ಛತ್ತೀಸ್ ಘಡದಲ್ಲಿ ಮತ್ತೊಂದು ನಕ್ಸಲ್ ಅಡಗುದಾಣ: ಸ್ಫೋಟಕ, ಶಸ್ತ್ರಾಸ್ತ್ರ ವಶಕ್ಕೆ

Ravi Talawar
ಛತ್ತೀಸ್ ಘಡದಲ್ಲಿ ಮತ್ತೊಂದು ನಕ್ಸಲ್ ಅಡಗುದಾಣ: ಸ್ಫೋಟಕ, ಶಸ್ತ್ರಾಸ್ತ್ರ ವಶಕ್ಕೆ
WhatsApp Group Join Now
Telegram Group Join Now

ರಾಯ್ ಪುರ,ಏಪ್ರಿಲ್​ 08:  ಛತ್ತೀಸ್ ಘಡದಲ್ಲಿ ಮತ್ತೊಂದು ನಕ್ಸಲ್ ಅಡಗುದಾಣವನ್ನು ಭದ್ರತಾ ಪಡೆಗಳು ಭೇದಿಸಿದ್ದು, ಕ್ಸಲರು ಅಡಗಿಸಿಟ್ಟಿದ್ದ ಭಾರಿ ಪ್ರಮಾಣದ ಸ್ಫೋಟಕ, ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಛತ್ತೀಸಗಢದ ಸುಖ್ಮಾ ಜಿಲ್ಲೆಯ ಎರಡು ಕಡೆಗಳಲ್ಲಿ ನಕ್ಸಲ ಅಡಗುದಾಣಗಳನ್ನು ಭದ್ರತಾ ಪಡೆಗಳು ಪತ್ತೆ ಮಾಡಿದ್ದು, ಇಲ್ಲಿ ನಕ್ಸಲರು ಅಡಗಿಸಿಟ್ಟಿದ್ದ ಭಾರಿ ಪ್ರಮಾಣದ ಸ್ಫೋಟಕವನ್ನು ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಸಿಆರ್‌ಪಿಎಫ್, ಕೋಬ್ರಾ ಮತ್ತು ಬಸ್ತಾರ್ ಬೆಟಾಲಿಯನ್‌ಗಳ ಜಂಟಿ ಕಾರ್ಯಾಚರಣೆ ನಡೆಸಿ ಕಿಸ್ತರಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ತೊಂಡಮಾರ್ಕ ಮತ್ತು ಡಬ್ಬಮಾರ್ಕ ಹಳ್ಳಿಗಳಲ್ಲಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸೇನಾ ಮೂಲಗಳ ಪ್ರಕಾರ ದಾಳಿ ವೇಳೆ 350 ಗ್ರಾಂ ಜಿಲೆಟಿನ್ ಸ್ಟಿಕ್ಸ್, 105 ಎಲೆಕ್ಟ್ರಿಕ್ ಡೆಟೊನೇಟರ್ಸ್, ಬ್ಯಾರೆಲ್ ಗ್ರೆನೇಡ್ ಲಾಂಚರ್(ಬಿಜಿಎಲ್), 22 ಬಿಜಿಎಲ್ ಪ್ರೊಜೆಕ್ಟರ್‌ಗಳು, 19 ಬಿಜಿಎಲ್ ಬಾಂಬ್‌ಗಳು, 5 ಕೆ.ಜಿ ತೂಕದ ಸುಧಾರಿತ ಸ್ಫೋಟಕ ಸಾಧನ, 30 ಕೆ.ಜಿ ಗನ್ ಪೌಡರ್ ಮತ್ತು ಮಾವೋವಾದಿಗಳ ಬರಹವಿರುವ ಪುಸ್ತಕಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article