ಹುಕ್ಕೇರಿ : ತಾಲೂಕಿನ ಸಾರಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ಪಿಕೆಪಿಎಸ್)ದ ನೂತನ ಅಧ್ಯಕ್ಷರಾಗಿ ಶಂಕರ ಬಡಗಾಂವಿ, ಉಪಾಧ್ಯಕ್ಷೆಯಾಗಿ ಜಿನ್ನವ್ವಾ ಮಗದುಮ್ಮ ಅವರು ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ಸೋಮವಾರ ಈ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ೨೦೨೫ ರಿಂದ ೨೦೩೦ರ ಐದು ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಂಕರ ಬಡಗಾಂವಿ, ಉಪಾಧ್ಯಕ್ಷೆಯಾಗಿ ಜಿನ್ನವ್ವಾ ಮಗದುಮ್ಮ ಅವರು ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ತಲಾ ಒಂದೊಂದೆ ನಾಮಪತ್ರ ಸಲ್ಲಿಕೆಯಾದ ಹಿನ್ನಲೆಯಲ್ಲಿ ಎರಡೂ ಸ್ಥಾನಗಳು ಅವಿರೋಧ ಆಯ್ಕೆಯಾಗಿವೆ ಎಂದು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಪ್ರಥಮ ದರ್ಜೆ ಸಹಾಯಕರೂ ಆದ ಚುನಾವಣಾಧಿಕಾರಿ ಸತೀಶ ಮುಸಂಡಿ ಘೋಷಿಸಿದರು. ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ, ಶಾಸಕ ನಿಖಿಲ್ ಕತ್ತಿ ಅವರ ಮಾರ್ಗದರ್ಶನದಲ್ಲಿ ಈ ಎರಡೂ ಹುದ್ದೆಗಳಿಗೆ ಅವಿರೋಧ ಆಯ್ಕೆ ನಡೆಯಿತು.
ಬಳಿಕ ನೂತನ ಅಧ್ಯಕ್ಷ ಶಂಕರ ಬಡಗಾಂವಿ ಮಾತನಾಡಿ, ತಮ್ಮ ನೇತೃತ್ವದ ಅಧಿಕಾರವಧಿಯಲ್ಲಿ ರೈತರ ಜೀವನಾಡಿ ಎನಿಸಿರುವ ಈ ಸಂಸ್ಥೆಯ ಏಳಿಗೆಗೆ ಶ್ರಮಿಸಲಾಗುವುದು. ರೈತರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಪ್ರತಿಯೊಬ್ಬ ಸದಸ್ಯ ರೈತರಿಗೆ ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ಜೊತೆಗೆ ನೂತನ ಯೋಜನೆಗಳನ್ನು ಜಾರಿಗೊಳಿಸಲು ಆಡಳಿತ ಮಂಡಳಿ ಮತ್ತು ಹಿರಿಯರ ಸೂಕ್ತ ಸಲಹೆ ಸೂಚನೆ, ಸಿಬ್ಬಂದಿಗಳ ಪಾರದರ್ಶಕ ಸೇವೆಯಿಂದ ಸಂಸ್ಥೆಯನ್ನು ಆರ್ಥಿಕವಾಗಿ ಮತ್ತುಷ್ಟು ಸದೃಢಗೊಳಿಸಲಾಗುವುದು ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಜಿ.ಪಾಟೀಲ, ನಿರ್ದೇಶಕರಾದ ಎಸ್.ಎಂ.ಪಾಟೀಲ, ರಾಜೇಂದ್ರ ಕಂಠಿಕರ, ಜಿನ್ನಪ್ಪಾ ಹೆಬ್ಬಾಳ, ದಾದಾ ಮಗದುಮ್ಮ, ಅಣ್ಣಪ್ಪಾ ಗುಡದಿ, ಕಾಂಚನಾ ಮದಕರಿ, ಪದ್ಮಶ್ರೀ ಬೆಳವಿ, ರಾಯಪ್ಪಾ ಬಾಗಿ, ಚಂದ್ರಪ್ಪಾ ಕಾಂಬಳೆ, ಮುಖಂಡರಾದ ಸತ್ಯಪ್ಪಾ ಹಾಲಟ್ಟಿ, ಪಾರೇಶ ಬೆಳವಿ, ಪುಟ್ಟು ಚೌಗಲಾ, ರಾಮಗೊಂಡ ಹೆಬ್ಬಾಳ, ಪಾಂಡು ಗುಡದಿ, ರವಿ ಕಾಂಬಳೆ, ಪುಂಡಲೀಕ ಹಾಲಟ್ಟಿ, ಮಹಾವೀರ ಮಗದುಮ್ಮ, ಸುರೇಶ ಬೆಳವಿ, ವಾಸುದೇವ ಹಾಲಟ್ಟಿ, ನೇಮಣ್ಣಾ ತಂಗಡಿ, ಪ್ರಕಾಶ ಪಾಟೀಲ, ರಾಜು ಬಡಗಾಂವಿ, ಪ್ರವೀಣ ಚೌಗಲಾ, ಮಲ್ಲಪ್ಪಾ ಚೌಗಲಾ, ಮುಖ್ಯ ಕಾರ್ಯನಿರ್ವಾಹಕ ಸಿದ್ದಪ್ಪ ಮಗದುಮ್ಮ, ಸಿಬ್ಬಂದಿಗಳಾದ ಸಂತೋಷ ಹಟ್ಟಿ, ಬಸವರಾಜ ಬಾಗಿ ಮತ್ತಿತರರು ಉಪಸ್ಥಿತರಿದ್ದರು.
ಫೋಟೊ ಶೀರ್ಷಿಕೆ : ೮ಎಚ್‌ಯುಕೆ-೧
ಹುಕ್ಕೇರಿ ತಾಲೂಕಿನ ಸಾರಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಂಕರ ಬಡಗಾಂವಿ, ಉಪಾಧ್ಯಕ್ಷೆ ಜಿನ್ನವ್ವಾ ಮಗದುಮ್ಮ ಅವರನ್ನು ಸನ್ಮಾನಿಸಲಾಯಿತು.


