Pratibha Boi
Oplus_131072
WhatsApp Group Join Now
Telegram Group Join Now

ರಾಮದುರ್ಗ: ಮಹಿಳಾ ಸಬಲೀಕರಣಕ್ಕಾಗಿ ಸರಕಾರ ಅನೇಕ ವಿನೂತನ ಯೋಜನೆಗಳನ್ನು ರೂಪಿಸಿದ್ದು, ಸ್ವ ಉದ್ಯೋಗ ಮಾಡುವ ಮೂಲಕ ಹೆಚ್ಚಿನ ಆದಾಯ ಪಡೆದು ಆರ್ಥಿಕವಾಗಿ ಸದೃಢವಾಗಬೇಕೆಂದು ಒಕ್ಕೂಟದ ಅಧ್ಯಕ್ಷೆ ಅನುತಾ ಹಿರೇಮಠ ಹೇಳಿದರು.
ತಾಲೂಕಿನ ಸುನ್ನಾಳ ಗ್ರಾಮದಲ್ಲಿ ತಾ.ಪಂ ಎನ್.ಆರ್.ಎಲ್.ಎಂ ಯೋಜನೆಯಿಂದ ಹಮ್ಮಿಕೊಂಡ ಸಂಜೀವಿನಿ ಮಾಸಿಕ ಸಂತೆ ವಸ್ತಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾ.ಪಂ ಸದಸ್ಯ ಲಿಂಬನಗೌಡ ಪಾಟೀಲ ಮಾತನಾಡಿ, ಗ್ರಾಮೀಣ ಸ್ವ ಸಹಾಯ ಸಂಘಗಳ ಮೂಲಕ ಮಹಿಳೆಯರು ತಯಾರಿಸಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರ ಗಮನ ಹರಿಸಬೇಕೆಂದು ಮನವಿ ಮಾಡಿದರು.
ಪಿ.ಡಿ.ಓ ಬಲರಾಮ ಲಮಾಣಿ ಮಾತನಾಡಿ, ಪಂಚಾಯತಿ ಮಟ್ಟದಲ್ಲಿ ಸಾಕಷ್ಟು ಸ್ವಸಹಾಯ ಸಂಘಗಳನ್ನು ರಚನೆಯಾಗಿದ್ದು, ಉತ್ತಮ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಮಟ್ಟದಲ್ಲಿ ಪಂಚಾಯತಿಗಳ ಮೂಲಕ ಗ್ರಾಮೀಣ ಸಂತೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವ್ಯವಹಾರಿಕ ಪರಿಕಲ್ಪನೆಯನ್ನು ತಿಳಿಸಲಾಗುತ್ತಿದೆ ಎಂದರು.
ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರದ ಸಮಾಲೋಚಕ ಮಲ್ಲಿಕಾರ್ಜುನರಡ್ಡಿ ಗೊಂದಿ ಮಾತನಾಡಿ, ಸಾಮಾಜಿಕ ಸುರಕ್ಷಾ ವಿಮಾ ಯೋಜನೆ, ಕೆನರಾ ಬ್ಯಾಂಕ್ ಕ್ಯಾನರ್ ಕೇರ್ ಅಕೌಂಟ ಹಾಗೂ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾ.ಪಂ ಅಧ್ಯಕ್ಷೆ ರತ್ನವ್ವ ಮಾಳಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ.ಪಂ ಸದಸ್ಯರಾದ ಹನಮಂತ ಕೋಟಗಿ, ಹನಮಂತ ಕುಲಗೋಡ, ಫಕೀರಪ್ಪ ಬನ್ನೂರ, ಗಂಗೂಬಾಯಿ ಮಡ್ಡಿ, ಮಹಾದೇವಪ್ಪ ಕುಲಗೋಡ, ಶಂಕರಗೌಡ ಪಾಟೀಲ, ತಾ.ಪಂ ಸಿಬ್ಬಂದಿಗಳಾದ ಪ್ರಶಾಂತ ಮುಶಿ, ರೂಪಾಶ್ರೀ ಪಾಟೀಲ, ಪೂರ್ಣಿಮಾ ಭಾವಿಕಟ್ಟಿ, ಪವನ ಪೋಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಶೃತಿ ಕುಲಗೋಡ ಸ್ವಾಗತಿಸಿದರು. ನೀಲಮ್ಮ ಕಾಯಿ ನಿರೂಪಿಸಿದರು. ಮಹಾದೇವಿ ನರಗುಂದ ವಂದಿಸಿದರು.

WhatsApp Group Join Now
Telegram Group Join Now
Share This Article