ಮರಳು ಸಾಗಣೆ ಮತ್ತು 10 ಚಕ್ರದ ಲಾರಿ ಮಾಲೀಕರ ಸಂಘ ಉದ್ಘಾಟನೆ 

Hasiru Kranti
ಮರಳು ಸಾಗಣೆ ಮತ್ತು 10 ಚಕ್ರದ ಲಾರಿ ಮಾಲೀಕರ ಸಂಘ ಉದ್ಘಾಟನೆ 
WhatsApp Group Join Now
Telegram Group Join Now
ಬಳ್ಳಾರಿ. ಡಿ. 05 ನಗರದ ದೇವಿ ನಗರ ಮುಖ್ಯ ರಸ್ತೆಯಲ್ಲಿರುವ ಕುರುಬರ ಸಂಘದ ವಾಣಿಜ್ಯ ಸಂಕೀರ್ಣದಲ್ಲಿ ಇಂದು ವಿದ್ಯುಕ್ತವಾಗಿ ಬಳ್ಳಾರಿ ಜಿಲ್ಲಾ ಮರಳು ಸಾಗಣಿಕೆ ಮತ್ತು ಹತ್ತು ಚಕ್ರದ ಲಾರಿ ಮಾಲೀಕರ ಸಂಘದ ಕಚೇರಿಯನ್ನು ಉದ್ಘಾಟಿಸಲಾಯಿತು.
 ಸಂಘದ ಜಿಲ್ಲಾಧ್ಯಕ್ಷರಾಗಿ ಕೆ ಮೋಹನ್ ದಾರದ್ ಮಿಲ್ ಇವರು ಆಯ್ಕೆಯಾಗಿರುತ್ತಾರೆ, ಜಿಲ್ಲಾ ಉಪಾಧ್ಯಕ್ಷರಾಗಿ ಪಿಜಿ ಸುಧಾಕರ್ ನಾಯಕ್ ಸಿ. ರಮೇಶ್  ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಖಜಾಂಚಿಯಾಗಿ ಬಿ ಪರಶುರಾಮ್, ಸಹ ಕಾರ್ಯದರ್ಶಿಯಾಗಿ ಕೆ ಲಿಂಗಮೂರ್ತಿ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀರಾಮುಲು ವಿ, ಕಾನೂನು ಸಲಹೆಗಾರರಾಗಿ ವಕೀಲರಾದ ಕೆ ವೇಣುಗೋಪಾಲ್ ಆಯ್ಕೆಯಾಗಿದ್ದಾರೆ.
 ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಕೆ ಮೋಹನ್, ಮರಳು ಸಾಗಣಿಕೆ ಲಾರಿಗಳಿಗೆ ಸುಖ ಸುಮ್ಮನೇ ಪೊಲೀಸರು ಸೇರಿದಂತೆ ಸಾರ್ವಜನಿಕರು ಕೂಡ ನಗರದಲ್ಲಿ ಓಡಾಡದಂತೆ ಅಡ್ಡಿಪಡಿಸುತ್ತಿದ್ದಾರೆ ಇದರಿಂದ ನಮಗೆ ನಗರಕ್ಕೆ ಮತ್ತು ಹೊರವಲಯದಲ್ಲಿ ಮರಳು ಸಾಗಾಣಿಕೆ ಮಾಡಲು ನಮ್ಮ ವಾಹನಗಳಿಗೆ ತುಂಬಾ ತೊಂದರೆಯಾಗುತ್ತಿದೆ ಇದರಿಂದ ನಾವು ಮಾನಸಿಕ ಕಿರಿಕಿರಿಯೊಂದಿಗೆ ನಷ್ಟವನ್ನು ಹೊಂದುತ್ತಿದ್ದೇವೆ , ಸದ್ಯ ಪರಿಸ್ಥಿತಿಯಲ್ಲಿ ನಮ್ಮ ಲಾರಿಗಳ ಈಎಂಐ ಕಟ್ಟಲು ಸಹ ಸಂಕಷ್ಟ ಪರಿಸ್ಥಿತಿ ಎದುರಾಗಿದೆ ಇದನ್ನು ಅರಿತ  ನಾವೆಲ್ಲರೂ ಒಮ್ಮತದಿಂದ ಇಂತಹ ಸಮಸ್ಯೆಯನ್ನು ಪರಿಹರಿಸಿಕೊಳ್ಳಲಿಕ್ಕಾಗಿ ಬಳ್ಳಾರಿ ಜಿಲ್ಲಾ ಮರಳು ಸಾಗಾಣಿಕೆ ಮತ್ತು ಹತ್ತು ಚಕ್ರದ ಲಾರಿ ಮಾಲೀಕರ ಸಂಘವನ್ನು ಆರಂಭಿಸಿ ನೋಂದಣಿ ಮಾಡಿಕೊಂಡಿರುತ್ತೇವೆ ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಮರಳು ಸಾಗಾಣಿಕೆ ಮತ್ತು ಅತ್ಯು ಚಕ್ರ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಸೇರಿದಂತೆ ಇತರರಿದ್ದರು.
WhatsApp Group Join Now
Telegram Group Join Now
Share This Article