ರಾಯಭಾಗ:- ವಕೀಲರ ಸಂಘದ ಎರಡು ವರ್ಷದ ಅವಧಿಗೆ ಮಂಗಳವಾರ ಚುನಾವಣೆ ನಡೆದಿದೆ ಅದೇ ದಿನ ಸಾಯಂಕಾಲ ಮತ ಎಣಿಕೆ ನಡೆದು ಪದಾಧಿಕಾರಿಗಳು ಆಯ್ಕೆ ಆಗಿದ್ದಾರೆ ವಕೀಲರ ಚುನಾವಣೆಯಲ್ಲಿ ಒಟ್ಟು 349 ಮತಗಳು ಚಲಾವಣೆಗೊಂಡಿವೆ
ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೃಷ್ಣಾ ಕೋಟಿವಾಲೆ, ಉಪಾಧ್ಯಕ್ಷರಾಗಿ ಕೆಎಲ್ ಕೆರೂರೆ, ಪ್ರಧಾನ ಕಾರ್ಯದರ್ಶಿಯಾಗಿ ಆರ್ ಎಸ್ ಹೊಳೆಪ್ಪಗೋಳ, ಜಂಟಿ ಕಾರ್ಯದರ್ಶಿಯಾಗಿ ಎಂಬಿ ಬಂತಿ ಆಯ್ಕೆಯಾಗಿದ್ದಾರೆ ಇವರ ಆಯ್ಕೆಯನ್ನು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ವಕೀಲರಾದ ಎ ಬಿ ಮಂಗಸುಳಿ ಪ್ರಮಾಣ ಪತ್ರ ನೀಡಿ ಶುಭ ಹಾರೈಸಿದ್ದಾರೆ


