ಬಳ್ಳಾರಿ. ಡಿ., ೦8:- ಆಶಾ ಕಾರ್ಯಕರ್ತೆಯರು ೨೦೦೮-೨೦೦೯ನೇ ಸಾಲಿನಿಂದ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿಗೆ ಕೆಲವೇ ಸಾವಿರ ಸಂಖ್ಯೆಯಲ್ಲಿ ಇದ್ದ ಈ ಕಾರ್ಯಕರ್ತೆಯರ ಸಂಖ್ಯೆ ಕೆಲವೇ ವರ್ಷಗಳಲ್ಲಿ ೪೨,೦೦೦ಕ್ಕೂ ಹೆಚ್ಚಿನ ಸಂಖ್ಯೆಗೆ ಏರಿತು. ಅಲ್ಲಿಂದ ಇಲ್ಲಿಯವರೆಗೂ ಕಳೆದ ೧೮ ವರ್ಷಗಳಿಂದ ಗ್ರಾಮೀಣ ಮತ್ತು ನಗರ ಪ್ರದೇಶದ ಕುಟುಂಬಗಳ ತಾಯಿ-ಮಗು ಹಾಗೂ ಜನ ಸಾಮಾನ್ಯರಿಗೆ ಸರ್ಕಾರದಎಲ್ಲಾಆರೋಗ್ಯ ಸೌಲಭ್ಯಗಳನ್ನು ದೊರಕಿಸಿ ಕೊಡುವಲ್ಲಿಅವರು ಪ್ರಮುಖಪಾತ್ರ ವಹಿಸುತ್ತಾ ಬಂದಿದ್ದಾರೆ. ಮಾರಣಾಂತಿಕ ಸಾಂಕ್ರಾಮಿಕ ಕೊರೋನಾ ಹರಡಿದ ಸಂದರ್ಭದಲ್ಲಿ ಅವರು ನೀಡಿರುವ ಅನನ್ಯ ಸೇವೆಯನ್ನು ಯಾರೂ ಮರೆಯಲಾಗದು ಮತ್ತು ಈಗಲೂ ಅಮೂಲ್ಯ ಸೇವೆ ನೀಡುತ್ತಿದ್ದಾರೆಎಂದುಎಲ್ಲರಿಗೂ ತಿಳಿದಿದೆ.
ಕಳೆದ ೧೭ ವರ್ಷಗಳ ಹಿಂದೆಚಟುವಟಿಕೆಆಧಾರಿತ ಪ್ರೋತ್ಸಾಹಧನ ನೀಡುವುದಾಗಿ ಸೇವೆಗೆ ನೇಮಿಸಿಕೊಂಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಾವಾಗಿಯೇಏನನ್ನೂಕೊಡಲಿಲ್ಲ ಮತ್ತು ವರ್ಷ ವರ್ಷ ಪ್ರೋತ್ಸಾಹಧನ ಹೆಚ್ಚಿಸಲಿಲ್ಲ. ಆಶಾ ಕಾರ್ಯಕರ್ತೆಯರು ಪ್ರತಿ ವರ್ಷವೂ ಪದೇ ಪದೇಕೇಂದ್ರ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಸಂಘರ್ಷಕ್ಕೆ ಇಳಿದು ಇಲಾಖೆ ಮೇಲೆ ಒತ್ತಡ ಹೇರಿ ಪ್ರೋತ್ಸಾಹಧನ, ಗೌರವ ಧನಗಳೂ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆದಿದ್ದಾರೆ.
ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಮಾಡುವ ವಿವಿಧ ಚಟುವಟಿಕೆಗಳನ್ನು ಆನ್ಲೈನ್ ಪೋರ್ಟಲ್‌ಒಂದಕ್ಕೆಅಪ್ಲೋಡ್ ಮಾಡಿದ ನಂತರ ಪಿಎಚ್ ಸಿ ಯಿಂದಆರAಭವಾಗಿತಾಲೂಕುಜಿಲ್ಲೆ ಮತ್ತುರಾಜ್ಯ ಮಟ್ಟದವರೆಗೂ ವಿವಿಧ ಹಂತಗಳಲ್ಲಿ ದೃಢೀಕರಣಗೊಂಡುಅವರಿಗೆ ಬರುವ ಪ್ರೋತ್ಸಾಹಧನ ಮಾಡಿರುವ ಚಟುವಟಿಕೆಗಳಿಗಿಂತಲೂ ತುಂಬಾತುAಬಾಕಡಿಮೆ ಬರುತ್ತಿತ್ತು. ಕೆಲಸ ಮಾಡಿದಷ್ಟು ಹಣ ಬರುತ್ತಿಲ್ಲವೆಂದು ಹಲವಾರು ವರ್ಷಗಳಿಂದ ದೂರಿದರೂ ಇಲಾಖೆ ಅದನ್ನು ಸರಿಪಡಿಸಲಿಲ್ಲ. ಆದ್ದರಿಂದಕೇAದ್ರ ಸರ್ಕಾರ ನೀಡುವ ಪ್ರೋತ್ಸಾಹಧನ ಹಾಗೂ ರಾಜ್ಯ ಸರ್ಕಾರ ನೀಡುವ ಮಾಸಿಕ ನಿಶ್ಚಿತ ಗೌರವಧನ ರೂ.೫,೦೦೦ ಎರಡು ಹಣವನ್ನುಒಟ್ಟಿಗೆ ಸೇರಿಸಿದರೆ ಅಂದಾಜು ಮಾಸಿಕ ರೂ.೧೫,೦೦೦ ಗಳಷ್ಟು ಆಗುತ್ತಿದ್ದು, ಅದನ್ನು ನಿಶ್ಚಿತ ರೂಪದಲ್ಲಿ ನೀಡಬೇಕೆಂದು ಕೇಳುತ್ತಿದ್ದೇವೆ. ಹಲವಾರು ವರ್ಷಗಳಿಂದ ಪದೇ ಪದೇ ಮನವಿ ಪತ್ರಗಳನ್ನು ಸಲ್ಲಿಸಿ ಒತ್ತಾಯಿಸುತ್ತಿದ್ದರೂ ಸರ್ಕಾರ ಪರಿಗಣಿಸುತ್ತಿಲ್ಲ.
ಆದ್ದರಿಂದ, ಈ ಹೋರಾಟದ ಮುಂದುವರಿಕೆಯಾಗಿ ೨೦೨೫ರ ಜನವರಿ ೭ ರಿಂದಅಹೋರಾತ್ರಿ ಪ್ರತಿಭಟನೆಯನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮತ್ತೊಮ್ಮೆ ಸಂಘಟಿಸಲಾಯಿತು.ರಾಜ್ಯದ ೪೦,೦೦೦ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದ ಆ ಹೋರಾಟ ನಾಲ್ಕು ದಿನಗಳ ಕಾಲ ಹಗಲು-ರಾತ್ರಿ ನಡೆಯಿತು. ನಾಲ್ಕನೇ ದಿನ ಆಶಾ ಸಂಘದ ಪದಾಧಿಕಾರಿಗಳ ಜೊತೆಯಲ್ಲಿ ಮಾತನಾಡಿದ ಮಾನ್ಯ ಮುಖ್ಯಮಂತ್ರಿಶ್ರೀ ಸಿದ್ದರಾಮಯ್ಯನವರು ಸಂಘವು ಮುಂದಿಟ್ಟ ಬೇಡಿಕೆಗಳನ್ನು ಕೇಳಿಸಿಕೊಂಡು, ಹೋರಾಟದಲ್ಲಿಎತ್ತಿದ ಪ್ರಧಾನ ಬೇಡಿಕೆಯಂತೆ ಮಾಸಿಕ ರೂ.