ಬೆಳಗಾವಿ: ನಗರದ ರಾಮತೀರ್ಥ ನಗರದ ಕೆ ಎಸ್ ಸಿ ಎ ಕ್ರಿಕೆಟ್ ಮೈದಾನದಲ್ಲಿ ಇಂದು ರಾಜ್ಯದ ಮಾಧ್ಯಮ ಸ್ನೇಹಿತರ ತಂಡ ಹಾಗೂ ಕರ್ನಾಟಕದ ಭಾಜಪಾ ತಂಡದ ಕ್ರಿಕೆಟ್ ಪಂದ್ಯಾವಳಿಗಳನ್ನು ಆಡಲಾಯಿತು. ಬೆಳಿಗ್ಗೆ ವಾಯು ವಿಹಾರಕ್ಕೆ ಬಂದಿದ್ದ ಬಿಜೆಪಿ ಕರ್ನಾಟಕದ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರರವರು ಸಸಿಗಳಿಗೆ ನೀರುಣಿಸುವ ಸೇವಾ ಕಾರ್ಯದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುಭಾಷ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಮಹಾಂತೇಶ ವಕ್ಕುಂದ, ರಾಮತೀರ್ಥ ನಗರದ ಪ್ರಮುಖರಾದ ಅಣ್ಣಾಸಾಹೇಬ ದೇಸಾಯಿ, ಮುಖ್ತಾರ ಪಠಾಣ, ವಿಲಾಸ ಕೆರೂರ, ಸುರೇಶ ಯಾದವ, ಈರಯ್ಯ ಖೋತ, ಶಶಿ ಬಾಡಕರ, ನವೀನ ಮೆಟಗುಡ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


