ರೋಟರಿ ಸಂಸ್ಥೆಯಿಂದ ರಕ್ತ ತಪಾಸಣಾ ಶಿಬಿರ

Pratibha Boi
ರೋಟರಿ ಸಂಸ್ಥೆಯಿಂದ ರಕ್ತ ತಪಾಸಣಾ ಶಿಬಿರ
WhatsApp Group Join Now
Telegram Group Join Now
ಜಮಖಂಡಿ: ಬಾಗಲಕೋಟೆಯ ಥೈರೋಕೇರ್ ಸರ್ವಿಸ್ ಸೆಂಟರ್‌ನ ಸಹಯೋಗದಲ್ಲಿ ಜಮಖಂಡಿ ರೋಟರಿ ಸಂಸ್ಥೆಯ ಆಶ್ರಯದಲ್ಲಿ ಭಾನುವಾರ ನಡೆದ ತಪಾಸಣೆಗಾಗಿ ರಕ್ತ ಸಂಗ್ರಹ ಶಿಬಿರದಲ್ಲಿ ೭೫ ಜನರು ತಮ್ಮ ರಕ್ತದ ಮಾದರಿಗಳನ್ನು ನೀಡಿದರು.
  ಇಲ್ಲಿನ ಕುಡಚಿ ರಸ್ತೆ ಪಕ್ಕದ ಡಾ.ಸನದಿ ಆಸ್ಪತ್ರೆಯಲ್ಲಿ ನಡೆದ ಶಿಬಿರದಲ್ಲಿ ಥೈರಾಯಿಡ್ ಮತ್ತು ಮಧುಮೇಹ ಪರೀಕ್ಷೆಗಾಗಿ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಥೈರೋಕೇರ್ ಬೆಂಗಳೂರು ಸಂಸ್ಥೆಗೆ ಕಳುಹಿಸಲಾಯಿತು.
  ಖಾಲಿ ಹೊಟ್ಟೆಯಲ್ಲಿ ರಕ್ತದ ಮಾದರಿಗಳನ್ನು ನೀಡುವಂತೆ ಮಾಹಿತಿ ನೀಡಲಾಗಿತ್ತು. ಬೆಳಿಗ್ಗೆ ೮ ರಿಂದ ೧೧ ಗಂಟೆ ವರೆಗೆ ರಕ್ತದ ಮಾದರಿಗಳ ಸಂಗ್ರಹ ಕಾರ್ಯ ನಡೆಯಿತು.
  ರಕ್ತ ತಪಾಸಣಾ ವರದಿಗಳನ್ನು ಮುಂದಿನ ಮೂರು ದಿನಗಳಲ್ಲಿ ತರಿಸಿಕೊಡಲಾಗುವುದು ಎಂದು ಸಂಘಟಕರು ತಿಳಿಸಿದರು. ರಕ್ತ ತಪಾಸಣಾ ವರದಿಗಳನ್ನು ಆದರ್ಶ ಪೆಥಾಲಾಜಿಕಲ್ ಲ್ಯಾಬ್‌ನಿಂದ ಪಡೆದುಕೊಳ್ಳಲು ಸೂಚಿಸಲಾಯಿತು.
  ರೋಟರಿ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಕೋವಳ್ಳಿ, ಕಾರ್ಯದರ್ಶಿ ಎಂ.ಎಚ್. ಕಡ್ಲಿಮಟ್ಟಿ, ಖಜಾಂಚಿ ಶಂಕರ ತೇಲಿ, ಎಸ್.ವೈ. ಬಿರಾದಾರ, ಪ್ರಶಾಂತ ಗತಾಡೆ, ರಮೇಶ ಗಿರಿಸಾಗರ, ಪ್ರವೀಣ ಝಾಡ, ಗೋಪಾಲಕೃಷ್ಣ ಪ್ರಭು, ಬಸವರಾಜ ಬಳಗಾರ, ಶಿಬಿರದ ಅಧ್ಯಕ್ಷ ಗಂಗಾಧರ ಮಠಪತಿ, ಕಾರ್ಯದರ್ಶಿ ಅಭಿಲಾಷ ಕೋವಳ್ಳಿ ಶಿಬಿರದ ಯಶಸ್ಸಿಗಾಗಿ ಶ್ರಮಿಸಿದರು.
WhatsApp Group Join Now
Telegram Group Join Now
Share This Article