ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ಆರ್ಥಿಕ ಪ್ರಗತಿಗೆ ಸಹಕಾರಿ: ಸಚಿವ ಸತೀಶ್‌ ಜಾರಕಿಹೊಳಿ

Ravi Talawar
ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ಆರ್ಥಿಕ ಪ್ರಗತಿಗೆ ಸಹಕಾರಿ: ಸಚಿವ ಸತೀಶ್‌ ಜಾರಕಿಹೊಳಿ
WhatsApp Group Join Now
Telegram Group Join Now
ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ಆರ್ಥಿಕ ಪ್ರಗತಿಗೆ ಸಹಕಾರಿ: ಸಚಿವ ಸತೀಶ್‌ ಜಾರಕಿಹೊಳಿ
ಬೆಳಗಾವಿ: ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ಹೆಮ್ಮರವಾಗಿ ಬೆಳೆದಿದ್ದು, ಆರ್ಥಿಕ ಪ್ರಗತಿಗೆ ಸಹಕಾರಿಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.
ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ ಕಾರ್ಯ ಮತ್ತು ಪಾಲನಾ ಬೆಳಗಾವಿ ನಗರ ವಿಭಾಗ ಕಚೇರಿ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ಅನೇಕರಿಗೆ ಕೆಲಸ ನೀಡಿದ್ದು, ಈ ಸಂಸ್ಥೆ ಲಕ್ಷಾಂತರ ಕುಟುಂಬಗಳಿಗೆ ಜೀವನ ನಿರ್ವಹಣೆ ಮಾಡಲು ಅನುಕೂಲವಾಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ಉದ್ಯಮ ಸೇರಿದಂತೆ ಗ್ರಾಹಕರಿಗೆ ಸರಿಯಾಗಿ ವಿದ್ಯುತ್‌ ಪೂರೈಸುವ ಮೂಲಕ ಆರ್ಥಿಕ ಪ್ರಗತಿಗೆ ಮುನ್ನುಡಿಯಾಗಿದೆ. ಕೆಎಸ್‌ಆರ್‌ಟಿಸಿ, ವಿದ್ಯುತ್‌ ಸಂಸ್ಥೆಗಳ ಸಮಸ್ಯೆ  ನಿವಾರಣೆ ಆಗಲು ಸಾಧ್ಯವಿಲ್ಲ. ಇನ್ನು ಸಾರ್ವಜನಿಕರಿಂದಲೂ ಈ ಎರಡು ಸಂಸ್ಥೆಗಳು ಹೆಚ್ಚು ಟೀಕೆಗೆ ಒಳಪಡುತ್ತವೆ. ಆದರೆ ಎರಡು ಸಂಸ್ಥೆಗಳು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರಿಗೆ ಒಳ್ಳೆಯ ಸೇವೆ ಒದಗಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ ಅಧ್ಯಕ್ಷ ಸೈಯದ್‌ ಅಜೀಮಪೀರ್‌ ಎಸ್‌ ಖಾದ್ರಿ ಮಾತನಾ̧ಡಿ ಇಂದು ಬೆಳಗಾವಿ ನಗರದಲ್ಲಿ ಬೆಸ್ಕಾಂನಿಂದ ನಿರ್ಮಿಸಿದ ನೂನತ ಕಟ್ಟಡವನ್ನು ಸಚಿವ ಸತೀಶ್‌ ಜಾರಕಿಹೊಳಿ ಅವರಿಂದ ಉದ್ಘಾಟನೆಗೊಂಡಿದ್ದು ಸಂತಸ ತಂದಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಇಂಧನ ಸಚಿವ ಕೆ.ಜೆ. ಜಾರ್ಜ್‌, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಸೂಚನೆ ಮೇರೆಗೆ ನಾನು ಅಧಿಕಾರ ವಹಿಸಿಕೊಂಡ ನಂತರ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಬೆಸ್ಕಾಂ ಇಲಾಖೆ ಸದಾ ರೈತರ, ಗ್ರಾಹಕರ ಪರ ಇದೆ. ಬೇಸ್ಕಾಂ ಸಮರ್ಪಕ ವಿದ್ಯುತ್‌ ಕಲ್ಪಿಸಲು ಸದಾ ಸಿದ್ದವಿದೆ. ಆದ್ದರಿಂದ ಸಚಿವರಾದ ಸತೀಶ್‌ ಜಾರಕಿಹೊಳಿ ಅವರು ನಮ್ಮ ಇಲಾಖೆಗೆ ಹೆಚ್ಚಿನ ಅನುದಾನ ದೊರಕಲು ಅನುವು ಮಾಡಬೇಕೆಂದು ಮನವಿ ಮಾಡಿದರು.
ಇನ್ನು ಪವರ್‌ ಮ್ಯಾನ್‌ ಗಳು ಕಿಟ್ಟ ಧರಿಸಿ, ಸುರಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು. ಏಕೆಂದರೆ ನಿಮ್ಮ ಕುಟುಂಬ ನಿಮ್ಮ ಮೇಲೆ ಅವಲಂಬನೆ ಇರುತ್ತದೆ. ಕೆಲಸ ಎಷ್ಟು ಮುಖ್ಯಯೋ ಅಷ್ಟೇ ಜೀವವು ಮುಖ್ಯ. ಇಲಾಖೆಯಲ್ಲಿ ಯಾರು ಕೂಡ ನಿರ್ಲಕ್ಷದಿಂದ ಕಾರ್ಯ ನಿರ್ವಹಿಸಬಾರದು ಎಂದು ಸಲಹೆ ನೀಡಿದರು.
ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ಉದ್ಯಮ ಸೇರಿದಂತೆ ಗ್ರಾಹಕರಿಗೆ ಸರಿಯಾಗಿ ವಿದ್ಯುತ್‌ ಪೂರೈಸುವ ಮೂಲಕ ಆರ್ಥಿಕ ಪ್ರಗತಿಗೆ ಮುನ್ನುಡಿಯಾಗಿದೆ. ಬೇಸ್ಕಾಂನಿಂದ ಗ್ರಾಹಕರಿಗೆ ಇನ್ನಷ್ಟು ಸ್ನೇಹಮಹಿ ಸೇವೆ ದೊರಕಲು ಪ್ರಯತ್ನಿಸುತ್ತೇನೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಆಸೀಪ್‌ (ರಾಜು) ಸೇಠ್‌ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್‌ ಹಣುನ್ನವರ್‌, ಬೆಳಗಾವಿ ಬೂಡಾ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿಯ ಹಿರಿಯ ಅಧಿಕಾರಿಗಳಾದ ಚಂದ್ರಕಾಂತ ಪಾಟೀಲ್‌, ಶಿವಾಜಿ ಖರೆ, ತಿಪ್ಪಣ್ಣ ಮಾದರ, ಬಿ.ವೈ. ಹೊಳಿಗಾರ, ವಿನೋದ ಕರೂರ, ಪ್ರವೀಣಕುಮಾರ ಕೆ. ಚಿಕಡೆ, ಆರ್ೆಸ್.‌ ಸ್ವಾಜಿ, ಮನೋಹರ ಸುತ್ತಾರ, ವಿನೋದ ಕರೂರ ಸೇರಿದಂತೆ ಹಲವರು ಇದ್ದರು.
WhatsApp Group Join Now
Telegram Group Join Now
Share This Article