ಕೃಷ್ಣ ಮೃಗಗಳ ಸಾವಿಗೆ ಸಾಂಕ್ರ್ರಾಮಿಕ ರೋಗ ಕಾರಣ: ಈಶ್ವರ ಖಂಡ್ರೆ

Hasiru Kranti
ಕೃಷ್ಣ ಮೃಗಗಳ ಸಾವಿಗೆ ಸಾಂಕ್ರ್ರಾಮಿಕ ರೋಗ ಕಾರಣ: ಈಶ್ವರ ಖಂಡ್ರೆ
WhatsApp Group Join Now
Telegram Group Join Now

ಬೆಳಗಾವಿ ಸುವರ್ಣಸೌಧ,ಡಿ.೦೮ : ಬೆಳಗಾವಿಯ ಭೂತರಾಮನ ಹಟ್ಟಿಯಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ೩೦ ಕೃಷ್ಣ ಮೃಗಗಳು ಮೃತಪಡಲು ಸಾಂಕ್ರಾಮಿಕ ರೋಗವೇ ಕಾರಣ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಅವರು ವಿಧಾನ ಪರಿಷತ್ ನಲ್ಲಿ ಸದಸ್ಯ ತಳವಾರ್ ಸಾಬಣ್ಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.
ಕೃಷ್ಣ ಮೃಗಗಳು ’ಹೆಮರಾಜಿಕ್ ಸೆಫ್ಟಿಸೆಮಿಯಾ’ ಸಾಂಕ್ರಾಮಿಕ ರೋಗದಿಂದ ಮರಣ ಹೊಂದಿರುವುದು ಪ್ರಯೋಗಾಲಯದ ದೃಢಪಟ್ಟಿರುವುದರಿಂದ, ಮೇಲ್ನೋಟಕ್ಕೆ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ ಕಂಡುಬಂದಿರುವುದಿಲ್ಲ ಎಂದರು.
ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣ ಮೃಗಗಳು ಮೃತಪಟ್ಟ ಪ್ರಕರಣದಲ್ಲಿ, ಪ್ರಾಣಿ ಆರೋಗ್ಯ ಮತ್ತು ಪಶುವೈದ್ಯ ಜೈವಿಕ ಸಂಸ್ಥೆ, ತಂಡವು ಹೆಬ್ಬಾಳ, ಬೆಂಗಳೂರು ಇಲ್ಲಿಂದ ನುರಿತ ಪಶುವೈದ್ಯಾಧಿಕಾರಿ ಹಾಗೂ ತಜ್ಞರ ಮೃಗಾಲಯಕ್ಕೆ ಭೇಟಿ ನೀಡಿ ಮೃತ ಪ್ರಾಣಿಗಳನ್ನು ಪರಿಶೀಲಿಸಿದ್ದು, ಸಾವಿನ ಕಾರಣ ಪತ್ತೆ ಹಚ್ಚಲು ಮೃತಪಟ್ಟ ಪ್ರಾಣಿಗಳ ಮಾದರಿಯನ್ನು  ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಮೃಗಾಲಯದಲ್ಲಿರುವ ಬೇರೆ ಪ್ರಾಣಿಗಳಿಗೆ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಒಟ್ಟು ೩೮ ಕೃ?ಮೃಗಗಳಲ್ಲಿ ೩೧ ಪ್ರಾಣಿಗಳು ಮೃತಪಟ್ಟಿದ್ದರು, ಉಳಿದ ೭ ಕೃಷ್ಣಮೃಗಗಳನ್ನು ಎಲ್ಲಾ ಮುನ್ನಚ್ಚರಿಕೆ ಕ್ರಮಗಳೊಂದಿಗೆ ಸಂರಕ್ಷಿಸಲಾಗಿದೆ.
ಮೃಗಾಲಯದಲ್ಲಿ ’ಹೆಮರಾಜಿಕ್ ಸೆಪ್ಟಿಸೆಮಿಯಾ’ ಸಾಂಕ್ರಮಿಕ ರೋಗ ಹರಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ / ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧೀನದಲ್ಲಿರುವ ಎಲ್ಲಾ ಮೃಗಾಲಯಗಳ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

WhatsApp Group Join Now
Telegram Group Join Now
Share This Article