ಅಥಣಿ: ೨೦೨೫-೨೬ನೇ ಸಾಲಿನ ರಾಜ್ಯ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಹ್ಯಾಂಡಬಾಲ್ ಪಂದ್ಯಾವಳಿಗಳನ್ನು ಅಥಣಿ ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ೬, ೭ ಮತ್ತು ೮ ಡಿಸೆಂಬರ್ ೨೦೨೫ ರಂದು ಜರುಗಲಿರುವ ಎಂದು ಡಾ. ರಾಮ ಕುಲಕರ್ಣಿ ಹೇಳಿದರು
ಪಟ್ಟಣದ ಜೆ ಇ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಜೆ ಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ರಾಮ ಕುಲಕರ್ಣಿ ಅವರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಬೆಂಗಳೂರು. ಶಾಲಾ ಶಿಕ್ಷಣ ಇಲಾಖೆ (ಪದವಿ-ಪೂರ್ವ), ಶೈಕ್ಷಣಿಕ ಜಿಲ್ಲೆ, ಚಿಕ್ಕೋಡಿ ಹಾಗೂ ಶತಮಾನ ಕಂಡ, ಜಾಧವಜಿ ಶಿಕ್ಷಣ ಸಂಸ್ಥೆಯ ಜೆ. ಎ.ಸಂಯುಕ್ತ ಪದವಿ ಪೂರ್ವ ಕಾಲೇಜು, ಅಥಣಿ ಕಾಲೇಜು ಸಂಕೇತ ಡಿಸಿ-೦೦೨೮ ಇವರ ಸಂಯುಕ್ತಾಶ್ರಯದಲ್ಲಿ ೨೦೨೫-೨೬ ನೇ ಸಾಲಿನ ರಾಜ್ಯ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಹ್ಯಾಂಡಬಾಲ್ ಪಂದ್ಯಾವಳಿಗಳನ್ನು ಡಿ ೬, ೭ ಮತ್ತು ೮ ರಂದು ನಡೆಯಲಿದ್ದು, ಇದರಲ್ಲಿ ರಾಜ್ಯದ ಒಟ್ಟು ೬೬ ಪುರುಷ ಮತ್ತು ಮಹಿಳಾ ತಂಡಗಳು ಭಾಗಿಯಾಗಲಿದ್ದು, ೬೬ ಜನ ಟೀಂ ಮ್ಯಾನೇಜರಗಳು ಹಾಗೂ ೪೦ ಜನ ರಾಜ್ಯ ಮಟ್ಟದ ನಿರ್ಣಾಯಕರು ಭಾಗಿಯಾಗಲಿದ್ದಾರೆ. ಉದ್ಘಾಟನಾ ಸಮಾರಂಭ ಡಿ.೦೬ ಸಂಜೆ ೦೫ ಗಂಟೆಗೆ ಭೋಜರಾಜ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಘನ ಉಪಸ್ಥಿತಿ ಲೋಕೋಪಯೋಗಿ ಸಚಿವರು, ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮುಖ್ಯ ಅತಿಥಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳಕರ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಅಧ್ಯಕ್ಷತೆ ಶಾಸಕ ಲಕ್ಷ್ಮಣ ಸವದಿ, ಅಶೋಕ ಮ. ಪಟ್ಟಣ ಸರ್ಕಾರಿ ಮುಖ್ಯ ಸಚೇತಕರು, ಭರಮಗೌಡ (ರಾಜು) ಅ. ಕಾಗೆ, ಅಧ್ಯಕ್ಷರು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಹುಬ್ಬಳ್ಳಿ ಹಾಗೂ ಶಾಸಕರು ಕಾಗವಾಡ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕ್ರೀಡಾಪಟುಗಳಿಗೆ ವಸತಿ ಹಾಗೂ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು
ಈ ವೇಳೆ ಚಿಕ್ಕೋಡಿ ಡಿಡಿಪಿಯು ಪಿ ಆಯ್ ಭಂಡಾರೆ, ಅಧ್ಯಕ್ಷರು ಕಾಲೇಜು ಅಭಿವೃದ್ದಿ ಸಮಿತಿಯ ಸಂದೀಪ ಸಂಗೋರಾಮ, ಸಂಚಾಲಕ ಮಂಡಳಿ ಸದಸ್ಯಯರಾದ ಆನಂದ ಟೊನಪಿ, ಅನೀಲ ದೇಶಪಾಂಡೆ, ಅಥರ್ವ ದೇಶಪಾಂಡೆ, ಆಡಳಿತ ಅಧಿಕಾರಿ ಉದಯಕುಮಾರ ಕೋಟಿವಾಲೆ, ಪಿ ಯು ಕಾಲೇಜು ಪ್ರಾಚಾರ್ಯ ಎಮ್ ಪಿ ಮೇತ್ರಿ, ದೈಹಿಕ ಶಿಕ್ಷಕ ಪ್ರಮೋದ ಪವಾರದೇಸಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
೨೦೨೫-೨೬ ನೇ ಸಾಲಿನ ರಾಜ್ಯ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಹ್ಯಾಂಡಬಾಲ್ ಪಂದ್ಯಾವಳಿ


