ಮೂಡಲಗಿ : ವೇದ ಶಾಸ್ತ್ರ ಪುರಾಣಗಳು ಸದ್ಗುರು ಕೊಟ್ಟ ನಾಮೋಪದೇಶದಲ್ಲಿ ಅಡಗಿವೆ. ವಿಮಲ ಬ್ರಹ್ಮ ಎನ್ನುವುದು ಎಲ್ಲರ ಮೂಲ ಸ್ವರೂಪವಾಗಿದ್ದು, ಸದ್ಗುರುಗಳು ನೀಡಿದ ನಾಮೋಪದೇಶದಿಂದ ಎಲ್ಲರೂ ತಮ್ಮ ಮನಸ್ಸುಗಳನ್ನು ಹಿಡಿತದಲ್ಲಿರಿಸಿಕೊಳ್ಳಬಹುದು ಎಂದು ಪ್ರಭುಜೀ ಮಹಾರಾಜರು ಹೇಳಿದರು.
ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಹಳ್ಳೂರ ಗ್ರಾಮದ ಶ್ರೀ ಗಿರಿಮಲ್ಲೇಶ್ವರ ಆಶ್ರಮದಲ್ಲಿ ಕ್ರಾಂತಿಯೋಗಿ ಶ್ರೀ ಮಾಧವಾನಂದ ಪ್ರಭುಜೀಯವರ ಸ್ಮರಣಾರ್ಥ ಜರುಗಿದ ಸಪ್ತಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಗುರೂಜಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂಚಗೇರಿ ಮಠದ ಸಂಪ್ರದಾಯವು ೨೫ ಸಾವಿರಕ್ಕೂ ಅಧಿಕ ಅಂತರಜಾತಿ ವಿವಾಹ ಮಾಡಿಸಿ ಬಸವಾದಿ ತತ್ವವನ್ನು ಜೀವಂತವಾಗಿರಿಸಿದೆ, ಒಂದು ಜೋಡಿ ಕೂಡಾ ವಿಚ್ಛೇದನ ಆದ ಉದಾಹರಣೆಯಿಲ್ಲ. ಸಾಮಾನ್ಯ ವ್ಯಕ್ತಿಗೂ ಕೂಡಾ ಬ್ರಹ್ಮಜ್ಞಾನ ತಿಳಿಸಿದ ಶ್ರೇಷ ಸಂಪ್ರದಾಯ ಇಂಚಗೇರಿ ಮಠ ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ, ಕಾವ್ಯಶ್ರೀ ಅಮ್ಮನವರು, ನೂರಜಹಾನ್ ತಾಯಿಯವರು, ಅರವಿಂದ ವಕೀಲರು, ಶ್ರೀಮಂತ ಮಹಾರಾಜರು, ಮಾರುತಿ ಶರಣರು ವೇದಿಕೆಯಲ್ಲಿದ್ದು ಮಾತನಾಡಿದರು. ಮಂಗಳಾರತಿ, ಪು?ವೃಷ್ಟಿ, ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು. ಗ್ರಾಮದ ಮುಖಂಡರು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.
“ವೇದ ಶಾಸ್ತ್ರ ಪುರಾಣಗಳು ಸದ್ಗುರು ಕೊಟ್ಟ ನಾಮೋಪದೇಶದಲ್ಲಿ ಅಡಗಿವೆ”


