ಬಸವನ ಬಾಗೇವಾಡಿ :-ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ತಾಲೂಕು ಚುನಾವಣೆಯಲ್ಲಿ ತಾಲೂಕಾ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಕೋಶಾಧ್ಯಕ್ಷ ಸೇರಿ ನಿರ್ದೇಶಕ ಸ್ಥಾನಗಳಿಗೆ ಪದಾಧಿಕಾರಿಗಳು ಆವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಡಿಸೆಂಬರ್ 10 ರಂದು ನಡೆದ 2025-28ನೇ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಕೋಶಾಧ್ಯಕ್ಷ ಸ್ಥಾನಗಳಿಗೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದರಿಂದ 5 ಸ್ಥಾನದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರೆಂದು ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚುನಾವಣೆ ಉಸ್ತುವಾರಿ ಇಂದುಶೇಖರ ಮಣೂರ, ಜಿಲ್ಲಾ ಕೋಶಾಧ್ಯಕ್ಷ ರಾಹುಲ ಅಷ್ಟೆ ಹೇಳಿದರು.
ಅಜೀಜ ಬಸವರಾಜ(ರಾಜು) ಗಣಾಚಾರಿ (ತಾಲೂಕು ಅಧ್ಯಕ್ಷ), ಬಳಬಟ್ಟಿ (ಉಪಾಧ್ಯಕ್ಷ), ದಯಾನಂದ ಬಾಗೇವಾಡಿ(ಪ್ರಧಾನ ಕಾರ್ಯದರ್ಶಿ), ಜಗದೀಶ ಹಳ್ಳೂರ (ಕಾರ್ಯದರ್ಶಿ) ನಾಗಪ್ಪ(ನಾಗೇಶ) ನಾಗೂರ(ಕೋಶಾಧ್ಯಕ್ಷ) ನಿದೇರ್ಶಕ ಮಂಡಳಿಗೆ ಶ್ರೀಶೈಲ ಕೌಲಗಿ, ಸಾತಪ್ಪ(ಮುತ್ತು) ಕಿಣಗಿ, ಮಲ್ಲಿಕಾರ್ಜುನ ಬುರ್ಲಿ, ಯಮನಪ್ಪ ಅಂಗಡಗೇರಿ ಅವರು ಅವಿರೋಧವಾಗಿ ಆಯ್ಕೆಯಾದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪದಾಧಿಕಾರಿಗಳು ಆಯ್ಕೆಗೊಂಡ ತಾಲೂಕು ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.


