ಸಂಡೂರು,01..: ಎನ್.ಎಂ.ಡಿ.ಸಿ ಪೆಲೆಟ್ ಪ್ಲಾಂಟ್ ಹಾಗೂ ಬೆನಿಫಿಕೇಷನ್ ಪ್ಲಾಂಟ್ ನ ಗುತ್ತಿಗೆ ಕಾರ್ಮಿಕರ ಹೋರಾಟ ೨ನೇ ದಿನಕ್ಕೆ ಕಾಲಿಟ್ಟಿದೆ.ಡಿ.೬ರಂದು ನಡೆಯುವ ಉನ್ನತ ಅಧಿಕಾರಿಗಳು, ಜನ ಪ್ರತಿನಿಧಿಗಳು ಹಾಗೂ ಯುನಿಯನ್ ಮುಖಂಡರುಗಳ ಸಭೆಯಲ್ಲಿ ಈ ಗುತ್ತಿಗೆ ಕಾರ್ಮಿಕರ ಭವಿಷ್ಯ ನಿರ್ಧಾರವಾಗಲಿದ್ದು, ಅಲ್ಲಿವರೆಗೂ ಸತತ ೯ ದಿನಗಳವರೆಗೂ ಹೋರಾಟ ಮುಂದುವರೆಯಲಿದೆ. ಶನಿವಾರದಂದು ನೂರಾರು ಕಾರ್ಮಿಕರು ಎನ್.ಎಂ.ಡಿ.ಸಿ ಮುಖ್ಯದ್ವಾರ ಮುಂಭಾಗ ಧರಣಿ ನಡೆಸಿದರು.
ಸಂಯುಕ್ತ ಗಣಿ ಕಾರ್ಮಿಕ ಸಂಘದ ಅಧ್ಯಕ್ಷರು, ಎಐಯುಟಿಯುಸಿ ರಾಜ್ಯ ಅಧ್ಯಕ್ಷ ಕೆ. ಸೋಮಶೇಖರ್ ಮಾತನಾಡುತ್ತಾ, ಕೆಲಸಕ್ಕೆ ಮರು ಸೇರಿಸಿಕೊಳ್ಳಬೇಕು ಎಂಬ ಗುತ್ತಿಗೆ ಕಾರ್ಮಿಕರ ಬೇಡಿಕೆ ಈಡೇರುವವರೆಗೂ ಒಗ್ಗಟ್ಟಿನಿಂದ ಹೋರಾಟ ಮುನ್ನಡೆಯಬೇಕು. ಯಾವುದೇ ಕಾರಣಕ್ಕೆ ಹೆಜ್ಜೆ ಹಿಂದೆ ಇಡುವಂತಿಲ್ಲ. ನಮ್ಮ ಬಲ ಹೆಚ್ಚುತ್ತಾ ಹೋಗಬೇಕು. ಎಲ್ಲರೂ ಒಂದು ಮಾತಿನ ಮೇಲೆ ನಿಲ್ಲಬೇಕು. ಹೋರಾಟವನ್ನು ದಾರಿ ತಪ್ಪಿಸುವ ಶಕ್ತಿಗಳ ಬಗ್ಗೆ ಎಚ್ಚರಿಕೆವಹಿಸಬೇಕು. ಹಾಗೆಯೇ ನಮ್ಮ ಗ್ರಾಮಸ್ಥರ ಬೆಂಬಲವನ್ನು ಪಡೆದುಕೊಳ್ಳುತ್ತಾ, ಹೋರಾಟವನ್ನು ಸರಿಯಾದ ದಿಕ್ಕಿನಡೆ ತೆಗೆದುಕೊಂಡು, ಗೆಲುವನ್ನು ಪಡೆದುಕೊಳ್ಳೋಣ” ಎಂದು ಕರೆ ನೀಡಿದರು. ಮುಖಂಡರಾದ ಎ.ದೇವದಾಸ್, ಡಾ.ಪ್ರಮೋದ್, ಸುರೇಶ್, ಹುಲಿಗೇಶ್, ಮಂಜುನಾಥ್, ಸಂತೋಷ್, ವೀರೇಶ್, ನಾಗೇಶ್, ಹುಲಿಯಪ್ಪ ಮುಂತಾದವರು ಉಪಸ್ಥಿತರಿದ್ದರು.


