ರನ್ನ ಬೆಳಗಲಿ:ಡಿ.೮.,ಮುಧೋಳ ತಾಲೂಕಿನ ಗುಲಗಾಲಜಂಬಗಿ ಗ್ರಾಮದಲ್ಲಿ ಶನಿವಾರ ದಂದು ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ರನ್ನ ಬೆಳಗಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಈ ನೃತ್ಯದಲ್ಲಿ ನೀಲಮ್ಮ ರಾಮದುರ್ಗ,ಸೃಷ್ಟಿ ಬಿಸನಾಳ, ಪ್ರಿಯಾಂಕಾ ಕಾಳವ್ವಗೋಳ,ಚೈತ್ರಾ ಮೆಳ್ಳಿಗೇರಿ,ಪೂರ್ವಿ ಬಡಿಗೇರ,ಸುಕನ್ಯಾ ಹುಲಗೇರಿ ನೃತ್ಯಕ್ಕೆ ಹೆಜ್ಜೆ ಹಾಕಿದರು ಇವರಿಗೆ ಗಾಯನದಲ್ಲಿ ರಂಜಿತಾ ಗೋನ್ಯಾಗೋಳ,ಕಾವೇರಿ ಸರವಿ,ಪೂರ್ವಿ ಶಿರೋಳ,ಚೆತನ್ಯ ಭಜಂತ್ರಿ ಹಾಗೂ ಅಕ್ಷತಾ ರಾಮದುರ್ಗ ಸಾತ್ ನೀಡಿದ್ದು, ಮಲ್ಲಿಕಾರ್ಜುನ ಗಾಜಾರ ತಭಲಾ ವಾದನ ಮಾಡಿದನು.
ಈ ತಂಡಕ್ಕೆ ಮಾರ್ಗದರ್ಶನ ನೀಡಿದ ಶಿಕ್ಷಕರಾದ ಜಿ. ಹೆಚ್. ಗಾಜಾರ,ವಿಲಾಸ ಎಣ್ಣಿ ಅವರಿಗೆ ವಿಜೇತಗೊಂಡ ವಿದ್ಯಾರ್ಥಿಗಳಿಗೆ.ಪ್ರಾಚಾರ್ಯ ಎಮ್. ವಿ.ಸೊಪ್ಪಿಮಠ,ನಿಲಯಪಾಲಕರಾದ ಕೆ ಎಸ್ ಉಳ್ಳಾಗಡ್ಡಿ,ರಾಹುಲ್ ಸಾಗರ, ಎಮ್ ಬಿ ತೇರದಾಳ,ಶೃತಿ ಪೊಲೀಸನವರ,ಶಿಲ್ಪಾ ಹಾರೂಗೇರಿ,ಸುರೇಶ ಮುದಕನ್ನವರ,ಕಾಂತು ಕಲಶೆಟ್ಟಿ,ಜಿ ಎಂ ಮಠಪತಿ, ಶಿವಶಂಕರಯ್ಯ ವೀರಕ್ತಮಠ, ಯಲ್ಲಪ್ಪ ಶಿರಗಾಂವಿ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಿಬ್ಬಂದಿಗಳು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.


