ಸಂಗಳದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ಜಗದ್ಗುರು ಶಿವಾನಂದ ಮಠದ ಮಹಾರಥೋತ್ಸವ 

Hasiru Kranti
ಸಂಗಳದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ಜಗದ್ಗುರು ಶಿವಾನಂದ ಮಠದ ಮಹಾರಥೋತ್ಸವ 
WhatsApp Group Join Now
Telegram Group Join Now
ರಾಮದುರ್ಗ: ತಾಲೂಕಿನ ಸುಕ್ಷೇತ್ರ ಸಂಗಳ ಗ್ರಾಮದ ಶ್ರೀ ಜಗದ್ಗುರು ಶಿವಾನಂದ ಮಠದ 17 ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮಲೀನ ಸದ್ಗುರು ಶ್ರೀ ರಾಚೋಟೇಶ್ವರ ಮಹಾ ಸ್ವಾಮಿಗಳವರ ಸ್ಮರಣೋತ್ಸವ ಹಾಗೂ ಸತ್ಸಂಗ ಸಮ್ಮೇಳನ ಕಾರ್ಯಕ್ರಮವು ಡಿಸೆಂಬರ್ 7 ರಿಂದ 9 ರವರೆಗೆ ಕಾರ್ಯಕ್ರಮಗಳು ನೆರವೇರಿದವು.
        ಜಗದ್ಗುರು ಶ್ರೀ ಅಭಿನವ ಶಿವಾನಂದ ಮಹಾಸ್ವಾಮಿಗಳವರ ಶ್ರೀ ಶಿವಾನಂದ ಬೃಹನ್ಮಠ ಗದಗ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಮಠದ ಪೂಜ್ಯರಾದ ಶ್ರೀ ಚಿದ್ರೂಪಾನಂದ ಮಹಾ ಸ್ವಾಮಿಗಳವರ ಸದಿಚ್ಛೆಯ ಮೇರೆಗೆ ಕಾರ್ಯಕ್ರಮಗಳು ನೆರವೇರಿದವು.
        ಡಿ.7 ರಂದು ಮುಂಜಾನೆ ಪ್ರಣವ ಧ್ವಜಾರೋಹಣವು ಶ್ರೀಗಳ ಅಮೃತ ಹಸ್ತದಿಂದ ನೆರವೇರಿತು. ಡಿ.9 ರಂದು  ಮುಂಜಾನೆ ಬ್ರಹ್ಮಲೀನ ಸದ್ಗುರು ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳವರ ಕರ್ತೃ ಗದ್ದುಗೆಯ ಮಹಾರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ ಮಹಾಮಂಗಲ ನಂತರ ಮಹಾಪ್ರಸಾದ ಕಾರ್ಯಕ್ರಮ ಜರುಗಿತು.
       ಸಾಯಂಕಾಲ ಶ್ರೀ ಮಜ್ಜಗದ್ಗುರು ಅಭಿನವ ಶಿವಾನಂದ ಮಹಾಸ್ವಾಮಿಗಳವರ ಅಡ್ಡಪಲ್ಲಕ್ಕಿ  ಮಹೋತ್ಸವವು ಸಕಲ ರಾಜ ಮರ್ಯಾದೆ ವೈಭವದಿಂದ ಹಾಗೂ ಎಲ್ಲ ಭಜನಾ ಮೇಳ ಹಾಗೂ ಕುಂಭ ಮೇಳದೊಂದಿಗೆ ಊರಿನ ಪ್ರಮುಖ ಬಿದೀಗಳಲ್ಲಿ ಸಾಗಿ ಶ್ರೀಮಠಕ್ಕೆ ತಲುಪಿ ಬಂದ ನಂತರ ಮಹಾರಥೋತ್ಸವ ಕಾರ್ಯಕ್ರಮವು ದಿವ್ಯ ಸಾನಿಧ್ಯ ಪರಮಪೂಜ್ಯ ಸದ್ಗುರು ಶ್ರೀ ನಿಜಗುಣ ಮಹಾಸ್ವಾಮಿಗಳು, ಪರಮ ಪೂಜ್ಯ ಸದ್ಗುರು ಶ್ರೀ ಅಭಿನವ ರೇವಣಸಿದ್ದೇಶ್ವರ ಮಹಾಸ್ವಾಮಿಗಳು,ಪ. ಪೂ. ಸದ್ಗುರು ಶ್ರೀ ಅಭಿನವ ನಾಗಲಿಂಗ ಮಹಾಸ್ವಾಮಿಗಳು, ಪ. ಪೂ. ಸದ್ಗುರು ಶ್ರೀ ನಿಜಾಂನಂದ ಮಹಾಸ್ವಾಮಿಗಳು, ಪ. ಪೂ. ಶ್ರೀ ಶಿವಾನಂದ ಮಹಾಸ್ವಾಮಿಗಳು, ಶ್ರೀ ಶಿವಶರಣ ಬಸಯ್ಯ ನಾಗಯ್ಯ ಬಳಗಾನೂರ ಹಾಗೂ ವಿವಿಧ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಮಹಾರಥೋತ್ಸವವು ವೈಭವದಿಂದ ಜರುಗಿತು.ಸುತ್ತ ಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
WhatsApp Group Join Now
Telegram Group Join Now
Share This Article