ಮುತ್ನಾಳ ಗ್ರಾಮದ ಕೇದಾರ್ ಶಾಖಾ ಪೀಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಲಿಂಗೈಕ್ಯರಾದ ಸುದ್ದಿ ಮನಸ್ಸಿಗೆ ಅತೀವ ನೋವು ತಂದಿದೆ.
ಪೂಜ್ಯರ ಅಗಲಿಕೆ ಕೇವಲ ಮುತ್ನಾಳ ಗ್ರಾಮಕ್ಕೆ ಮಾತ್ರವಲ್ಲದೆ, ಸಮಸ್ತ ಭಕ್ತ ಸಮೂಹಕ್ಕೆ, ಸಮಾಜಕ್ಕೆ ತುಂಬಲಾರದ ನಷ್ಟ. ಅವರ ಧಾರ್ಮಿಕ, ಹಾಗೂ ಸಾಮಾಜಿಕ ಸೇವೆಗಳು ಸರ್ವಕಾಲಕ್ಕೂ ಸ್ಮರಣೀಯ.
ಶ್ರೀಗಳ ತತ್ವ-ಸಿದ್ಧಾಂತಗಳು, ಧರ್ಮಸಭೆಗಳು, ಸರಳ ಜೀವನ ಮತ್ತು ಕಿರು ಪ್ರವಚನಗಳು ಸಾವಿರಾರು ಜನರಿಗೆ ದಾರಿದೀಪವಾಗಿದ್ದವು. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅಪಾರ ಭಕ್ತ ಸಮೂಹಕ್ಕೆ ಅಗಲಿಕೆ ನೋವು ಸಹಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.


