ನೇಸರಗಿ :- ಕಳೆದ 2 ವರ್ಷ 5 ತಿಂಗಳಿನಿಂದ ಕಿತ್ತೂರು ಮತಕ್ಷೇತ್ರದಲ್ಲಿ ಜನರ ಅಶೋತ್ತರಗಳಿಗೆ ತಕ್ಕಂತೆ ಕೆಲಸ ಕಾರ್ಯಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಮುಂದೆ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡುತ್ತೇನೆ ಎಂದು ಚನ್ನಮ್ಮನ ಕಿತ್ತೂರು ಮತಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ದಿ. 4-12-2025 ರಂದು ಸಮೀಪದ ಕ್ಷೇತ್ರದ ಯರಗೋಪ್ಪ ಗ್ರಾಮದ ಸಿ ಸಿ ರಸ್ತೆ ನಿರ್ಮಾಣ ಕಾಮಗಾರಿ, ನಾಗನೂರ ಗ್ರಾಮದ ಸಿ ಸಿ ರಸ್ತೆ ನಿರ್ಮಾಣ ಕಾಮಗಾರಿ, ಹಣಬರಹಟ್ಟಿ ಗ್ರಾಮದ ಸಿ ಸಿ ರಸ್ತೆ ಕಾಮಗಾರಿ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ, ಗಜಮನಾಳ ಗ್ರಾಮದ ಮಹರ್ಷಿ ವಾಲ್ಮೀಕಿ ಅದಿವಾಸಿ ಬುಡಕಟ್ಟು ವಸತಿ ಶಾಲೆಗೆ 180 ಲಕ್ಷ ರೂಪಾಯಿಗಳ ಅನುಧಾನದಲ್ಲಿ ಭೋಜನಾಲಯ ಹಾಗೂ ಅಡುಗೆ ಕೊಣೆ ನಿರ್ಮಾಣ ಕಾಮಗಾರಿ, ಹೊಸಕೋಟಿ ಗ್ರಾಮದ ಮಹರ್ಷಿ ವಾಲ್ಮೀಕಿ ಅಧಿವಾಸಿ ಬುಡಕಟ್ಟು ವಸತಿ ಶಾಲೆಗೆ 200 ಲಕ್ಷ ರೂಪಾಯಿಗಳ ಅನುಧಾನದಲ್ಲಿ ಭೋಜನಾಲಯ ಮತ್ತು ಅಡುಗೆ ಕೋಣೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಸಚಿನ ಪಾಟೀಲ, ಹಣಬರಹಟ್ಟಿ ಗ್ರಾ ಪಂ ಅಧ್ಯಕ್ಷ ಶ್ರೀಮತಿ ಸುನಂದಾ ಉಳವಿ, ಬಸಪ್ಪ ಕೋತ, ಜಿನಪ್ಪ ಬಿಲ್, ರಮೇಶ ಉಳವಿ, ಬಸವಂತಪ್ಪ ಗೌಡರ, ಮಲ್ಲೇಶ ಎಲಿಗಾರ, ಸಾತಪ್ಪ ಚೌಗುಲಾ, ಕಾಶಿಮ್ ಜಮಾದಾರ, ಬಸವರಾಜ ಚಿಕ್ಕನಗೌಡ್ರ, ಆನಂದ ಕೊದಾನಪುರ, ಬಸಪ್ಪ ನಾಯ್ಕರ, ಲಕ್ಕಪ್ಪ ತಳವಾರ, ಬಸಪ್ಪ ದೊಡ್ಡಲಿಂಗನ್ನವರ, ಮಲ್ಲಪ್ಪ ಬನ್ನೂರ,ರಮೇಶ ಬೀರಗಡ್ಡಿ, ಈರಪ್ಪ ಬೀರಗಡ್ಡಿ, ಸಂತೋಷ ಉಳವಿ, ಮಲ್ಲಪ್ಪ ಹೊಸೂರ, ಬಸವಣ್ಣಿ ಚಿಕ್ಕೊಪ್ಪ, ಮಲ್ಲಪ್ಪ ದಂಡಾಪುರ, ಮಲ್ಲಪ್ಪ ಮಿಜ್ಜಿ, ದ್ಯಾಮಣ್ಣ ಮುಂಡಗಿ, ಮಹಾದೇವ ಕೆಳಗಿನಮನಿ, ಗಜಾನನ ಮಾಡಮಗೇರಿ, ಲಕ್ಷ್ಮಣ ಕೆಳಗಿನಮನಿ, ಈರಪ್ಪ ಹಂಚಿನಮನಿ ಸೇರಿದಂತೆ ಯರಗುದ್ದಿ, ನಾಗನೂರ, ಹಣಬರಹಟ್ಟಿ, ಗಜಿಮನಾಳ, ಹೊಸಕೋಟಿ ಗ್ರಾಮದ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.


