕಾರ್ಯಕ್ರಮಕ್ಕೆ ಸಹಾಯ ಸಹಕಾರ ನೀಡಿದ್ದಾರೆ. ಅವರೆಲ್ಲರಿಗೆ ಕೃತಜ್ಞತೆ ಸಲ್ಲಿಸುತ್ತೇವೆ.ಶಿವಾಜಿ ಮಹಾರಾಜರ ಮೂರ್ತಿಯ ಅನಾವರಣ ಸಮಾರಂಭಕ್ಕೆ ಸಂಬಾಜಿ ಬಿ.ಡೆ ಗುರೂಜಿ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಶಿಂಧಿಯಾ, ಕೊಲ್ಲಾಪೂರದ ಛತ್ರಪತಿ ಶಾಹು ಮಹಾರಾಜ, ಶಿವಾಜಿ ಮಹಾರಾಜರ ವಂಶಸ್ಥರು, ಅಥಣಿ ತಾಲೂಕಿನ ಎಲ್ಲ ಪೂಜ್ಯರು ರಾಜ್ಯ ಲೋಕೋಪಯೋಗಿ ಇಲಾಖೆಯ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಸಚಿವ ಸಂತೋಷ ಲಾಡ,ಮಾಜಿ ಉಪಮುಖ್ಯಮಂತ್ರಿ ಹಾಲಿ ಶಾಸಕರಾದ ಲಕ್ಷ್ಮಣ ಸವದಿ,ಮಾಜಿ ಸಚಿವ ಶ್ರೀ ಮಂತ ಪಾಟೀಲ್, ಕಾಗವಾಡ ಶಾಸಕ ರಾಜು ಕಾಗೆ,ಶಾಸಕ ಶ್ರೀನಿವಾಸ ಮಾನೆ, ಬಂಟಿ ಪಾಟೀಲ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗಣ್ಯರಾದ ಮಾಜಿ ಸಚಿವ ಶ್ರೀಮಂತ ಪಾಟೀಲ, ಮುಖoಡರಾದ ದಿಗ್ವಿಜಯ ಪವಾರ ದೇಸಾಯಿ,ಉಜ್ವಲಸಿಂಗ ಪವಾರ ದೇಸಾಯಿ, ವಿಕ್ರಾಂತ ಪವಾರ ದೇಸಾಯಿ, ಮಯೂರ ಪವಾರ ದೇಸಾಯಿ, ಅಭಿರತ ಪವಾರ ದೇಸಾಯಿ,ಅಭಿಷೇಶ ಪವಾರ ದೇಸಾಯಿ, ಸುನೀಲ ಪವಾರ ದೇಸಾಯಿ,ಭಾವುಸಾಹೇಬ ಜಾಧವ, ನಾನಾಸಾಹೇಬ ಅವತಾಡೇ, ಪ್ರಭಾಕರ ಚವ್ಹಾಣ,ಸಿದ್ದು ಪಾಟೀಲ,ಪ್ರಕಾಶ ಮೊರೆ,ರವೀಂದ್ರ ದೇಸಾಯಿ, ಶಂಕರ ಪಾಟೀಲ,ಸಂದೀಪ ಪಾಟೀಲ, ಪ್ರವೀಣ ಜಾಧವ, ಸಚಿನ ದೇಸಾಯಿ,ನಾಗರಾಜ ಸಿಂಧೆ,ರಮೇಶ ಭೋಸಲೆ, ಪ್ರಶಾಂತ ಚವ್ಹಾಣ,ವಿಲಾಸ ಪಾಠಣಕರ,ಮಾರುತಿ ಮೋಹಿತೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.


