ಬೆಳಗಾವಿ ಡಿ., ೦೯- ಯಾವೂದೋ ಮೂಲದಿಂದ ಹಣದ ವ್ಯವಸ್ಥೆ ಮಾಡಿಕೊಂಡು ಕೃಷ್ಣಾ ಮೇಲ್ದಂಡನೆ ಯೋಜನೆ ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕೆ ಕೇಂದ್ರದಿಂದ ಅಧಿಸೂಚನೆ ಹೊರಡಿಸಬೇಕಾಗಿದೆ. ಆದ್ದರಿಂದ ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡದ ತಂದು ಅಧಿಸೂಚನೆ ಮಾಡಿಸಬೇಕು ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ ಹೇಳಿದರು.
ವಿಧಾನಸಭೆಯಲ್ಲಿಂದು ಶಾಸಕ ಯತ್ನಾಳ ಅವರು ಎತ್ತಿದ ಪ್ರಶ್ನೆಗೆ ಉತ್ತರಿಸುತ್ತಾ ನಾನು ಅನೇಕ ಸಭೆಗಳನ್ನು ಕರೆದು ವಿ.ಸೋಮಣ್ಣವರೊಂದಿಗೆ ಕೇಂದ್ರ ಸಚಿವರನ್ನು ಬೇಟಿಯಾಗಿದ್ದೇವೆ. ೨೦೧೩ ರಿಂದ ಇಲ್ಲಿಯವರೆಗೆ ಅವಾರ್ಡ ಪಾಸ ಆಗ್ತಾಇಲ್ಲ. ಈ ಯೋಜನೆ ಕೈಗೊಳ್ಳಲು ನಾವು ಈಗಾಗಲೇ ಯೋಜನೆಯನ್ನು ಹಾಕಿಕೊಂಡಿದ್ದೆವೆ. ವರ್ಷಕ್ಕೆ ೧೫-೨೦ ಸಾವಿರ ನೀಡಬೇಕೆಂದು, ಮೂರ್ನಾಲ್ಕು ವರ್ಷದಲ್ಲಿ ಭೂ ಸ್ವಾಧೀನ ಪೂರ್ಣಗೊಳಿಸಬೇಕೆಂದು ಕಾಯ ಆರಂಭಿಸಿದ್ದೇವೆ. ನೀವು ಕೇಂದ್ರದ ಮೇಲೆ ಒತ್ತಡ ಹಾಕಿ ಅಧಿಸೂಚನೆ ಹೊರಡಿಸಿದರೆ, ಶೀಘ್ರ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದರು.

ಹಳೆಯ ಭೂಸ್ವಾಧೀನದ ಐದು ಸಾವಿರಕ್ಕೂ ಹೆಚ್ಚು ಪ್ರಕರಣಗಳಿದ್ದು, ಆ ರೈತರ ಹಣ ಪಾವತಿಸಲು ಶಾಸಕ ಬಸನಗೌಡಪಾಟೀಲ ಯತ್ನಾಳ ಆಗ್ರಹಿಸಿದರು. ಅಧಿಕಾರಿಗಳು ಮತ್ತು ವಕೀಲರೊಂದಿಗೆ ಶಾಮಿಲಾಗಿ ಪರಿಹಾರ ಮೊತ್ತನ್ನು ಹೆಚ್ಚಿಸಿಕೊಂಡರೆ, ಅದಕ್ಕೆಲ್ಲ ಸರ್ಕಾರ ಸೊಪ್ಪು ಹಾಕಲ್ಲ ಎಂದು ಸಚಿವರು ಉತ್ತರಿಸಿದರು. ಇದಕ್ಕೆ ಆಕ್ರೋಶಗೊಂಡ ಯತ್ನಾಳ ನ್ಯಾಯ್ಯಾಲಯದ ಆದೇಶಕ್ಕು ಬೆಲೆನೀಡುವುದಿಲ್ಲ ಎಂಬಂತಹ ಉತ್ತರ ಸರಿಯಲ್ಲ ಎಂದು ಸದನದಿಂದ ಹೊರನಡೆಯುವದಾಗಿ ಹೇಳಿ ನಿರ್ಗಮಿಸಿದರು.


