ರಾಯಬಾಗ: ರೈತರ ಆರ್ಥಿಕ ಸುಧಾರಣೆಗೆ ಸುವ್ಯವಸ್ಥಿತ ರಸ್ತೆಗಳ ಅಗತ್ಯವಿದ್ದು, ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಭಾನುವಾರ ತಾಲೂಕಿನ ನಾಗರಾಳ ಗ್ರಾಮದಲ್ಲಿ ಜಿ.ಪಂ.ಇಲಾಖೆಯಿಂದ ಮಂಜೂರಾದ 25 ಲಕ್ಷ ರೂ. ಅನುದಾನದಲ್ಲಿ ಗ್ರಾಮದ ಹನುಮಾನ ಮಂದಿರದಿಂದ ರೈಲ್ವೆ ಓವರ್ ಬ್ರಿಡ್ಜ್ ವರಗೆ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ರಾಯಬಾಗ ಗ್ರಾಮೀಣ ಭಾಗದ ಆನೇಬಾಯಿಕೊಡಿಯಲ್ಲಿ ಕುಡಚಿ ಜೆ.ಎಲ್.ಬಿ.ಸಿ ಇಲಾಖೆಯಿಂದ ಮಂಜೂರಾದ 20 ಲಕ್ಷ ರೂ.ಅನುದಾನದಲ್ಲಿ ರಾಯಬಾಗ ಹಂಚು ಕಾಲುವೆಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳನ್ನು ಸಕಾಲದಲ್ಲಿ ಮಾರುಕಟ್ಟೆಗೆ ತಲುಪಸಲು ಗುಣಮಟ್ಟದ ರಸ್ತೆಗಳ ಅಗತ್ಯವಿದೆ ಎಂದರು.
ಜಿ.ಪಂ.ಇಲಾಖೆ ಎಇ ಎಸ್.ಎಸ್.ಹೊಸಮನಿ, ಜೆ.ಎಲ್.ಬಿ.ಸಿ ಎಇಇ ಮಹ್ಮದ ಮುಸ್ತಾಫ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೇಮಲಾಪೂರೆ, ಅಪ್ಪಾಸಾಹೇಬ ಕೆಂಗನ್ನವರ, ಸತ್ಯಪ್ಪ ದಾವಣೆ, ಮಜ್ಜಿದ ಡಾಂಗೆ, ಗೋಪಾಲ ಕೊಚೆರಿ, ಅಸ್ಲಂ ಡಾಂಗೆ, ಅಣ್ಣಾಸಾಹೇಬ ಮಗದುಮ್ಮ, ಭೀಮು ಮುಧೊಳೆ, ರಾಜು ಚೌಗಲಾ, ಬಸು ಮಗದುಮ್ಮ, ರಾಜು ಐಹೊಳೆ,ಶಾಹುರ ಡಾಂಗೆ, ಸಲೀಂ ಡಾಂಗೆ, ದಾವುದ ಡಾಂಗೆ, ಅಯುಬ ಡಾಂಗೆ, ರಂಜಾನ ಮಕಾನದಾರ, ಅಬು ಡಾಂಗೆ ಸೇರಿ ಅನೇಕರು ಇದ್ದರು.
ಫೋಟೊ: 30 ರಾಯಬಾಗ 1
ಫೋಟೊ ಶೀರ್ಷಿಕೆ: ರಾಯಬಾಗ: ನಾಗರಾಳ ಗ್ರಾಮದ ಹನುಮಾನ ಮಂದಿರದಿಂದ ರೈಲ್ವೆ ಓವರ್ ಬ್ರಿಡ್ಜ್ ವರಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಎಮ್.ಐಹೊಳೆ ಚಾಲನೆ ನೀಡಿದರು. ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೇಮಲಾಪೂರೆ, ಅಪ್ಪಾಸಾಹೇಬ ಕೆಂಗನ್ನವರ, ಸತ್ಯಪ್ಪ ದಾವಣೆ, ಅಣ್ಣಾಸಾಹೇಬ ಮಗದುಮ್ಮ, ಭೀಮು ಮುಧೊಳೆ, ರಾಜು ಚೌಗಲಾ, ಬಸು ಮಗದುಮ್ಮ, ರಾಜು ಐಹೊಳೆ ಇದ್ದರು.


