“ಸಾಮಾಜಿಕ ಶಿಕ್ಷಣವೆಂಬುದು ಮಠಮಾನ್ಯಗಳ ಮುಖ್ಯ ಧ್ಯೇಯ”

Hasiru Kranti
“ಸಾಮಾಜಿಕ ಶಿಕ್ಷಣವೆಂಬುದು ಮಠಮಾನ್ಯಗಳ ಮುಖ್ಯ ಧ್ಯೇಯ”
WhatsApp Group Join Now
Telegram Group Join Now
ಶಾರದಾ ವಿದ್ಯಾಪೀಠ ಪ್ರೌಢಶಾಲೆಯ 32ನೇ ಶಾಲಾ ವಾರ್ಷಿಕೋತ್ಸವ
 ಬಳ್ಳಾರಿ. ಡಿ. 04.  ಶಾರದಾ ಪೀಠದ  ಈ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದಾಸರಿಗೆ ಸಮರ್ಪಣೆ ಮಾಡಲು ದಾಸೋತ್ಸವ ಎಂಬ ಹೆಸರಿನಿಂದ ಇಂದು ಶಾಲೆಯ ವಾರ್ಷಿಕೋತ್ಸವವನ್ನು ನಡೆಸಲಾಗುತ್ತಿದೆ ಎಂದು ಶಾಲೆಯ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥಸ್ವಾಮೀಜಿ ತಿಳಿಸಿದರು.
 ಅವರು ನಗರದ ಸತ್ಯನಾರಾಯಣ ಪೇಟೆಯಲ್ಲಿರುವ ಶ್ರೀ ಶಾರದಾ ವಿದ್ಯಾಪೀಠ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಾಮಾಜಿಕ ಶಿಕ್ಷಣವೆಂಬುದು ಮಠಮಾನ್ಯಗಳ ಮುಖ್ಯ ಧ್ಯೇಯವಾಗಿರುತ್ತದೆ ಅದೇ ಪ್ರಕಾರವಾಗಿ ಶ್ರೀ ಶಾರದಾ ವಿದ್ಯಾಪೀಠವು ಬಡ ಮಕ್ಕಳಿಗೆ ಮತ್ತು ಸಮಾಜದ ಶೈಕ್ಷಣಿಕ ಅಭಿವೃದ್ಧಿಗಾಗಿ ಶಿಕ್ಷಣವು ಅತ್ಯಂತ ಅಗತ್ಯವಾಗಿದೆ ಎಂದರು.
 ಇಂದು ಬೆಳಗ್ಗೆ  ಸ್ವಾಮೀಜಿಯವರು ಮಕ್ಕಳಿಗೆ ಬಹುಮಾನ ವಿತರಣೆ ಮಾಡಿ ಆಶೀರ್ವಚನ ನೀಡಿದರು. ಶಾಲೆಯ ಉಪಾಧ್ಯಕ್ಷರಾದ. ಡಾ. ನಾಗರತ್ನ  ಹಾಗೂ ಆಡಳಿತ ಮಂಡಳಿಯ ಸದಸ್ಯರೆಲ್ಲರೂ ಸೇರಿ ಬೆಳಗಿನ ಕಾರ್ಯಕ್ರಮವನ್ನು ಸಾಂಗವಾಗಿ ನೆರವೇರಿಸಿಕೊಟ್ಟರು.  ಸಂಜೆ ಸ್ವಾಮೀಜಿಯವರು ಹಾಗೂ ಎಸ್.ಎನ್. ಪೇಟೆ, 19ನೇ ವಾರ್ಡಿನ ಕಾರ್ಪೊರೇಟರ್ ಆದ ಡಾ॥ ಕೆ.ಎಸ್. ಅಶೋಕ್ ಕುಮಾರ್‌ರವರು ದೀಪ ಬೆಳಗುವದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸ್ವಾಮೀಜಿಯವರು 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ  ಮಾಡಿದರು. ಹಾಗೂ ಜೋನಲ್  ಲೆವೆಲ್ ಮತ್ತು ತಾಲ್ಲೂಕ್‌ ಲೆವೆಲ್ ಆಟದಲ್ಲಿ ಪ್ರಥಮ ಬಹುಮಾನಗಳಿಸಿದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು.
 ನಂತರ ಸ್ವಾಮೀಜಿಯವರು ಮಕ್ಕಳಿಗೆ ಹಿತವಚನವನ್ನು ಹೇಳಿದರು ಮಕ್ಕಳೆಲ್ಲ ದಾಸರು ರಚಿಸಿದ ಹಾಡುಗಳಿಗೆ ನೃತ್ಯವನ್ನು ಮಾಡಿ ಎಲ್ಲರನ್ನೂ ಮನರಂಜಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು, ಉಪಾಧ್ಯಕ್ಷರಾದ ನಾಗರತ್ನ, ಆಡಳಿತ ಮಂಡಳಿಯ ಸದಸ್ಯರುಗಳು,ಮುಖ್ಯೋಪಾಧ್ಯಾಯರಾದ ಕವಿತಾ ವಾದಿರಾಜ್, ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು ಮಕ್ಕಳ ಪೂಷಕರು ಪಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article