೧೫,೦೦೦ ಕೊಡಲುಆಗುತ್ತಿಲ್ಲ, ಆದರೆ “ರಾಜ್ಯ ಸರ್ಕಾರದ ಮಾಸಿಕ ನಿಶ್ಚಿತ ಗೌರವಧನ ರೂ.೫,೦೦೦ ಜೊತೆಗೆಕೇಂದ್ರ ಸರ್ಕಾರದ ಭಾಗಶಃ ಪ್ರೋತ್ಸಾಹಧನಗಳನ್ನು ಸೇರಿಸಿ, ಅಗತ್ಯ ಬಿದ್ದರೆರಾಜ್ಯ ಸರ್ಕಾರದಿಂದಇನ್ನಷ್ಟು ಹಣ ನೀಡಿ ಮಾಸಿಕ ರೂ.೧೦,೦೦೦ ಪ್ರತಿ ಆಶಾ ಕಾರ್ಯಕರ್ತೆಯರಿಗೆ ಲಭಿಸುವಂತೆ ಮಾಡುತ್ತೇವೆ” ಎಂದು ಭರವಸೆಯನ್ನು ನೀಡಿದರು. ಇದಕ್ಕೂ ಹೆಚ್ಚಿನ ಕೆಲಸ ಮಾಡುವಕಾರ್ಯಕರ್ತೆಯರಿಗೆಇನ್ನೂ ಹೆಚ್ಚಿನ ಪ್ರೋತ್ಸಾಹಧನ ನೀಡಲಾಗುತ್ತದೆಎಂದು ಮಾತುಕತೆಯಾಗಿತ್ತು.ಇತರ ಬೇಡಿಕೆಗಳ ಕುರಿತು ಮುಂದಿನ ಕೆಲವೇ ದಿನಗಳಲ್ಲಿ ಸಭೆಕರೆದು ನಿರ್ಣಯ ಮಾಡುವುದಾಗಿ ಭರವಸೆ ನೀಡಿದ್ದರು.ಈ ಭರವಸೆಯಿಂದಾಗಿ ಅಂದಿನ ಅನಿರ್ದಿಷ್ಟ ಹೋರಾಟವನ್ನು ಹಿಂಪಡೆಯಲಾಯಿತು.
ಆಶಾ ಕಾರ್ಯಕರ್ತೆಯರಿಗೆ ಭರವಸೆ ನೀಡಿದಂತೆ ಮಾಸಿಕ ರೂ.೧೦,೦೦೦ ಗೆ ಲಿಖಿತಆದೇಶ ಮಾಡಬೇಕುಎಂದು ಕಳೆದ ೧೧ ತಿಂಗಳುಗಳಿAದ ಆರೋಗ್ಯ ಇಲಾಖೆ, ಮುಖ್ಯಮಂತ್ರಿಗಳ ಕಚೇರಿಅಲೆದಾಡಲಾಯಿತು ಮತ್ತು ಹಲವಾರು ಸಂದರ್ಭಗಳಲ್ಲಿ ಪ್ರತಿಭಟನೆಗಳನ್ನೂ ಮಾಡಲಾಯಿತು, ಎಲ್ಲಾ ಸಂದರ್ಭಗಳಲ್ಲಿ ಬೇಡಿಕೆಈಡೇರಿಸುತ್ತೇವೆಎಂದು ಸರ್ಕಾರ ಮತ್ತುಇಲಾಖೆಯಿಂದ ಹೇಳುತ್ತಿದ್ದರೂ ಇಲ್ಲಿಯವರೆಗೂ ಸರ್ಕಾರದಆದೇಶ ಆಗಲಿಲ್ಲ.ಇದು ಸರ್ಕಾರದ ವಿಳಂಬ ಧೋರಣೆಯಾಗಿದ್ದು, ಇದನ್ನು ಸಂಘವು ಖಂಡಿಸುತ್ತದೆ.
