ರಾಯಬಾಗ: ವಕೀಲರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

Hasiru Kranti
ರಾಯಬಾಗ: ವಕೀಲರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
WhatsApp Group Join Now
Telegram Group Join Now

ರಾಯಬಾಗ: ವಕೀಲರ ಸಂಘಕ್ಕೆ 2025-27ನೇ ಸಾಲಿನ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ.ಆರ್.ಕೋಟಿವಾಲೆ, ಉಪಾಧ್ಯಕ್ಷರಾಗಿ ಕೆ.ಎಲ್.ಕೆರೂರೆ, ಕಾರ್ಯದರ್ಶಿಯಾಗಿ ಆರ್. ಎಸ್.ಹಳೆಪ್ಪಗೋಳ, ಜಂಟಿ ಕಾರ್ಯದರ್ಶಿಯಾಗಿ ಎಮ್.ಬಿ.ಬಂತಿ ಆಯ್ಕೆಯಾದರು. ಮೊದಲ ಬಾರಿಗೆ ಮಹಿಳೆಯರಿಗೆ ಮೀಸಲಾಗಿದ್ದ ಖಜಾಂಚಿ ಸ್ಥಾನಕ್ಕೆ ಸವಿತಾ ಸಂಗೋಟೆ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಎ.ಬಿ.ಮಂಗಸೂಳೆ, ಸಹಾಯಕರಾಗಿ ಆರ್.ಎಚ್.ಗೊಂಡೆ, ಎನ್.ಎಸ್.ಒಡೆಯರ, ಸಾರಿಕಾ ಕಾಂಬಳೆ ಕಾರ್ಯನಿರ್ವಹಿಸಿದರು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಿ, ಸತ್ಕರಿಸಲಾಯಿತು.
ವಕೀಲರಾದ ವಿ.ಎಸ್.ಪೂಜಾರಿ, ಮಹೇಶ ಹೊಸಮನಿ, ಎಸ್.ಎಮ್.ಸಲಗರೆ, ಎಸ್.ವಿ.ಪೂಜಾರಿ, ಯುವ.ಎನ್.ಉಮರಾಣಿ, ಬಿ.ಕೆ.ಶಿಂಗಾಡೆ, ಎಸ್.ಬಿ.ಬಿರಾದಾರಪಾಟೀಲ, ಎಸ್.ಬಿ.ಶ್ರೀಗೊಂಡ, ವಿನೋದ ಪೂಜೇರಿ, ಶ್ರೀದೇವಿ ನಾಯಿಕ, ಪದ್ಮಜಾ ಮಗದುಮ್ಮ, ವಿ.ಎಮ್.ಗಲಗಲಿ, ಆರ್.ಎಸ್.ಕಳ್ಳಿಗುದ್ದಿ ಸೇರಿ ಅನೇಕ ಹಿರಿಯ ಮತ್ತು ಕಿರಿಯ ವಕೀಲರು ಇದ್ದರು.
ಅಭ್ಯರ್ಥಿಗಳು ಪಡೆದ ಮತಗಳ ವಿವರ:
ಅಧ್ಯಕ್ಷ ಸ್ಥಾನಕ್ಕೆ: ಪಿ.ಎಮ್.ದರೂರ-132 ಮತ, ಕೆ.ಆರ್.ಕೋಟಿವಾಲೆ-211 ಮತ.
ಉಪಾಧ್ಯಕ್ಷ ಸ್ಥಾನಕ್ಕೆ: ಕೆ.ಎಲ್.ಕೆರೂರೆ-223 ಮತ, ಎಲ್.ಎಚ್.ನಾಗರಮುನ್ನೋಳ್ಳಿ-123 ಮತ,
ಕಾರ್ಯದರ್ಶಿ ಸ್ಥಾನಕ್ಕೆ: ಆರ್.ಎಸ್.ಹಳೆಪ್ಪಗೋಳ-186 ಮತ, ಆರ್.ಓ.ಲೋಹಾರ-159 ಮತ,
ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ: ಎಮ್.ಬಿ.ಬಂತಿ-187 ಮತ, ಪಿ.ಜೆ.ಸತ್ತಿ- 160 ಮತ ಪಡೆದರು.
WhatsApp Group Join Now
Telegram Group Join Now
Share This Article