ಬಳ್ಳಾರಿ: ಸಂಡೂರು ತಾಲ್ಲೂಕಿನಲ್ಲಿ ಅಕ್ರಮ ಗ್ರ್ಯಾವೆಲ್ ಗಣಿಗಾರಿಕೆ ಅಬ್ಬರದಿಂದ ನಡೆಯುತ್ತಿದ್ದು ಕೋಟ್ಯಾಂತರ ರೂ. ನಷ್ಟಕ್ಕೆ ಸರ್ಕಾರ ಅನುಭವಿಸುತ್ತಿದೆ ಎಂದು ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತ ಹಾಗೂ ಜಿಲ್ಲಾ ಜಿಲ್ಲಾ ಉಪಾಧ್ಯಕ್ಷ ಜಿ.ಟಿ ಪೊಂಪಾಪತಿ ಆರೋಪಿಸಿದ್ದಾರೆ.
ಮೂಲಗಳ ಪ್ರಕಾರ, ಸರ್ಕಾರಿ ಜಮೀನುಗಳು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಅಕ್ರಮವಾಗಿ ಗ್ರ್ಯಾವೆಲ್ ತೆಗೆಯಲಾಗುತ್ತಿದ್ದು, ಇದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂ. ಆದಾಯ ನಷ್ಟವಾಗಿದೆ. ಮರಳು–ಅದಿರು ಕಳ್ಳಗಣಿಗಾರಿಕೆ ನಿಯಂತ್ರಿತವಾದ ನಂತರ ಈಗ ಸಂಡೂರಿನಲ್ಲಿ ಗ್ರ್ಯಾವೆಲ್ ದಂಧೆ ಜೋರಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಸಂಡೂರು ತಾಲೂಕಿನ
ಎರ್ರಯ್ಯನಹಳ್ಳಿ ಸರ್ವೇ ನಂ. 247 ರ ಸರ್ಕಾರಿ 200 ಎಕರೆ ಪ್ರದೇಶದಲ್ಲಿ 8–10 ಲಕ್ಷ ಮೆಟ್ರಿಕ್ ಟನ್ ಗ್ರ್ಯಾವೆಲ್ ಅಕ್ರಮವಾಗಿ ಲೂಟಿ ಮಾಡಲಾಗಿದೆ ಎಂದು ಸ್ಥಳೀಯರು ಹಾಗೂ ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಹಲವು ಪ್ರತಿಭಟನೆಗಳು ನಡೆದರೂ ಗಣಿಗಾರಿಕೆ ನಿಲ್ಲದಿರುವುದರಿಂದ ಸ್ಥಳೀಯರಲ್ಲಿ ಸ್ಥಳೀಯ ಮತ್ತು ಜಿಲ್ಲಾಡಳಿತದ ವಿರುದ್ಧ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಮೇಲೆ ಕಂಡಮಂಡಲರಾಗಿದ್ದಾರೆ. ಈ ಎಲ್ಲಾ ಅಕ್ರಮ ಗಣಿಗಾರಿಕೆ ಯ ಹಿಂದೆ
ಕಾಂಗ್ರೆಸ್ ಸರ್ಕಾರದ ಸಚಿವ ಸಂತೋಷ್ ಲಾಡ್, ಸಂಸದ ತುಕಾರಾಮ್, ಶಾಸಕಿ ಅನ್ನಪೂರ್ಣ ಹಾಗೂ ಅಧಿಕಾರಿಗಳ ಆಶ್ರಯದಲ್ಲಿ ನಡೆಯುತ್ತಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತ ಆರೋಪಿಸಿದರು. ಇದಕ್ಕೆ ಆ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳಾದ ಗಡದ್ ರಮೇಶ್, ಮಹೇಶ್ ಗೌಡ ಸೇರಿದಂತೆ ಅಲ್ಲಿನ ಪೊಲೀಸ್ ಇನ್ಸ್‌ಪೆಕ್ಟರ್ ಸಹಭಾಗಿತ್ವದ ಆರೋಪವೂ ಕೇಳಿ ಬಂದಿದೆ ಎಂದು ಅನುಮಾನವನ್ನು ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಹಗಲು ರಾತ್ರಿ ಎನ್ನದಂತೆ ಗ್ರಾವೆಲ್ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದಾರೆ ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ರಾಜಧನವನ್ನು ವಂಚಿಸಲಾಗುತ್ತದೆ ಎಂದ ಅವರು, ಇತ್ತೀಚೆಗೆ ತಾಲೂಕಿನಲ್ಲಿ ಗಣಿಗಾರಿಕೆ ಕಡಿಮೆ ಯಾದ್ದರಿಂದ ಪವನ ವಿದ್ಯುತ್ ಘಟಕಗಳಿಗೆ ರಸ್ತೆಯನ್ನು ಮಾಡಲು ಬೇಕಾಗುವ
ಅತ್ಯಂತ ಅವಶ್ಯಕವಾದ ಗ್ರಾವೆಲ್ ಗೆ ಬಂಗಾರದ ಬೆಲೆ ಬಂದಿದೆ ಈ ಗ್ರಾಮಲನ್ನು ಸಿಕ್ಕಸಿಕ್ಕಲ್ಲಿ ಅಗೆಯುವ ಮೂಲಕ ರಾಜಧನವನ್ನು ಸರ್ಕಾರಕ್ಕೆ ವಂಚಿಸಲಾಗುತ್ತಿದೆ ಎಂದರು. ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಇಂತಹ ಅಕ್ರಮ ಸಾಗಣೆಗಾರರ ಮೇಲೆ ದಾಳಿ ಮಾಡಿ ಕೇಸ್ ಗಳನ್ನು ದಾಖಲಿಸುತ್ತಾರೆ ಕಾಂಗ್ರೆಸ್ ಜನ ಪ್ರತಿನಿಧಿಗಳು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ತಂದು ಲಕ್ಷಾಂತರ ಮೆಟ್ರಿಕ್ ಟನ್ ಗರಸ ಲೂಟಿ ಮಾಡಿದರು ಸಹ ಕೇವಲ ಲಕ್ಷ್ಯಗಟ್ಟಲೆ ದಂಡ ಹಾಕುವಂತೆ ಕೇಸುಗಳನ್ನು ದಾಖಲಿಸಿದ್ದಾರೆ ಇಷ್ಟೆಲ್ಲಾ ಅಕ್ರಮಗಳು ತಾಲೂಕಿನ ಕಾಂಗ್ರೆಸ್ ಮುಖಂಡರ ಮೂಗಿನ ನೇರಕ್ಕೆ ನಡೆಯುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕರುಗಳ ಮೇಲೆ ಹರಿ ಹಾಯಿದರು.
ಈ ಸಂದರ್ಭದಲ್ಲಿ ಬಂಗಾರು ಹನುಮಂತು ಸೇರಿದಂತೆ ತಾಲೂಕಿನ ಹಲವು ಜನ ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿದ್ದರು.