ಇಷ್ಟು ದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿರುವ ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ರೂ.೧೦,೦೦೦ ನೀಡುವುದು ಸರ್ಕಾರದಕನಿಷ್ಟ ಪರಿಹಾರಕ್ರಮವಾಗಿದೆ. ಈ ಕುರಿತುಕೂಡಲೇಆದೇಶ ಮಾಡಬೇಕು.ಹಾಗೆಯೇಜೊತೆಗೆಕೇಂದ್ರ ಸರ್ಕಾರದಿಂದ ಹಲವಾರು ಕಾಂಪೋನೆAಟ್ಗಳ ಪ್ರೋತ್ಸಾಹಧನ ಜೂನ-ಜೂಲೈ-೨೦೨೫ ರಲ್ಲಿ ಹೆಚ್ಚಳ ಮಾಡಿರುತ್ತಾರೆ. ಈ ಪ್ರೋತ್ಸಾಹಧನವನ್ನು ಮಾನ್ಯಆರೋಗ್ಯ ಸಚಿವರಾದ ಶ್ರೀ ದಿನೇಶ್‌ಗುಂಡೂರಾವ್‌ಅವರು ಕಳೆದ ಅಧಿವೇಶನದಲ್ಲಿಅಕ್ಟೋಬರ್‌ಯಿಂದಕೇAದ್ ರದಿAದ ಹೆಚ್ಚಳವಾದ ಹಣಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲದಿದ್ದರೂರಾಜ್ಯದಿಂದ ಪ್ರೋತ್ಸಾಹಧನವನ್ನು ನೀಡುವುದಾಗಿ ತಿಳಿಸಿರುತ್ತಾರೆ.ಇದೂ ಸಹ ಕೂಡಲೇ ಬಿಡುಗಡೆಆಗಬೇಕಾಗಿದೆ.ಕೇಂದ್ರ ಸರ್ಕಾರ ಹೆಚ್ಚಿಸಿರುವ ರೂ.೧,೫೦೦ಪ್ರೋತ್ಸಾಹಧನವನ್ನುಕೂಡಲೇ ನೀಡಲುಕ್ರಮವಹಿಸಬೇಕು.
ಆಶಾ ಸುಗಮಕಾರರನ್ನು ಸೇವೆಯಿಂದ ಬಿಡುಗಡೆ ಮಾಡಿರುವುದರಿಂದ ಚಟುವಟಿಕೆಗಳಿಗೆ ಧಕ್ಕೆಯಾಗುತ್ತಿದ್ದುಅವರನ್ನು ಸೇವೆಗೆ ಸೇರಿಸಿಕೊಳ್ಳಬೇಕು ಎನ್ನುವ ಬೇಡಿಕೆಯೂ ಸೇರಿದಂತೆ ಈ ಕೆಳಗಿನ ಇತರ ಬೇಡಿಕೆಗಳನ್ನು ಈಡೇರಿಸಿ ಇದೀಗ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪ್ರಕಟಣೆ ಮಾಡಬೇಕೆಂದು ಸರ್ಕಾರ ಮತ್ತುಇಲಾಖೆಯನ್ನು ಒತ್ತಾಯಿಸಿ, ಡಿ.೧೦ರಂದು ಬೆಳಗಾವಿಯ ಸುವರ್ಣಸೌಧದ ಮುಂದೆ ಬೃಹತ್ ಹೋರಾಟವನ್ನು ನಡೆಸಲು ನಿರ್ಧರಿಸಲಾಗಿದೆ. ಈ ಕೆಳಕಂಡ ಸರ್ಕಾರ ಭರವಸೆ ನೀಡಿದ ಬೇಡಿಕೆಗಳ ಈಡೇರಿಕೆಗೆ ಸಂಘದ ರಾಜ್ಯ ಸಮಿತಿಯಿಂದ ಆಗ್ರಹಿಸಿದೆ. ಹಾಗೆಯೇರಾಜ್ಯ ಆಶಾ ಕಾರ್ಯಕರ್ತೆಯರು ಎಂದಿನAತೆಒಗ್ಗಟ್ಟಿನಿAದ ಹೋರಾಟಕ್ಕೆ ಮುಂದಾಗಬೇಕೆAದು ಈ ಮೂಲಕ ಕರೆ ನೀಡಿದೆ.
ಸಂಘದ ಜಿಲ್ಲಾ ಗೌರವಾಧ್ಯಕ್ಷ ಎ.ಶಾಂತಾ, ಬಳ್ಳಾರಿ ನಗರದ ಅಧ್ಯಕ್ಷ ರೇಷ್ಮಾ, ಮುಖಂಡರಾದ ಖೈರೂನ್ ಬೀ, ಶಿವಕುಮಾರಿ, ರೇಣುಕಾ, ಶ್ರೀದೇವಿ ಉಪಸ್ಥಿತರಿದ್ದರು.


