ಬೆಳಗಾವಿ – ಗಡಿನಾಡು ಕಾಗವಾಡದ ನಿವೃತ್ತ ಪ್ರಾಚಾರ್ಯ ಹಿರಿಯ ಸಾಹಿತಿ ಡಾ ಎಂ ಬಿ ಹೂಗಾರ ಇವರು ಬೆಳಗಾವಿಯ ಡಾ ಡಿ ಎಸ್ ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ ಡಾ ಡಿ ಎಸ್ ಕರ್ಕಿ ಕಾವ್ಯ ಪ್ರಶಸ್ತಿ -೨೦೨೫ ಕ್ಕೆ ಭಾಜನರಾಗಿದ್ದು ದಿನಾಂಕ ೧೬-೧೨-೨೦೨೫ ರ ಮಂಗಳವಾರರಂದು ಮುಂಜಾನೆ ೧೧ ಗಂಟೆಗೆ ಡಾ. ಡಿ. ಎಸ್. ಕರ್ಕಿಯವರ ೧೧೮ ನೇ ಜನ್ಮದಿನೋತ್ಸವವಾದ ಅಂಗವಾಗಿ ಕಾವ್ಯ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕರ್ಕಿಯವರ ಹುಟ್ಟೂರಾದ ರಾಮದುರ್ಗ ಹಿರೇಕೊಪ್ಪ ಕೆ. ಎಸ್. ದಲ್ಲಿರುವ
ಶ್ರೀ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಇಟ್ಟುಕೊಳ್ಳಲಾಗಿದೆ ಈ ಸಮಾರಂಭವು
ಶ್ರೀ ಮ. ಫ. ಚ. ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಇವರ ಸಮ್ಮುಖದಲ್ಲಿ ನಡೆಯುವದೆಂದು ಡಾ. ಡಿ. ಎಸ್. ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾಣ, ಬೆಳಗಾವಿ ಕಮೀಟಿ ವತಿಯಿಂದ ಹಾಗೂ ಹಿರೇಕೊಪ್ಪದಲ್ಲಿರುವ ಕರ್ಕಿ ಮನೆತನದ ಬಂದು ಬಳಗದವರಿಂದ ನಡೆಸಲಾಗುತ್ತಿದೆ ಎಂದು ಅಧ್ಯಕ್ಷ ಎಸ್ ಡಿ ಕರ್ಕಿ ಯವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ .
ಡಾ. ಎಂ ಬಿ ಹೂಗಾರ ಅವರಿಗೆ ಶಿವಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿಯ ಪರವಾಗಿ ಹೃದಯಪೂರ್ವಕ ಅಭಿನಂದನೆಗಳು


