ಮಠಗಳ ಸೇವಾ ಕಾರ್ಯ ಸರ್ಕಾರಕ್ಕೆ ಸ್ಫೂರ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Hasiru Kranti
ಮಠಗಳ ಸೇವಾ ಕಾರ್ಯ ಸರ್ಕಾರಕ್ಕೆ ಸ್ಫೂರ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now
ಬೆಳಗಾವಿ:- ಕರ್ನಾಟಕದ ಮಠಾದೀಶರು, ಮಠಗಳು ತ್ರಿವಿಧ ದಾಸೋಹಗಳನ್ನು ಆರಂಭಿಸುವ ಮೂಲಕ‌ ಸರ್ಕಾರಕ್ಕೆ ಸ್ಫೂರ್ತಿಯಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿಯ ಶಿವಬಸವ ನಗರದಲ್ಲಿರುವ ನಾಗನೂರು ರುದ್ರಾಕ್ಷಿಮಠದ ಡಾ.ಶಿವಬಸವ ಮಹಾಸ್ವಾಮಿಗಳವರ 136ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ನಾನು ಮೊದಲಿನಿಂದಲೂ ಮಠಾಧೀಶರನ್ನು ಆಶಿರ್ವಾದದಿಂದ ಬೆಳೆದಿರುವೆ, ಈ ಮಠಕ್ಕೂ ನಮ್ಮ ಮನೆತನಕ್ಕೂ ನೂರಾರು ವರ್ಷಗಳ ಸಂಬಂಧ ಇದೆ ಎಂದರು.
ಸರ್ಕಾರಕ್ಕೆ ಸಮಾನವಾಗಿ ಸಾಮಾಜಿಕ ಕೆಲಸ ಕಾರ್ಯಗಳನ್ನು ನಮ್ಮ ಶ್ರೀಮಠಗಳು ಮಾಡುತ್ತಿವೆ. ಅಕ್ಷರ ದಾಸೋಹ, ಅನ್ನ, ಆರೋಗ್ಯ ದಾಸೋಹ ಗಳನ್ನು ಸರ್ಕಾರ ಕಾಪಿ ಮಾಡುತ್ತಿವೆ. ಮಠಗಳ ಕೆಲಸವೇ ಸರ್ಕಾರಕ್ಕೆ ಸ್ಫೂರ್ತಿಯಾಗಿದೆ‌ ಎಂದರು.
ನಾಗನೂರು ಮಠದ ಹಿರಿಯ ಶ್ರೀಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ಸಾಗುತ್ತಿದ್ದೇವೆ‌. ಕರ್ನಾಟಕ ಏಕೀಕರಣಕ್ಕೆ ಅವರ ಕೊಡುಗೆ ಅಪಾರ, ಸ್ವಾತಂತ್ರ್ಯ ಹೋರಾಟದಲ್ಲೂ ಅವರ ಶ್ರಮ ಸಾಕಷ್ಟಿದೆ.  ಸಮಾಜದ ಮಗಳು ಎನ್ನುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸಮಾಜ ಯಾವ ಕಡೆಗೆ ಸಾಗುತ್ತಿದೆ ಎಂಬುದನ್ನು ನಾವು ನೋಡಬೇಕು. ಜಾತ್ಯಾತೀತ ನಿಲುವಿನ ಮೇಲೆ ನಾವು ನಿಲ್ಲಬೇಕು, ಧರ್ಮದಿಂದ ಜೀವನ ನಡೆಸಬೇಕು. ಆಧ್ಯಾತ್ಮಿಕ ಗುರುಗಳ ಚಿಂತನೆಗಳನ್ನು ನಾವು ಅಳವಡಿಸಿಕೊಳ್ಳಬೇಕು. ಮಠದ ಕೆಲಸ ಕಾರ್ಯಗಳಿಗೆ ಸದಾ ಬೆಂಬಲಿಸುವೆ, ಸರ್ಕಾರದ ವತಿಯಿಂದ ಯಾವುದೇ ಕೆಲಸಗಳಿದ್ದರೂ ಮಾಡಿಕೊಡುವೆ ಎಂದರು.
ಹೆಣ್ಣು ಮಕ್ಕಳಿಗೆ ಪ್ರೋತ್ಸಾಹಿಸುವ ಕೆಲಸವನ್ನು ಮಠಗಳು ಮಾಡುತ್ತಿದೆ. ಕಸದಲ್ಲೂ ರಸ ತೆಗೆಯುವ ಕೆಲಸವನ್ನು ಮಹಿಳೆಯರು ಮಾಡುತ್ತಾರೆ. ಹೆಣ್ಣು, ಗಂಡು ಎನ್ನುವ ಭೇದಭಾವ ಈಗ ಇಲ್ಲ ಎಂದು ಹೇಳಿದರು.
ಈ ವೇಳೆ ಗದಗದ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಪೂಜ್ಯಶ್ರೀ ಮನ್ನಿರಂಜನ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಧಾರವಾಡದ ಮುರುಘಾಮಠದ ಡಾ.ಮಲ್ಲಿಕಾರ್ಜುನ ‌ಮಹಾಸ್ವಾಮಿಗಳು, ಬೆಟ್ಟದಪುರದ ಸಲೀಲಾಖ್ಯ ವಿರಕ್ತಮಠದ ಚನ್ನಬಸವ ದೇಶಿಕೇಂದ್ರ ಮಹಾಸ್ವಾಮಿಗಳು,   ಅಲ್ಲಮ ಪ್ರಭು ಮಹಾಸ್ವಾಮಿಗಳು, ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮಿಗಳು, ಎಫ್. ಪಿ.ಡಬ್ಲ್ಯೂ ಟೆಕ್ನಾಲಜೀಸ್ನ ಸಹ ಸಂಸ್ಥಾಪಕರಾದ ಡಾ.ಬಸನಗೌಡ ಪಾಟೀಲ, ವಿಟಿಯು ಕುಲ ಸಚಿವರಾದ ಡಾ.ಪ್ರಸಾದ್ ರಾಂಪೂರೆ, ಸೇವಾರತ್ನ ಪ್ರಶಸ್ತಿ ಪುರಸ್ಕೃತರಾದ ಬಸಲಿಂಗಣ್ಣ ವಣ್ಣೂರ, ಕಾವೇರಿ ಕಿಲಾರಿ, ಬಾಳಪ್ಪ ದೊಡ್ಡಬಂಗಿ, ಚನ್ನಪ್ಪ ನರಸಣ್ಣವರ ಮೊದಲಾದವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article