ಬಳ್ಳಾರಿ,01. ಒರಿಸ್ಸಾ ರಾಜ್ಯದಲ್ಲಿ ಭೂ ಕಬಳಿಕೆ ವಿರುದ್ಧ ಹೋರಾಟ ನಡೆಸುತ್ತಿರುವ ಜೆಪಿಪಿ¬ಎಂ ನಾಯಕರರನ್ನು ಬಂಧಿಸಿರುವ ಬಿಜೆಪಿ ಸರ್ಕಾರದ ವಿರುದ್ಧ ನಗರದಲ್ಲಿನ ಸಂಘದ ಕಚೇರಿ ಮುಂದೆ ಎಐಕೆಕೆಎಂ¬ಎಸ್ ರೈತ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡುತ್ತಾ, ‘ಜಿಂದಾಲ್ ಪೋಸ್ಕೊ ವಿರೋಧಿ ಮಂಚ್’ ಜೆಪಿಪಿಎಂ ನ ಕಾರ್ಯದರ್ಶಿ ಕಾಮ್ರೇಡ್ ಬೆನುಧರ್ ಸರ್ದಾರ್ ಮತ್ತು ಇತರ ನಾಲ್ವರು ನಾಯಕರನ್ನು ತಕ್ಷಣವೇ ಬೇಷರತ್ತಾಗಿ ಬಿಡು ಗಡೆ ಮಾಡುವಂತೆ ಒತ್ತಾಯಿಸಿ ಎಐಕೆಕೆ-ಎಂಎಸ್ ರೈತ ಸಂಘಟನೆ ವತಿಯಿಂದ ಇಂದು ದೇಶವ್ಯಾಪಿ ಪ್ರತಿಭಟನೆ ನಡೆಸಲಾ ಗುತ್ತಿದೆ. ಜಿಂದಾಲ್ ಕಂಪನಿಗಾಗಿ ಒಪ್ಪಂದ ಮಾಡಿಕೊಂಡು ಬಡಜನರ ಮತ್ತು ಆದಿವಾಸಿಗಳು ಹಲವು ವರ್ಷಗಳಿಂದ ವಾಸಿಸುತ್ತಿರುವ ಜಮೀನನ್ನು ಬಿಜೆಪಿ ನೇತೃತ್ವದ ಒರಿಸ್ಸಾ ಸರ್ಕಾರವು ಕಬಳಿಸಲು ಮುಂದಾಗಿದೆ. ಹೀಗೆ ಬಡಜನರನ್ನು ಒಕ್ಕಲೆಬ್ಬಿಸುವ ಸರ್ಕಾರದ ಪ್ರಯತ್ನದ ವಿರುದ್ಧ ಒರಿಸ್ಸಾದ ಕಿಂ¬iೆÆÃAಜಾರ್ನಲ್ಲಿ ಇತ್ತೀಚೆಗೆ ಸುಮಾರು ೧೦ ಸಾವಿರಕ್ಕೂ ಹೆಚ್ಚು ಸ್ಥಳೀಯ ಜನ ಆದಿವಾಸಿ ಮತ್ತು ಬಡಜನರು ಬೀದಿಗಿಳಿದು ಪ್ರಚಂಡ ಹೋರಾಟವನ್ನು ನಡೆಸಿದ್ದರು. ಹೋರಾಟವು ತೀವ್ರಗೊಳ್ಳುತ್ತಿದ್ದಂತೆ ಈ ಹೋರಾಟವನ್ನು ಹತ್ತಿಕ್ಕಲು ನವೆಂಬರ್ ೨೬ರಂದು ರಾತ್ರಿ ಸುಮಾರು ೧.೦೦ ಗಂಟೆಗೆ ದೊಡ್ಡ ಪೊಲೀಸ್ ಪಡೆ ಪಟಾನಾ ಬ್ಲಾಕ್ನ ಜಮುನಾಪೋಸಿ ಗ್ರಾಮಕ್ಕೆ ಪ್ರವೇಶಿಸಿ ‘ಜಿಂದಾಲ್ ಪೋಸ್ಕೊ ವಿರೋಧಿ ಮಂಚ್’ ಜೆಪಿಪಿಎಂನ ಕಾರ್ಯದರ್ಶಿ ಕಾಮ್ರೇಡ್ ಬೆನುಧರ್ ಸರ್ದಾರ್ ಮತ್ತು ಚಳುವಳಿಯ ಇತರ ನಾಲ್ವರು ನಾಯಕರನ್ನು ಬಂಧಿಸಿದ್ದಾರೆ. ನಂತರ, ತಕ್ಷಣವೇ ಗ್ರಾಮದ ಜನರು ಎದ್ದು ಪೊಲೀಸ್ ಕಾರನ್ನು ಘೇರಾವ್ ಮಾಡಿದರು. ಇದರ ಪರಿಣಾಮವಾಗಿ ಪೊಲೀಸ್ ಪಡೆ ಜನರ ಮೇಲೆ ಲಾಠಿ ಚಾರ್ಜ್ ಮಾಡಿ ಅಲ್ಲಿಂದ ಓಡಿಹೋಯಿತು. ಸರ್ಕಾರದ ಇಂತಹ ಹೇಯ ಕೃತ್ಯವನ್ನು ಎಐಕೆಕೆಎಂಎಸ್ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದು ಎಐಕೆಕೆ¬ಎಂಎಸ್ ಜಿಲ್ಲಾಧ್ಯಕ್ಷ ಗೋವಿಂದ್ ತಿಳಿಸಿದರು.
ಬಂಡವಾಳಶಾಹಿಗಳ ಸೇವೆಗೆ ನಿಂತಿರುವ ಸರ್ಕಾರವು ಬಡಜನರ ಮತ್ತು ಆದಿವಾಸಿಗಳು ವಾಸಿಸುವ ಜಮೀನನ್ನು ಕಬಳಿಸುತ್ತಿರುವುದರ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಬಲಪಡಿಸಲು ಎಐಕೆಕೆಎಂ¬ಎಸ್ ಅಖಿಲ ಭಾರತ ಸಮಿತಿಯು ಇಂದು ದೇಶವ್ಯಾಪಿ ಪ್ರತಿಭಟನೆಗಳನ್ನು ನಡೆಸಲು ಕರೆ ನೀಡಿದೆ.
ಈ ಹಿನ್ನೆಲೆಯಲ್ಲಿ ಇಂದು ಬಳ್ಳಾರಿ ಸೇ¬ರಿದಂತೆ, ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿಯೂ ಸಂಘಟನೆಯಿAದ ಪ್ರತಿಭಟನೆಗಳನ್ನು ಸಂಘಟಿಸಲಾಗುತ್ತಿದೆ. ಹಾಗೂ ಈ ಕೆಳಗಿನ ಬೇಡಿಕೆಗಳಿಗಾಗಿ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ.
ಕೂಡಲೇ ಯಾವುದೇ ಷರತ್ತಿಲ್ಲದೆ ಜೆಪಿಪಿಎಂ ನ ಕಾರ್ಯದರ್ಶಿ ಕಾಮ್ರೇಡ್ ಬೆನುಧರ್ ಸರ್ದಾರ್ ಮತ್ತು ಇತರ ನಾಲ್ವರು ನಾಯಕರನ್ನು ಬಿಡುಗಡೆಗೊಳಿಸಬೇಕು. ಈ ಕೂಡಲೇ ಬಿಜೆಪಿ ನೇತೃತ್ವದ ಸರ್ಕಾರ ರೈತರಿಗೆ ಮಾರಕವಾಗಿರುವ ಈ ಭೂ ಸ್ವಾಧೀನತೆಯನ್ನು ಕೂಡಲೇ ಕೈ ಬಿಡಬೇಕು ಕಾರ್ಯದಶಿಘ ಗುರಳ್ಳಿರಾಜ ಆಗ್ರಹಿಸಿದರು
ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ರುದ್ರಯ್ಯ, ಹೊನ್ನೂರಸ್ವಾಮಿ, ವಿಜಯ್, ಗಾದಿಲಿಂಗ, ಹೊನ್ನೂರಪ್ಪ, ಗುರುಕಿರಣ್ ಮತ್ತಿತರರು ಇದ್ದರು.


